ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 1000 ರುಪಾಯಿ ದಾಟಿತು ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ದರ

|
Google Oneindia Kannada News

ಬೆಂಗಳೂರು, ನವೆಂಬರ್ 21: ನಿಮ್ಮ ಮನೆಗೆ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಬರುತ್ತಿದ್ದರೆ ಅದರ ಬೆಲೆ ಎಷ್ಟು ಅನ್ನೋದನ್ನು ಒಮ್ಮೆ ನೋಡಿಕೊಂಡು ಬಿಡಿ. ಏಕೆಂದರೆ, 14.2 ಕೇಜಿ ಎಲ್ ಪಿಜಿ ದರವು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 1000 ರುಪಾಯಿ ಆಸುಪಾಸಿನಲ್ಲಿದೆ. ಆದರೆ ಬೀದರ್ ನಲ್ಲಿ ಎಲ್ಲ ದಾಖಲೆ ಮುರಿದು 1015.5 ರುಪಾಯಿ ತಲುಪಿದೆ.

ಬೆಂಗಳೂರಿನಲ್ಲಿ 14.2 ಕೇಜಿ ಅಡುಗೆ ಅನಿಲ ಸಿಲಿಂಡರ್ (ಸಬ್ಸಿಡಿರಹಿತ) 941 ರುಪಾಯಿ ಇದೆ. ಆಮದು ಮಾಡಿಕೊಳ್ಳಲು ಅನುಕೂಲ ಇರುವ ಹಾಗೂ ಬಾಟ್ಲಿಂಗ್ ಘಟಕ ಇರುವ ಮಂಗಳೂರಿನಲ್ಲಿ ಆ ದರ 921 ರುಪಾಯಿ ಇದೆ. ಹುಬ್ಬಳ್ಳಿಯಲ್ಲಿ 962, ಬೆಳಗಾವಿಯಲ್ಲಿ 956 ರುಪಾಯಿ ಇದೆ.

ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 2 ರೂ ಹೆಚ್ಚಳಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 2 ರೂ ಹೆಚ್ಚಳ

ಇದೇ ವರ್ಷದ ಏಪ್ರಿಲ್ ನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಬೆಂಗಳೂರು 654, ಮಂಗಳೂರು 630, ಹುಬ್ಬಳ್ಳಿ 670, ಬೆಳಗಾವಿ 666 ಹಾಗೂ ಬೀದರ್ ನಲ್ಲಿ 721 ರುಪಾಯಿ ಇತ್ತು. ಮೂಲಬೆಲೆ, ತೆರಿಗೆ ಹಾಗೂ ಸುಂಕಗಳನ್ನು ಹೊರತುಪಡಿಸಿ ಆಯಾ ನಗರದ ಅಡುಗ್ ಅನಿಲದ ಬೆಲೆ ಬಾಟ್ಲಿಂಗ್ ಘಟಕ ಎಷ್ಟು ದೂರ ಇದೆ ಎಂಬ ಆಧಾರದ ಮೇಲೆ ನಿಗದಿ ಆಗುತ್ತದೆ.

ಬಾಟ್ಲಿಂಗ್ ಘಟಕ ಎಲ್ಲಿದೆ ಎಂಬುದರ ಮೇಲೂ ದರ ನಿರ್ಧಾರ

ಬಾಟ್ಲಿಂಗ್ ಘಟಕ ಎಲ್ಲಿದೆ ಎಂಬುದರ ಮೇಲೂ ದರ ನಿರ್ಧಾರ

ಬೀದರ್ ನ ಎಲ್ ಪಿಜಿ ಅಗತ್ಯವನ್ನು ಬೆಳಗಾವಿ ಬಾಟ್ಲಿಂಗ್ ಘಟಕದಿಂದ ಪೂರೈಸಲಾಗುತ್ತದೆ. ಕರ್ನಾಟಕದಲ್ಲಿ ಅಂಥ ಹನ್ನೊಂದು ಘಟಕಗಳಿವೆ. ಅವುಗಳನ್ನು ಮೂರು ಸಾರ್ವಜನಿಕ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ನಡೆಸುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಕಡಿಮೆಯಾಗಿ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಒಂದು -ಒಂದೂವರೆ ತಿಂಗಳಿಂದ ಈಚೆಗೆ ಕ್ರಮವಾಗಿ ರು.7.5 ಹಾಗೂ ರು. 4.5 ಇಳಿಕೆ ಆಗಿದ್ದರೂ ಎಲ್ ಪಿಜಿ ದರ ಇಳಿದಿಲ್ಲ.

ಎಲ್ ಪಿಜಿ ದರ ನಿರ್ಧರಿಸುವ ಅಂಶಗಳಿವು

ಎಲ್ ಪಿಜಿ ದರ ನಿರ್ಧರಿಸುವ ಅಂಶಗಳಿವು

ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಮುಖ್ಯ ಪಾತ್ರ ವಹಿಸಿದರೆ, ಅಡುಗೆ ಅನಿಲ ಬೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ ಪಿಜಿ ದರ, ಬ್ಯುಟೇನ್ ಮತ್ತು ಪ್ರೊಪೇನ್ ದರ ಹಾಗೂ ಅನಿಲ ದರ ಮುಖ್ಯ ಪಾತ್ರ ವಹಿಸುತ್ತದೆ ಎಂದು ತೈಲ ಮಾರ್ಕೆಟಿಂಗ್ ಕಂಪನಿಗಳು ಮಾಹಿತಿ ನೀಡುತ್ತದೆ.

ಒಂದು ತಿಂಗಳಲ್ಲಿ 7.29 ರೂಪಾಯಿ ಇಳಿದ ಪೆಟ್ರೋಲ್ ಬೆಲೆಒಂದು ತಿಂಗಳಲ್ಲಿ 7.29 ರೂಪಾಯಿ ಇಳಿದ ಪೆಟ್ರೋಲ್ ಬೆಲೆ

ವಿತರಕರಿಗೆ ಕಮಿಷನ್ ನಲ್ಲಿ ಏರಿಕೆ

ವಿತರಕರಿಗೆ ಕಮಿಷನ್ ನಲ್ಲಿ ಏರಿಕೆ

ಮನೆ ಬಳಕೆಗೆ ಬಳಸುವ ಅಡುಗೆ ಅನಿಲದ ದರವನ್ನು ತಿಂಗಳ ಆಧಾರದಲ್ಲಿ ನಿರ್ಧಾರ ಮಾಡಲಾಗುತ್ತದೆ. ಇನ್ನು ಪೆಟ್ರೋಲ್- ಡೀಸೆಲ್ ದರವನ್ನು ಆಯಾ ದಿನದಂದೇ ನಿರ್ಧರಿಸಲಾಗುತ್ತದೆ. ಇದೀಗ ಎಲ್ ಪಿಜಿ ವಿತರಕರ ಕಮಿಷನ್ ಏರಿಕೆ ಮಾಡಲಾಗಿದೆ. 14.2 ಕೇಜಿ ತೂಕದ ಸಿಲಿಂಡರ್ ಗೆ 50.58 ರುಪಾಯಿ ಹಾಗೂ 5 ಕೇಜಿ ಸಿಲಿಂಡರ್ ಗೆ 25.29 ರುಪಾಯಿ ಕಮಿಷನ್ ದೊರೆಯುತ್ತದೆ. ಇದರ ಹೊರತಾಗಿಯೂ 2018ರ ಡಿಸೆಂಬರ್ ನಿಂದ ಎಲ್ ಪಿಜಿ ದರ ಇಳಿಕೆ ಆಗಬೇಕು ಎಂದು ಮೂಲಗಳು ತಿಳಿಸಿವೆ.

ಪೆಟ್ರೋಲ್-ಡೀಸೆಲ್ ದರ ಭಾರೀ ಏರಿಕೆ ಆಗಿತ್ತು

ಪೆಟ್ರೋಲ್-ಡೀಸೆಲ್ ದರ ಭಾರೀ ಏರಿಕೆ ಆಗಿತ್ತು

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ವಿಧಿಸಿದ್ದ ನಿರ್ಬಂಧ ಇತ್ಯಾದಿ ಕಾರಣಗಳಿಗೆ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಭಾರೀ ಏರಿಕೆ ಆಗಿತ್ತು. ಆ ನಂತರ ಭಾರತ ಸೇರಿದಂತೆ ಎಂಟು ದೇಶಗಳಿಗೆ ಅಮೆರಿಕವು ಕೆಲ ವಿನಾಯ್ತಿಗಳನ್ನು ಘೋಷಿಸಿತು. ಆ ನಂತರ ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗುತ್ತಾ ಬರುತ್ತಿದೆ.

ಹೊಸ ಸ್ನೇಹ ಪರ್ವ; ಅಮೆರಿಕದಿಂದ ಭಾರತಕ್ಕೆ ಬಿಲಿಯನ್ ನಷ್ಟು ತೈಲ ಆಮದುಹೊಸ ಸ್ನೇಹ ಪರ್ವ; ಅಮೆರಿಕದಿಂದ ಭಾರತಕ್ಕೆ ಬಿಲಿಯನ್ ನಷ್ಟು ತೈಲ ಆಮದು

English summary
The price of non-subsidised domestic LPG (14.2-kg cylinder) is hovering around the ₹1,000 mark in most parts of Karnataka, and in Bidar a cylinder is being sold at ₹1,015.5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X