ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಧುನ ಬಿಟ್ಟುಬಿಡಿ, ಪಿಎಸ್‌ಐ ಕೊಲೆ ಮಾಡಿದ್ದು ನಾನೇ'

|
Google Oneindia Kannada News

ಬೆಂಗಳೂರು, ನವೆಂಬರ್. 04: ಪಿಎಸ್ ಐ ಜಗದೀಶ್ ಹತ್ಯೆಯ ಆರೋಪಿಗಳಾದ ಹರೀಶ್ ಬಾಬು ಮತ್ತು ಮಧುನನ್ನು ನವೆಂಬರ್ 18 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಡಿವೈಎಸ್ಪಿ ರಾಜೇಂದ್ರ ಕುಮಾರ್ ಅವರ ತಂಡ ಆರೋಪಿಗಳನ್ನು ಬುಧವಾರ ನೆಲಮಂಗಲ ನ್ಯಾಯಾಲಯದ ಎದುರು ಹಾಜರುಪಡಿಸಿತು. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ನ್ಯಾಯಾಲಯ ಕೊಲೆಗಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.[ಪಿಎಸ್ ಐ ಜಗದೀಶ್ ಕೊಂದವರು ನಾಗ್ಪುರದಲ್ಲಿ ಸಿಕ್ಕಿಬಿದ್ರು]

bengaluru

ನ್ಯಾಯಾಧೀಶರ ಎದುರು ಆರೋಪಿ ಹರೀಶ್ ಬಾಬು ತಪ್ಪೊಪ್ಪಿಕೊಂಡಿದ್ದಾನೆ. ನಾನೇ ಜಗದೀಶ್ ಅವರ ಕೊಲೆ ಮಾಡಿದ್ದೇನೆ. ಇದರಲ್ಲಿ ಮಧುನ ಯಾವ ತಪ್ಪು ಇಲ್ಲ. ಆತನನನ್ನು ಬಂಧಮುಕ್ತ ಮಾಡಿ ಎಂದು ಹೇಳಿಕೆ ನೀಡಿದ್ದಾನೆ.

ಪೊಲೀಸರು ಆರೋಪಿಗಳನ್ನು ಬಂಧಿಸಿದ ನಂತರ ಅವರು ತೆರಳಿದ್ದ ಎಲ್ಲ ಜಾಗಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಆರೋಪ ಪಟ್ಟಿ ಸಲ್ಲಿಸಲು ಇನ್ನು ಕಾಲಾವಕಾಶವಿದೆ.[ಮಧು ಮತ್ತು ಹರೀಶ್ ಬಾಬು ಪೊಲೀಸರಿಗೆ ಸಿಕ್ಕಿದ್ದು ಹೇಗೆ?]

ಅಕ್ಟೋಬರ್ 16ರಂದು ತಮ್ಮನ್ನು ಹಿಡಿಯಲು ಬಂದ ದೊಡ್ಡಬಳ್ಳಾಪುರದ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರನ್ನು ಚಾಕುವಿನಿಂದ ಇರಿದು ಆರೋಪಿಗಳು ಹತ್ಯೆ ಮಾಡಿದ್ದರು. ತೀವ್ರ ಶೊಧದ ಬಳಿಕ ಆರೋಪಿಗಳನ್ನು ನಾಗಪುರದಲ್ಲಿ ಬಂಧಿಸಿ ಕರೆತರಲಾಗಿತ್ತು.

English summary
Doddaballapur PSI Jagadish murder case: Nelamangala JMFC court has sent both accused Harish Babu and Madhu to judicial custody till November 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X