ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತದೇ ತಪ್ಪು ಮಾಡಬೇಡಿ; ಸರ್ಕಾರಕ್ಕೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಮೇ 18: ಕೊರೊನಾ ಸೋಂಕಿನ ವಿಷಯದಲ್ಲಿ ನಿರ್ಲಕ್ಷ್ಯ ತೋರಿ ರಾಜ್ಯದ ಜನರ ಜೀವದ ಜೊತೆ ಆಟ ಆಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಕುರಿತು ಮಾತನಾಡಿರುವ ಕುಮಾರಸ್ವಾಮಿ, "ಲಾಕ್ ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಇನ್ನೂ ಒಂದು ತಿಂಗಳು‌ ಲಾಕ್ ಡೌನ್ ವಿಸ್ತರಣೆ ಮಾಡಬೇಕು. ಲಾಕ್ ವಿಸ್ತರಣೆ ಮಾಡದೆ ಇದ್ದರೆ ಮುಂದೆ ದೊಡ್ಡ ಅನಾಹುತ ಆಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ. ಬರೀ ಲಾಕ್ ಲೌನ್ ಮಾಡಿದರೆ ಸಾಕಾಗುವುದಿಲ್ಲ. ಕೂಲಿ ಕಾರ್ಮಿಕರು, ಶ್ರಮಿಕರು, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ಆಗ್ರಹಿಸಿದ್ದಾರೆ. ಮುಂದೆ ಓದಿ...

"ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ"

ಕೊರೊನಾ ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನ ಕುರಿತು ಪ್ರಶ್ನೆ ಮಾಡಿರುವ ಅವರು, "ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಮೊದಲು ಲಸಿಕೆ ಬಂದಾಗ ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿದೆ. ಈಗ ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಸಣ್ಣ ತನದ ರಾಜಕೀಯ ಮಾಡುತ್ತಿದೆ" ಎಂದು ದೂರಿದ್ದಾರೆ.

ಲಾಕ್‌ಡೌನ್ ವಿಸ್ತರಣೆ; ಸರ್ಕಾರಕ್ಕೆ ಎಚ್‌ಡಿಕೆ ಸಲಹೆ ಏನು?ಲಾಕ್‌ಡೌನ್ ವಿಸ್ತರಣೆ; ಸರ್ಕಾರಕ್ಕೆ ಎಚ್‌ಡಿಕೆ ಸಲಹೆ ಏನು?

ಇದೇ ಸಂದರ್ಭ, ಇಲ್ಲಿಯವರೆಗೆ ಕೊರೊನಾ ನಿರ್ವಹಣೆ ವಿಚಾರದಲ್ಲಿ ನೀವು ತಪ್ಪು ಮಾಡಿದಿರಿ. ಜನಗಳಿಗೆ ನೋವು ನೀಡಿದ್ದೀರಿ. ಮತ್ತೆ ಅದೇ ತಪ್ಪು ಮಾಡಬೇಡಿ. ಕೇವಲ ಸಭೆ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

"ಪರೀಕ್ಷೆ ನಡೆಸದೇ ವೈಫಲ್ಯ ಮುಚ್ಚಿಕೊಳ್ಳಬೇಡಿ"

ರಾಜ್ಯದಲ್ಲಿ ಕೊರೊನಾ ಪರೀಕ್ಷಾ ಪ್ರಮಾಣ ತಗ್ಗಿರುವ ಕುರಿತು ಪ್ರತಿಕ್ರಿಯಿಸಿ, "ಸರ್ಕಾರ ಹಲವು ಕಡೆ ಕೊರೊನಾ ಪರೀಕ್ಷೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ರಾಜ್ಯದಲ್ಲಿ ಮತ್ತಷ್ಟು ಸಾವು ನೋವು ಆಗುತ್ತದೆ. ಕೊರೊನಾ ಪರೀಕ್ಷೆ ನಡೆಸದೇ ಸರ್ಕಾರ ವೈಫಲ್ಯ ಮುಚ್ಚಿಕೊಳ್ಳಲು ಹೊರಟಿದೆ. ತಾತ್ಕಾಲಿಕವಾಗಿ ಜನರ ದಿಕ್ಕು ತಪ್ಪಿಸಲು ಹೋಗಿ ಮುಂದೆ ದೊಡ್ಡ ಎಡವಟ್ಟು ಮಾಡುತ್ತೀರ. ಹೀಗೆ ಮಾಡುವುದರಿಂದ ರಾಜ್ಯದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತದೆ. ಸರ್ಕಾರದ ಮಂತ್ರಿಗಳು ಕೂಡ ಕೊರೊನಾ ಪ್ರಕರಣಗಳು ಕುರಿತು ವಾಸ್ತವಿಕ ಹೇಳಿಕೆ ಕೊಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ರಾಜ್ಯದ ಸ್ಥಿತಿಗತಿ ಕುರಿತು ಎಚ್‌ಡಿಕೆ ಸಭೆ

ರಾಜ್ಯದ ಸ್ಥಿತಿಗತಿ ಕುರಿತು ಎಚ್‌ಡಿಕೆ ಸಭೆ

ರಾಜ್ಯದ ಕೋವಿಡ್‌ ಸ್ಥಿತಿಗತಿಯ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ಜೆಡಿಎಸ್‌ ಶಾಸಕರೊಂದಿಗೆ ಎರಡನೇ ಸುತ್ತಿನ ಆನ್‌ಲೈನ್‌ ಸಮಾಲೋಚನೆ ನಡೆಸಿದರು. ಕೊರೊನಾ ಸೋಂಕಿತರ ಚಿಕಿತ್ಸೆ, ಅಗತ್ಯವಿರುವ ಔಷಧ, ಆಹಾರ ಪೂರೈಕೆ ವ್ಯವಸ್ಥೆ, ಪಡಿತರ ವಿತರಣೆ, ರೈತರ ಉತ್ಪನ್ನಗಳ ಮಾರಾಟಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಶಾಸಕರು, ಮುಖಂಡರಿಂದ ಮಾಹಿತಿ ಪಡೆದರು.

ಎಚ್ಡಿಕೆ ಕೊಟ್ಟಿದ್ದು ಮಾಹಿತಿ ತಪ್ಪು ಎಂದು ಸಾರಲು, ಸಿಎಂ ಪ್ರೆಸ್ ಕಾನ್ಫರೆನ್ಸ್ ಕರೆದರೇ?ಎಚ್ಡಿಕೆ ಕೊಟ್ಟಿದ್ದು ಮಾಹಿತಿ ತಪ್ಪು ಎಂದು ಸಾರಲು, ಸಿಎಂ ಪ್ರೆಸ್ ಕಾನ್ಫರೆನ್ಸ್ ಕರೆದರೇ?

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ 22ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಬಡ ಕುಟುಂಬಗಳಿಗಾದರೂ ನೆರವು ಸಿಗುವಂತಾಗಬೇಕು. ಬಡ ಕುಟುಂಬಗಳ ಪಟ್ಟಿಯನ್ನು ಪಕ್ಷದ ವತಿಯಿಂದ ಸಿದ್ಧಪಡಿಸಿ ಸರ್ಕಾರಕ್ಕೆ ನೀಡೋಣ. ಸರ್ಕಾರ ಪರಿಹಾರ ನೀಡಿದರೆ ಸರಿ. ಇಲ್ಲವಾದರೆ ಹೋರಾಟ ನಡೆಸೋಣ. ಈ ಸಂದರ್ಭದಲ್ಲಿ ರಾಜಕೀಯ ಮಾಡಲು ಹೋಗಬಾರದು. ಪ್ರತಿಭಟನೆ ಸಾಂಕೇತಿಕವಾಗಿರಬೇಕು. ಪ್ರತಿಭಟಿಸಲು ನಮಗೆ ಹಲವು ದಾರಿಗಳಿವೆ ಎಂದು ಶಾಸಕರಿಗೆ ಎಚ್‌ಡಿಕೆ ಸಲಹೆ ನೀಡಿದರು.

Recommended Video

Raksha Ramaiah ವಿರುದ್ಧ ದೂರುಕೊಟ್ಟು ಒಂದು ಹೆಜ್ಜೆ ಮುಂದಿಟ್ಟ BJP | Oneindia Kannada

"ಈ ಸಮಯದಲ್ಲಿ ಜನರೊಂದಿಗೆ ನಾವು ನಿಲ್ಲಬೇಕು"

ಶಾಸಕರು, ಮುಖಂಡರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುತ್ತಲೇ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅವರೊಂದಿಗೆ ಇರಬೇಕು. ನಾಗರಿಕರಲ್ಲಿ ಈ ಕಠಿಣ ಸಂದರ್ಭದಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಅವರಿಗೆ ಅಗತ್ಯವಿರುವ ಸವಲತ್ತುಗಳನ್ನು ನಾವು ಕಲ್ಪಿಸಬೇಕು. ಈ ಸಮಯದಲ್ಲಿ ನಾವು ಜನರೊಂದಿಗೆ ನಿಲ್ಲಲೇಬೇಕು ಎಂದು ಕುಮಾರಸ್ವಾಮಿ ಹೇಳಿದರು.

English summary
"Dont play with people lives by not managing corona virus cases properly" warns HD Kumaraswamy to state government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X