ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ್‌ಕುಮಾರ್ ಹೆಗಡೆಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

|
Google Oneindia Kannada News

Recommended Video

ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟ ಅನಂತ್ ಕುಮಾರ್ ಹೆಗಡೆ

ಉತ್ತರ ಕನ್ನಡ, ಫೆಬ್ರವರಿ 20: ಯಾರು ಡಿಜಿಟಲ್ ಪೇಪರ್, ದಿನಪತ್ರಿಕೆ ಓದುತ್ತಾರೋ, ಟಿವಿ ನೊಡ್ತಾರೋ ಅವರ ತಲೆ ಹಾಳಾಗುತ್ತೆ ಹೀಗೆಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರು ಹೇಳಿದ್ದಾರೆ.

ಉತ್ತರ ಕನ್ನಡದ ಅಂಕೋಲಾದಲ್ಲಿ ಪಕ್ಷದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಾ ಅವರು ಈ ಮಾತನ್ನು ಹೇಳಿದ್ದಾರೆ. ಸಚಿವರೇ ಒಬ್ಬರು ದಿನಪತ್ರಿಕೆ ಓದಬೇಡಿ, ಟಿವಿ ಸುದ್ದಿಗಳನ್ನು ನೋಡಬೇಡಿ ಎಂದಿರುವುದು ವಿವಾದ ಹುಟ್ಟಿಸುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಸಚಿವರ ಹೇಳಿಕೆ ವಿರುದ್ಧ ಪೋಸ್ಟ್‌ ಹಾಕುತ್ತಿದ್ದಾರೆ.

ಹೇಳಿಕೆ ತಪ್ಪಾಗಿ ವರದಿ, ಚಾನೆಲ್ ವಿರುದ್ಧ ಕುಮಾರಸ್ವಾಮಿ ಬೇಸರಹೇಳಿಕೆ ತಪ್ಪಾಗಿ ವರದಿ, ಚಾನೆಲ್ ವಿರುದ್ಧ ಕುಮಾರಸ್ವಾಮಿ ಬೇಸರ

ಡಿಜಿಟಲ್ ಪತ್ರಿಕೆ ಓದುವುದು, ಟಿವಿ ನೋಡುವುದರಿಂದ ದೂರ ಇದ್ದಷ್ಟೂ ತಲೆ ಸರಿ ಇರುತ್ತದೆ. ನಾನು ಹತ್ತು ವರ್ಷದಿಂದ ಪತ್ರಿಕೆ ಓದುವುದಿಲ್ಲ, ಟಿವಿ ನೋಡುತ್ತಿಲ್ಲ ಹಾಗಾಗಿ ನನ್ನ ತಲೆ ಸರಿ ಇದೆ ಎಂದು ಅನಂತ್‌ಕುಮಾರ್ ಅವರು ಹೇಳಿದ್ದಾರೆ.

Dont read news papers, dont watch TV: Anant kumar hegde

ಮುಂದೆ ಮಾತನಾಡಿದ ಅವರು, ನಿಮ್ಮ ಶುಗರ್ ಲೆವಲ್ ಸರಿ ಇರಬೇಕು, ಬಿಪಿ ಕಂಟ್ರೋಲ್ ಅಲ್ಲಿ ಇರಬೇಕು, ನಿಮ್ಮ ತಲೆ ಸರಿ ಇರಬೇಕು ಅಂದರೆ ಪೇಪರ್‌ ಓದ್ಬೇಡಿ, ಟಿವಿನೂ ನೋಡ್ಬೇಡಿ ಎಂದು ಪ್ರವಚನ ಮಾಡಿದ್ದಾರೆ.

ಅನಂತ್ ಕುಮಾರ್ ಹೆಗಡೆ ಪತ್ನಿಯದ್ದು ಯಾವ ಜಾತಿ: ಬೇಳೂರು ಗೋಪಾಲಕೃಷ್ಣಅನಂತ್ ಕುಮಾರ್ ಹೆಗಡೆ ಪತ್ನಿಯದ್ದು ಯಾವ ಜಾತಿ: ಬೇಳೂರು ಗೋಪಾಲಕೃಷ್ಣ

ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ನಕಾರಾತ್ಮಕ ಸುದ್ದಿಗಳೇ ಹೆಚ್ಚಿರುತ್ತವೆ ಎಂಬ ಕಾರಣಕ್ಕೆ ಸಚಿವರು ಹಾಗೆ ಹೇಳಿದ್ದಾರೋ ಅಥವಾ ತಮ್ಮ ವಿರುದ್ಧ ಪ್ರಕಟವಾಗುವ ಸುದ್ದಿಗಳು ಜನಕ್ಕೆ ತಲುಪದಿರಲಿ ಎಂದು ಹಾಗೆ ಹೇಳಿದರೋ ತಿಳಿಯಬೇಕಿದೆ.

English summary
Central minister Anant Kumar Hegde says if want to be mentally healthy do not read newspaper and do not watch TV. some people condemning the statement of Anant Kumar Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X