ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನದ ಮುನ್ನಾ 48 ಗಂಟೆಯಲ್ಲಿ ಏನು ಮಾಡಬಹುದು ಏನು ಮಾಡುವಂತಿಲ್ಲ

By Manjunatha
|
Google Oneindia Kannada News

ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದ್ದು ಮತದಾನಕ್ಕೆ ಉಳಿದಿರುವುದು ಇನ್ನು ಕೆಲವೇ ಗಂಟೆಗಳಷ್ಟೆ.

ಈ ಮಧ್ಯೆ ಇಂದು (ಮೇ 10) ರಾಜ್ಯ ಚುನಾವಣಾ ಆಯೋಗ ಆಯುಕ್ತ ಸಂಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ಮತದಾನಕ್ಕೆ ಮುನ್ನಾ 48 ಗಂಟೆಗಳಲ್ಲಿ ರಾಜಕೀಯ ಪಕ್ಷಗಳು, ಸುದ್ದಿ ಮಾಧ್ಯಮ ಹಾಗೂ ಜನರು ಏನು ಮಾಡಬೇಕು, ಏನು ಮಾಡಬಾರದು ಎಂಬ ಪಟ್ಟಿ ನೀಡಿದ್ದಾರೆ.

ಚುನಾವಣಾ ಸಿಬ್ಬಂದಿ ಕ್ಷೇಮಾಭಿವೃದ್ಧಿ ನೀತಿ ಪ್ರಕಟ!ಚುನಾವಣಾ ಸಿಬ್ಬಂದಿ ಕ್ಷೇಮಾಭಿವೃದ್ಧಿ ನೀತಿ ಪ್ರಕಟ!

* ಬಹಿರಂಗ ಪ್ರಚಾರದ ಸಮಯ ಅಂತ್ಯವಾಗುತ್ತಿದ್ದಂತೆ ಬೇರೆ ಕ್ಷೇತ್ರಗಳಿಂದ ಪ್ರಚಾರಕ್ಕೆ ಆಗಮಿಸಿದ್ದ ಎಲ್ಲಾ ತಾರಾ ಪ್ರಚಾರಕರು ಕ್ಷೇತ್ರ ಬಿಟ್ಟು ಹೊರಡಬೇಕು. ಒಬ್ಬರು ಬೇಕಾದರೆ ರಾಷ್ಟ್ರೀಯ ಮುಖಂಡರು ಇರಬಹುದು ಆದರೆ ಅವರು ತಮ್ಮ ನಿವಾಸ ಹಾಗೂ ಪಕ್ಷದ ಕಚೇರಿಗೆ ಮಾತ್ರವೇ ಓಡಾಡಬೇಕೆ ಹೊರತು ಬೇರೆ ಎಲ್ಲೂ ಕಾಣಿಸಿಕೊಳ್ಳುವಂತಿಲ್ಲ.

Does and Do nots 48 hours before the voting

* ಸಂಜೆ 5 ಗಂಟೆ ನಂತರ ಯಾವುದೇ ಮೈಕ್ ಸೆಟ್ ಬಳಸಿ ಪ್ರಚಾರ ಮಾಡುವಂತಿಲ್ಲ, ಆಟೋಗಳಿಗೆ ಮೈಕ್ ಸೆಟ್ ಕಟ್ಟಿ ಪ್ರಚಾರ ಮಾಡುವುದು ಸಾರ್ವಜನಿಕ ಸಭೆ ನಡೆಸುವುದು ನಿಲ್ಲಿಸಬೇಕು.

* ಮನೆ-ಮನೆಗೆ ತೆರಳಿ ಪ್ರಚಾರ ಮಾಡಬೇಕಷ್ಟೆ. ಅದಕ್ಕೂ ಚುನಾವಣಾ ನೀತಿ ಸಂಹಿತೆಯಲ್ಲಿ ಸೂಚಿಸಿರುವಷ್ಟೆ ಜನರನ್ನು ಜೊತೆಗೆ ಕರೆದುಕೊಂಡು ಹೋಗಬೇಕು.

ವೋಟರ್ ಐಡಿ ಪತ್ತೆ: ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ವೋಟರ್ ಐಡಿ ಪತ್ತೆ: ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ

* ಕಡ್ಡಾಯವಾಗಿ ಚುನಾವಣೆ ಮುಗಿಯುವವರೆಗೂ ಮದ್ಯದ ಅಂಗಡಿಗಳು ಬಂದ್ ಆಗಬೇಕು. ಮದ್ಯದ ಮಾರಾಟ ನಡೆಯಬಾರದು.

* ಟಿವಿ ಮತ್ತು ಪತ್ರಿಕೆಗಳು ಯಾವುದೇ ಪಕ್ಷದ ಸಂಬಂಧಿತ ಜಾಹೀರಾತು ಪ್ರದರ್ಶಿಸುವ ಮುನ್ನಾ ಖಡ್ಡಾಯವಾಗಿ ಚುನಾವಣಾ ಆಯೋಗದ ಅನುಮತಿಯನ್ನು ಪಡೆಯಲೇ ಬೇಕು.

* ಯಾವುದೇ ಪೇಯ್ಡ್‌ ನ್ಯೂಸ್‌ (ಖಾಸಿಗಾಗಿ ಸುದ್ದಿ)ಯನ್ನು ಟಿವಿ ಅಥವಾ ಪತ್ರಿಕೆಗಳು ಪ್ರಕಟಿಸಬಾರದು. ಟಿವಿಗಳಲ್ಲಿ ರಾಜಕೀಯ ಚರ್ಚೆಗಳನ್ನು ನಡೆಸಬಾರದು. ಪತ್ರಿಕೆಗಳಲ್ಲಿ ಚುನಾವಣಾ ವಿಶ್ಲೇಷಣೆ ಬರೆಯಬಾರದು. ಯಾವುದೇ ರೀತಿಯ ಸಮೀಕ್ಷೆಗಳನ್ನು ಪ್ರಸಾರ ಮಾಡಬಾರದು.

* ಎಲ್ಲಿಯೂ ಕೂಡಾ ಕಾನೂನು ಬಾಹಿರ ಕಾರ್ಯಕ್ಕೆ ಹೆಚ್ಚಿನ ಸೇರಬಾರದು, 144 ಸೆಕ್ಷನ್ ಜಾರಿ ಆಗಿರಬೇಕು.

* ಅಭ್ಯರ್ಥಿಗಳು ಮನೆ-ಮನೆ ಪ್ರಚಾರವನ್ನಷ್ಟೆ ಮಾಡಬಹುದು. ಮತದಾರರಿಗೆ ಯಾವುದೇ ಆಮಿಷಗಳನ್ನು ಒಡ್ಡುವಂತಿಲ್ಲ.

* ಮತದಾರರು ಮತದಾರ ಚೀಟಿ ಹೊರತಾಗಿ ಡಿಎಲ್, ಪಾಸ್‌ಪೋರ್ಟ್, ಆಧಾರ್, ಇನ್ಶುರೆನ್ಸ್, ಪಡಿತರ ಚೀಟಿ ಇನ್ನೂ ಹಲವು ದಾಖಲೆಗಳನ್ನು ತೋರಿಸಿ ಮತ ಚಲಾಯಿಸಬಹುದು.

ಸೇನೆಯಲ್ಲಿರುವ ಮತದಾರರಿಗೆ ವಿಶೇಷ ಸವಲತ್ತು ?ಸೇನೆಯಲ್ಲಿರುವ ಮತದಾರರಿಗೆ ವಿಶೇಷ ಸವಲತ್ತು ?

*ಮತಗಟ್ಟೆಗೆ ಒಬ್ಬ ವ್ಯಕ್ತಿಗೆ ಮಾತ್ರವೇ ಪ್ರವೇಶ. ಅಂಗವಿಕಲರು ಮತ್ತು ವಯೋವೃದ್ಧರಿಗೆ ಮತಗಟ್ಟೆ ಸಿಬ್ಬಂದಿ ಸಹಾಯ ಮಾಡಬೇಕು.

* ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸದವರ ಮೇಲೆ ಕೇಸು ದಾಖಲಿಸಲಾಗುವುದು.

* 1540 ಫ್ಲೈಯಿಂಗ್ ಸ್ಕ್ವಾಡ್‌ಗಳು ಚುನಾವಣಾ ಅಕ್ರಮ ತಡೆಯಲು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

English summary
Karnataka election commissioner Sanjeev Kumar said that in last 48 hours for voting commission giving some does and don't to parties and people. He said already 1540 flying squad working in the state to prevent election illegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X