ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀಯ ವಿಮಾನಯಾನ ಆರಂಭ: ಕರ್ನಾಟಕಕ್ಕೆ ಬರುವವರಿಗೆ 'ಈ' ನಿಯಮಗಳು ಕಡ್ಡಾಯ!

|
Google Oneindia Kannada News

ಬೆಂಗಳೂರು, ಮೇ 25: ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಮಾರ್ಚ್ 25 ರಿಂದ ಭಾರತದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಇದೀಗ ಲಾಕ್ ಡೌನ್ 4.0 ಜಾರಿಯಲ್ಲಿದ್ದು, ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಪರಿಣಾಮ ದೇಶೀಯ ವಿಮಾನಯಾನಕ್ಕೆ ಅವಕಾಶ ನೀಡಲಾಗಿದೆ.

Recommended Video

ಈತ ವೈದ್ಯನಂತೆ ಆದ್ರೆ ಮಾದ್ಯಮದ ಮೇಲೆ,ಪೊಲೀಸರ ಜೊತೆ ಕಿರಿಕ್ ಮಾಡಿದ್ಯಾಕೆ? | Mysore

ಇಂದಿನಿಂದ (ಮೇ 25) ವಿಮಾನ ಸೇವೆ ಪುನರಾರಂಭಗೊಂಡಿದೆ. ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಂದ ವಿಮಾನಗಳು ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಗುತ್ತಿವೆ. ಆ ಮೂಲಕ ನೂರಾರು ಪ್ರಯಾಣಿಕರು ಬೆಂಗಳೂರಿಗೆ ಬರುತ್ತಿದ್ದಾರೆ.

ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ

ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿರುವವರು ಕ್ವಾರಂಟೈನ್ ಆಗಬೇಕಾ.? ಕರ್ನಾಟಕದಲ್ಲಿ ಮಾಡುವ ಕೋವಿಡ್-19 ಪರೀಕ್ಷೆಯ ವೆಚ್ಚವನ್ನು ಇತರೆ ರಾಜ್ಯಗಳಿಂದ ಬಂದವರು ಭರಿಸಬೇಕಾ.? ಸೇವಾ ಸಿಂಧು ಪೋರ್ಟಲ್ ನಿಂದ ಅನುಮತಿ ಪಡೆಯುವುದು ಕಡ್ಡಾಯವೇ.?

ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಕರ್ನಾಟಕದ ಆರೋಗ್ಯ ಸಚಿವಾಲಯ ಸ್ಪಷ್ಟ ಉತ್ತರ ನೀಡಿದೆ. ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಮುನ್ನ ಈ ಕೆಳಗಿನ ಅಂಶಗಳು ನಿಮ್ಮ ಗಮನದಲ್ಲಿರಲಿ...

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 32 ವಿಮಾನಗಳ ಹಾರಾಟಕ್ಕೆ ರಾಜ್ಯ ಸರ್ಕಾರ ತಡೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 32 ವಿಮಾನಗಳ ಹಾರಾಟಕ್ಕೆ ರಾಜ್ಯ ಸರ್ಕಾರ ತಡೆ

ಅಪ್ರೂವಲ್ ಪ್ರಕ್ರಿಯೆ ನಿಧಾನವಾದರೆ.?

ಅಪ್ರೂವಲ್ ಪ್ರಕ್ರಿಯೆ ನಿಧಾನವಾದರೆ.?

ಪ್ರಶ್ನೆ: ಅನುಮತಿ ಪತ್ರವನ್ನು ನೀಡಲು ಸೇವಾ ಸಿಂಧು ಪೋರ್ಟಲ್ 4-6 ವರ್ಕಿಂಗ್ ಡೇಸ್ ಸಮಯ ತೆಗೆದುಕೊಳ್ಳುತ್ತದೆ. ನಾವು ಈಗಾಗಲೇ ಟಿಕೆಟ್ ಬುಕ್ ಮಾಡಿದ್ದೇವೆ. ನಾವೀಗ ಏನು ಮಾಡಬಹುದು.?

ಉತ್ತರ: ರೈಲು ಮತ್ತು ವಿಮಾನ ಪ್ರಯಾಣಿಕರಿಗೆ ಅಪ್ರೂವಲ್ ಪ್ರಕ್ರಿಯೆ ತಕ್ಷಣ ಆಗುತ್ತದೆ. ಆದರೆ ಅದನ್ನು ಅನುಮತಿ ಎಂದು ಭಾವಿಸಬೇಡಿ.. ಬದಲಾಗಿ ಅದು ಕಡ್ಡಾಯ ಸ್ವಯಂ ನೋಂದಣಿ ಪ್ರಕ್ರಿಯೆ ಆಗಿರುತ್ತದೆ ಅಷ್ಟೇ. ಸೇವಾ ಸಿಂಧು ಪೋರ್ಟಲ್ ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ.

ಫ್ರೀ ಟೆಸ್ಟಿಂಗ್ ಇರಲಿದೆಯೇ.?

ಫ್ರೀ ಟೆಸ್ಟಿಂಗ್ ಇರಲಿದೆಯೇ.?

ಪ್ರಶ್ನೆ: ಕೋವಿಡ್-19 ಪರೀಕ್ಷೆಯ ವೆಚ್ಚವನ್ನು ನಾವೇ ಭರಿಸಬೇಕಾ.? ಅಥವಾ ಸರ್ಕಾರ ಅದನ್ನು ಉಚಿತವಾಗಿ ಮಾಡುತ್ತದಾ.?

ಉತ್ತರ: ಐ.ಸಿ.ಎಂ.ಆರ್ ಅಪ್ರೂವ್ ಮಾಡಿರುವ ಲ್ಯಾಬ್ ಗಳಲ್ಲಿ ಕೋವಿಡ್-19 ಪರೀಕ್ಷೆ ಉಚಿತವಾಗಿ ಮಾಡಲಾಗುತ್ತದೆ.

ಏರ್ ಲೈನ್ಸ್ ಸಿಬ್ಬಂದಿಯೂ ಕ್ವಾರಂಟೈನ್ ಆಗಬೇಕಾ.?

ಏರ್ ಲೈನ್ಸ್ ಸಿಬ್ಬಂದಿಯೂ ಕ್ವಾರಂಟೈನ್ ಆಗಬೇಕಾ.?

ಪ್ರಶ್ನೆ: ನಾನು ಏರ್ ಲೈನ್ಸ್ ಒಂದರ ಸಿಬ್ಬಂದಿ. ಹೈ-ರಿಸ್ಕ್ ರಾಜ್ಯದಿಂದ ಬಂದಿದ್ದರೆ ನಾನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿರಬೇಕಾ.?

ಉತ್ತರ: ಏರ್ ಲೈನ್ಸ್ ಕ್ರ್ಯೂ ಮೆಂಬರ್ಸ್ ಗೆ ಕ್ವಾರಂಟೈನ್ ಇಲ್ಲ. ಆದರೆ, ಏರ್ ಪೋರ್ಟ್ ಒಳಗೆ ಎಂಟ್ರಿ ಆಗುವ ಮುನ್ನ ಸ್ಕ್ರೀನಿಂಗ್ ಗೆ ಒಳಪಡಬೇಕು.

ಮೆಡಿಕಲ್ ಪ್ರೊಫೆಶನಲ್ ಗಳಿಗೆ ಹೋಮ್ ಕ್ವಾರಂಟೈನ್

ಮೆಡಿಕಲ್ ಪ್ರೊಫೆಶನಲ್ ಗಳಿಗೆ ಹೋಮ್ ಕ್ವಾರಂಟೈನ್

ಪ್ರಶ್ನೆ: ನಾನು ಮೆಡಿಕಲ್ ಪ್ರೊಫೆಶನಲ್. ಕರ್ನಾಟಕಕ್ಕೆ ಬರಲು ನಾನು ಸೇವಾ ಸಿಂಧು ಪೋರ್ಟಲ್ ನಲ್ಲಿ ಅಪ್ಲೈ ಮಾಡಬೇಕಾ.? ನನ್ನನ್ನು ಕ್ವಾರಂಟೈನ್ ಮಾಡಲಾಗುತ್ತದಾ.?

ಉತ್ತರ: ಕರ್ನಾಟಕಕ್ಕೆ ಬರುವ ಎಲ್ಲರೂ ಸೇವಾ ಸಿಂಧು ಪೋರ್ಟಲ್ ಮೂಲಕ ಇ-ಪಾಸ್ ಪಡೆಯಬೇಕು. ಮೆಡಿಕಲ್ ಪ್ರೊಫೆಶನಲ್ ಗಳು ಹೋಮ್ ಕ್ವಾರಂಟೈನ್ ನಲ್ಲಿರಬಹುದು.

ಯಾರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ.?

ಯಾರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ.?

ಪ್ರಶ್ನೆ: ಹೆಚ್ಚು ಪ್ರಕರಣಗಳು ದಾಖಲಾಗದ ರಾಜ್ಯದಲ್ಲಿ ನೆಲೆಸಿದ್ದು, ಹೈ-ರಿಸ್ಕ್ ರಾಜ್ಯದಿಂದ ವಿಮಾನ ಪ್ರಯಾಣ ಆರಂಭಿಸಿದ್ದರೆ ನಾನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ಒಳಪಡಬೇಕೇ.?

ಉತ್ತರ: ಹೌದು, ಹೈ-ರಿಸ್ಕ್ ರಾಜ್ಯಗಳಿಂದ ಪ್ರಯಾಣ ಮಾಡುವವರು ಕಡ್ಡಾಯವಾಗಿ 7 ದಿನ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿರಬೇಕು.

ದೇಶೀಯ ವಿಮಾನ ಪ್ರಯಾಣಿಕರಿಗೆ ಸರ್ಕಾರದ ಮಾರ್ಗಸೂಚಿ

ದೇಶೀಯ ವಿಮಾನ ಪ್ರಯಾಣಿಕರಿಗೆ ಸರ್ಕಾರದ ಮಾರ್ಗಸೂಚಿ

* ಮಹಾರಾಷ್ಟ್ರ, ಗುಜರಾತ್, ತಮಿಳು ನಾಡು, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಮುಂತಾದ ಹೆಚ್ಚು ಪ್ರಕರಣಗಳು ದಾಖಲಾಗಿರುವ ರಾಜ್ಯಗಳಿಂದ ಬರುವವರು 7 ದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿರಬೇಕು. ಬಳಿಕ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವುದು ಕಡ್ಡಾಯ.

* ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.

* ಉಳಿದ ರಾಜ್ಯಗಳಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರಬೇಕು.

* ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಗರ್ಭಿಣಿಯರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, ಅನಾರೋಗ್ಯದಿಂದ ಬಳಲುತ್ತಿರುವವರು, 10 ವರ್ಷದ ಒಳಗಿನ ಮಕ್ಕಳು ಹೋಮ್ ಕ್ವಾರಂಟೈನ್ ನಲ್ಲಿರಬೇಕು.

* ಪ್ರಯಾಣಕ್ಕೂ ಮುನ್ನ ICMR ನಿಂದ ಅನುಮತಿ ಪಡೆದಿರುವ ಲ್ಯಾಬ್ ಗಳಿಂದ ಕೋವಿಡ್-19 ನೆಗೆಟಿವ್ ಟೆಸ್ಟ್ ರಿಪೋರ್ಟ್ ತಂದ ಬಿಸಿನೆಸ್ ಪ್ಯಾಸೆಂಜರ್ ಗಳಿಗೆ ಕ್ವಾರಂಟೈನ್ ಇರುವುದಿಲ್ಲ.

* ಪ್ರಯಾಣ ಮಾಡುವವರೆಲ್ಲ ಸೇವಾ ಸಿಂಧು ಪೋರ್ಟಲ್ ನಿಂದ ಇ-ಪಾಸ್ ಪಡೆದಿರಬೇಕು.

* ಮೆಡಿಕಲ್ ಪ್ರೊಫೆಷನಲ್ಸ್, ನರ್ಸ್, ಸ್ಟಾಫ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಕಡ್ಡಾಯ.

* ಡಿಫೆನ್ಸ್, ಪ್ಯಾರಾ ಮಿಲಿಟರಿ, ಡಿ.ಆರ್.ಡಿ.ಓ, ಇಸ್ರೋ ಸಿಬ್ಬಂದಿಗೆ 14 ದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕಡ್ಡಾಯ.

* ಗ್ರಾಮೀಣ ಪ್ರದೇಶಕ್ಕೆ ತೆರಳುವವರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಕಡ್ಡಾಯ.

English summary
Domestic Flight Operations resumes from May 25th. Have a look at the FAQ's and Guidelines for the passengers travelling to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X