ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಸೀಟು ಪಡೆದು ವೈದ್ಯರಾದವರಿಗೆ ಹಳ್ಳಿ ಸೇವೆ ಕಡ್ಡಾಯ ಸಾಧ್ಯತೆ

By Manjunatha
|
Google Oneindia Kannada News

ಬೆಂಗಳೂರು, ಜುಲೈ 25: ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಓದಿ ವೈದ್ಯರಾದವರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಸೇವೆ ಮಾಡಲೇ ಬೇಕು ಎಂಬ ಕಾನೂನು ತರಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಆರ್‌ಐ ವಿಭಾಗ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ದೊರಕಲೇ ಬೇಕಿದೆ. ಹಾಗಾಗಿ ವೈದ್ಯರ ಗ್ರಾಮೀಣ ಸೇವೆ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಸೊನ್ನೆ ಅಂಕ ಗಳಿಸಿದವರಿಗೂ ಕೊಟ್ಟಿದ್ದಾರೆ ಮೆಡಿಕಲ್ ಸೀಟು ಸೊನ್ನೆ ಅಂಕ ಗಳಿಸಿದವರಿಗೂ ಕೊಟ್ಟಿದ್ದಾರೆ ಮೆಡಿಕಲ್ ಸೀಟು

ವೈದ್ಯರ ಸೇವೆ ನಗರ ಪ್ರದೇಶದವರಿಗೆ ಎಷ್ಟು ಸುಲಭವಾಗಿ ಧಕ್ಕುತ್ತದೆಯೋ ಗ್ರಾಮೀಣ ಭಾಗದವರಿಗೂ ಅಷ್ಟೆ ಸುಲಭವಾಗಿ ಧಕ್ಕಬೇಕು ಎಂದ ಅವರು, ಗ್ರಾಮೀಣ ಸೇವೆಗೆ ತೆರಳುವ ವೈದ್ಯರಿಗೂ ಸೂಕ್ತ ಗೌರವ, ಸವಲತ್ತುಗಳನ್ನು ಸರ್ಕಾರದ ವತಿಯಿಂದಲೇ ಒದಗಿಸಲಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Doctors who took government seats should service in village

ಜಯದೇವ ಸಂಸ್ಥೆಯು ಬಡಜನರಿಗೆ ಉತ್ತಮ ಸೇವೆ ಒದಗಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ಅದೇ ರೀತಿ ಇತರ ಸರ್ಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಿ ಮಾದರಿ ಆಸ್ಪತ್ರೆಗಳು ಎನಿಸಿಕೊಳ್ಳಬೇಕು ಎಂದರು.

ಜನೌಷಧ ಕೇಂದ್ರದ ಔಷಧ ತೆಗೆದುಕೊಂಡರೆ ರೋಗಿಗಳೇ ಜವಾಬ್ದಾರರು, ವೈದ್ಯರಲ್ಲ! ಜನೌಷಧ ಕೇಂದ್ರದ ಔಷಧ ತೆಗೆದುಕೊಂಡರೆ ರೋಗಿಗಳೇ ಜವಾಬ್ದಾರರು, ವೈದ್ಯರಲ್ಲ!

ವೈದ್ಯರ ಮೇಲೆ ಹಲ್ಲೆ ತಡೆಗಟ್ಟಲೆಂದು 2007 ರಲ್ಲಿ ತರಲಾದ ಕಾನೂನನ್ನು ಇನ್ನಷ್ಟು ಶಕ್ತಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಇದೇ ಸಮಯದಲ್ಲಿ ಭರವಸೆ ನೀಡಿದರು.

English summary
MBBS students who studying under government seats should service in village for at-least one year says Kumaraswamy. He says the law about this is under discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X