ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪ-ಅಮ್ಮನ ಮಾತು ಕೇಳಿ ಹೆಂಡತಿಗೆ ಹೊಡೆಯುವವರ ಸಂಖ್ಯೆ ಶೇ.82!

|
Google Oneindia Kannada News

ಬೆಂಗಳೂರು, ನವೆಂಬರ್ 26: ಭಾರತದಲ್ಲಿ ಪುರಾತನ ಕಾಲದಿಂದಲೂ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಒಂದು ಮಾತಿದೆ. ಕಲಿಯುಗದಲ್ಲಿ ಅದರ ಚಿತ್ರಣವೇ ಬದಲಾಗಿದೆ. ಈಗ ಹೆಣ್ಣೆಗೆ ಹೆಜ್ಜೆ ಹೆಜ್ಜೆಗೂ ಶತ್ರುಗಳು ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ.

ಯುವತಿಯರಿಗೆ ಪೋಲಿಗಳ ಕಿರಿಕಿರಿ ಹೆಚ್ಚಾದರೆ, ವಿವಾಹಿತ ಮಹಿಳೆಯರಿಗೆ ಅತ್ತೆ ಮಾವನಿಂದ ನಿತ್ಯ ರೋಧನೆ. ರಾಜ್ಯದಲ್ಲಿ ಯುವತಿಯರು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದಿನ ಸಮೀಕ್ಷೆಯ ಫಲಿತಾಂಶಗಳಿಗೆ ಹೋಲಿಸಿದರೆ, ಇಂದಿಗೆ ವಿವಾಹಿತ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಮತ್ತು ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಮೀಕ್ಷೆ-5 ಬಹಿರಂಗಪಡಿಸಿದೆ.

ಪತ್ನಿ ಮೇಲಿನ ಕೋಪಕ್ಕೆ ಆತ್ಮಾಹುತಿ ಬಾಂಬ್ ಸ್ಫೋಟಿಸಿ ಕೊಲೆಗೈದ ಪತಿಪತ್ನಿ ಮೇಲಿನ ಕೋಪಕ್ಕೆ ಆತ್ಮಾಹುತಿ ಬಾಂಬ್ ಸ್ಫೋಟಿಸಿ ಕೊಲೆಗೈದ ಪತಿ

ಕರ್ನಾಟಕದಲ್ಲಿ 18 ರಿಂದ 49 ವಯೋಮಾನದ ಮಹಿಳೆಯರ ಮೇಲೆ ವೈವಾಹಿಕ ದೌರ್ಜನ್ಯವು ಶೇ 20.60 ರಿಂದ ಶೇ 44.4ರಷ್ಟು ಏರಿಕೆಯಾಗಿದೆ. 18 ರಿಂದ 29 ವರ್ಷದೊಳಗಿನ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪ್ರಮಾಣವು ಶೇ 10.30 ರಿಂದ ಶೇ 11ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಯುವತಿಯರು ಹಾಗೂ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯದ ಕುರಿತು ಸಮಿತಿಯ ಸಮೀಕ್ಷೆಯು ಹೇಳುವುದೇನು?, ಈ ಸಮೀಕ್ಷೆಯ ಅಂಕಿ-ಅಂಶಗಳು ಏನು ಹೇಳುತ್ತವೆ?, ಕರ್ನಾಟಕದಲ್ಲಿ ಮಹಿಳಾ ದೌರ್ಜನ್ಯಕ್ಕೆ ಕಡಿವಾಣ ಹಾಕುವುದಕ್ಕೆ ಯಾವ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಅತ್ತೆ ಮನೆಯಲ್ಲಿ ಮಹಿಳೆಯರಿಗೆ ಫುಲ್ ಟಾರ್ಚರ್

ಅತ್ತೆ ಮನೆಯಲ್ಲಿ ಮಹಿಳೆಯರಿಗೆ ಫುಲ್ ಟಾರ್ಚರ್

ರಾಜ್ಯದಲ್ಲಿ ವಿವಾಹಿತ ಮಹಿಳೆಯರು ಹಲವು ಬಗೆಯ ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ ಮಹಿಳೆಯರನ್ನು ಹೊಡೆಯುವುದು, ತಳ್ಳುವುದು, ವಸ್ತುಗಳನ್ನು ಅವರ ಮೇಲೆ ಬಿಸಾಡುವುದು, ಕೈ ಮತ್ತು ತೋಳುಗಳನ್ನು ತಿರುಗಿಸುವುದು, ಕೂದಲು ಎಳೆಯುವುದು, ಒದೆಯುವುದು, ಮುಷ್ಟಿಯಿಂದ ಗುದ್ದುವುದು ಅಥವಾ ಉಸಿರು ಗಟ್ಟಿಸುವಂತಾ ಯಾವುದೇ ರೂಪದಲ್ಲಿ ಹಿಂಸೆ ನೀಡುವುದು ಅಥವಾ ಸುಟ್ಟಿದ್ದಾರೆ ಎಂದು ವರದಿ ಹೇಳಿದೆ.

ವಿಪರ್ಯಾಸ ಎಂದರೆ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಕರಣಗಳು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿವೆ. ನಗರ ಪ್ರದೇಶದಲ್ಲಿ ಶೇ.48ರಷ್ಟು ಮಹಿಳೆಯರಿಗೆ ಗಂಡನ ಮನೆಯಲ್ಲಿ ಹಿಂಸೆ ನೀಡುವುದು ಹೆಚ್ಚಾಗಿ ಕಂಡು ಬಂದರೆ, ಈ ಪ್ರಮಾಣವು ಗ್ರಾಮೀಣ ಪ್ರದೇಶದಲ್ಲಿ ಶೇ.49ರಷ್ಟಿದೆ.

ಪತಿಯಿಂದ ಲೈಂಗಿಕ ಕ್ರಿಯೆಗಾಗಿ ಹಿಂಸೆ

ಪತಿಯಿಂದ ಲೈಂಗಿಕ ಕ್ರಿಯೆಗಾಗಿ ಹಿಂಸೆ

"18-49 ವರ್ಷ ವಯಸ್ಸಿನ ಮಹಿಳೆಯರು ತಮಗೆ ಇಷ್ಟವಿಲ್ಲದಿದ್ದರೂ ಪತಿಯು ಲೈಂಗಿಕ ಕ್ರಿಯೆಗಾಗಿ ಬಲವಂತಪಡಿಸುತ್ತಿದ್ದಾರೆ ಎಂದು ಶೇ.8ರಷ್ಟು ಮಂದಿ ಆರೋಪಿಸಿದ್ದಾರೆ. ಇನ್ನು ಶೇ.6ರಷ್ಟು ಮಹಿಳೆಯರು ತಮ್ಮ ಪತಿಯುಿಂದ ಬೆದರಿಕೆ ಹಾಗೂ ಇತರೆ ಬೇರೆ ರೀತಿಯಿಂದ ಅವರು ಬಯಸದ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದಾರೆ ಎಂದು ದೂಷಿಸಿದ್ದಾರೆ," ಎಂದು ಸಮೀಕ್ಷೆಯು ತಿಳಿಸಿದೆ.

25 ಬಾರಿ ಹಲವು ಪುರುಷರೊಂದಿಗೆ ಓಡಿ ಹೋದರೂ, ಪತಿಗೆ ಮಾತ್ರ ಆಕೆಯೇ ಬೇಕು25 ಬಾರಿ ಹಲವು ಪುರುಷರೊಂದಿಗೆ ಓಡಿ ಹೋದರೂ, ಪತಿಗೆ ಮಾತ್ರ ಆಕೆಯೇ ಬೇಕು

ಕೆಲಸವಿಲ್ಲದೇ ಮನೆಯಲ್ಲಿ ಕುಳಿತ ಗಂಡನಿಂದ ಹೆಚ್ಚಿದ ಕಿರುಕುಳ

ಕೆಲಸವಿಲ್ಲದೇ ಮನೆಯಲ್ಲಿ ಕುಳಿತ ಗಂಡನಿಂದ ಹೆಚ್ಚಿದ ಕಿರುಕುಳ

"ರಾಜ್ಯದಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ಹೆಚ್ಚಾಗಿವೆ. ವಿಶೇಷವಾಗಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಪತಿಯು ಕೆಲಸವಿಲ್ಲದೇ ಅಥವಾ ಮನೆಯಲ್ಲಿ ಹೆಚ್ಚು ಸಮಯ ಕಳೆದ ಸಮಯದಲ್ಲಿ ಲೈಂಗಿಕ ಹಿಂಸೆ ಹೆಚ್ಚಾಗಿದೆ," ಎಂದು ಗಮನ ಮಹಿಳಾ ಸಮೂಹ ಎಂಬ NGO ತಂಡದ ಸದಸ್ಯೆ ಮಮತಾ ಯಜಮಾನ್ ಹೇಳಿದ್ದಾರೆ. ಕೆಲವು ಪ್ರಕರಣಗಳಲ್ಲಿ ಮಹಿಳೆಯರಿಗೆ ಹಿಂಸೆ ನೀಡುವುದು ಸರ್ವೇ ಸಾಮಾನ್ಯ ಪ್ರಕ್ರಿಯೆಯಂತೆ ಆಗಿದೆ. ಹಲವು ಸಂದರ್ಭದಲ್ಲಿ ಪತಿಯು ಮದ್ಯದ ಅಮಲಿನಲ್ಲಿದ್ದಾಗ ಪತ್ನಿಗೆ ಹಿಂಸೆ ನೀಡಲಾಗುತ್ತಿದೆ. ಇಡೀ ವ್ಯವಸ್ಥೆಯು ಪಿತೃಪ್ರಧಾನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ಸಾಮಾನ್ಯವಾಗಿ ಸಹಾಯಕವಾಗುವುದಿಲ್ಲ. ಇದರಿಂದ ಮಹಿಳೆಯರು ದೂರು ನೀಡಲು ಮುಂದಾದರೂ ನ್ಯಾಯ ಸಿಗುತ್ತಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.

ಶೇ.6ರಷ್ಟು ಮಹಿಳೆಯರಿಗೆ ದೈಹಿಕ ಹಿಂಸೆ

ಶೇ.6ರಷ್ಟು ಮಹಿಳೆಯರಿಗೆ ದೈಹಿಕ ಹಿಂಸೆ

18 ರಿಂದ 49 ವರ್ಷ ವಯೋಮಾನದ ಮಹಿಳೆಯರು ಒಂದು ಅಥವಾ ಹೆಚ್ಚಿನ ಗರ್ಭಧಾರಣೆ ಸಮಯದಲ್ಲಿ ಶೇ 6ರಷ್ಟು ಮಂದಿ ದೈಹಿಕ ಹಿಂಸೆಯನ್ನು ಅನುಭವಿಸಿರುತ್ತಾರೆ. ದೈಹಿಕ ಮತ್ತು ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ ವಿವಾಹಿತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಡಿತ, ಮೂಗೇಟುಗಳು ಅಥವಾ ನೋವುಗಳು, ಆಳವಾದ ಗಾಯ, ಮೂಳೆ ಮುರಿತ, ಹಲ್ಲುಗಳ ಮುರಿತ ಅಥವಾ ಯಾವುದೇ ಇತರ ಗಂಭೀರ ಗಾಯ, ಕಣ್ಣಿನ ಗಾಯಗಳು, ಉಳುಕು, ಕೀಲುತಪ್ಪುವುದು, ಸಣ್ಣ ಮತ್ತು ತೀವ್ರವಾದ ಸುಟ್ಟ ಗಾಯಗಳು ಕಂಡು ಬರುತ್ತವೆ, ಎಂಬುದನ್ನು ಸಮೀಕ್ಷೆ ಉಲ್ಲೇಖಿಸಿದೆ.

ಪತ್ನಿಗೆ ಹೊಡೆಯುವುದೇ ಸರಿ ಅನ್ನೋರು ಶೇ 82ರಷ್ಟು ಮಂದಿ!

ಪತ್ನಿಗೆ ಹೊಡೆಯುವುದೇ ಸರಿ ಅನ್ನೋರು ಶೇ 82ರಷ್ಟು ಮಂದಿ!

ಗಂಡನ ಮನೆಯಲ್ಲಿ ಅತ್ತೆ ಮಾವನಿಂದ ಹಿಂಸೆ ಎದುರಿಸುವ ಪತ್ನಿಗೆ ಪತಿಯೇ ಆಸರೆಯಾಗಿ ನಿಲ್ಲಬೇಕು. ಆಘಾತಕಾರಿ ಅಂಶವೆಂದರೆ ಸಮೀಕ್ಷೆ ಪ್ರಕಾರ, ಶೇ 82ರಷ್ಟು ಪತಿರಾಯರು ಕೆಲವು ಸಂದರ್ಭಗಳಲ್ಲಿ ಹೆಂಡತಿಗೆ ಹೊಡೆಯುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ವಿಶೇಷವಾಗಿ, ಅತ್ತೆ-ಮಾವನಿಗೆ ಅಗೌರವ ತೋರುವುದು, ವಿಶ್ವಾಸದ್ರೋಹ ಮಾಡುವುದು, ಮನೆ ಮತ್ತು ಮಕ್ಕಳನ್ನು ನಿರ್ಲಕ್ಷಿಸಿದ ಸಮಯದಲ್ಲಿ ಪತ್ನಿ ಮೇಲೆ ಹಲ್ಲೆ ಮಾಡುವುದನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.

English summary
Domestic violence against married women and sexual violence against young women have increased in Karnataka reveals National Health Survey. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X