ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಸೇವೆ ಮಾಡದ ಸರ್ಕಾರಿ ವೈದ್ಯರಿಗೆ 10 ಲಕ್ಷ ದಂಡ!

|
Google Oneindia Kannada News

ಬೆಂಗಳೂರು, ಜುಲೈ 20 : ಸರ್ಕಾರಿ ವೈದ್ಯರಾಗಿ ನೇಮಕವಾದವರು ಕಡ್ಡಾಯವಾಗಿ 6 ವರ್ಷ ಗ್ರಾಮೀಣ ಸೇವೆ ಮಾಡಬೇಕು, ಇಲ್ಲವಾದಲ್ಲಿ 10 ಲಕ್ಷ ರೂ. ದಂಡ ಪಾವತಿ ಮಾಡುವಂತೆ ಕಾನೂನು ರೂಪಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಕೆ.ಶಿವಶಂಕರ ರೆಡ್ಡಿ ಅವರ ಅಧ್ಯಕ್ಷತೆಯ ಸಮಿತಿ ಸರ್ಕಾರಿ ವೈದ್ಯರ ಗ್ರಾಮೀಣ ಸೇವೆ ಬಗ್ಗೆ ನೀಡಿರುವ ವರದಿಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಎಂಬಿಬಿಎಸ್‌ ಪದವಿ ಮುಗಿಸಿದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ಇದಕ್ಕೆ ತಪ್ಪಿದರೆ ಅವರಿಗೆ ಎಂ.ಡಿ ಮಾಡಲು ಅನುಮತಿ ನೀಡಬಾರದು ಎಂದು ಶಿಫಾರಸಿನಲ್ಲಿ ತಿಳಿದಿದೆ.[MBBS ಪೂರ್ಣಗೊಂಡ ಬಳಿಕ ಗ್ರಾಮೀಣ ಸೇವೆ ಕಡ್ಡಾಯ]

Doctors to shell out Rs 10 lakh for skipping rural services

ಗ್ರಾಮೀಣ ಪ್ರದೇಶದಲ್ಲಿನ ವೈದ್ಯರ ಕೊರತೆ ಮತ್ತು ಇದರಿಂದ ಜನರಿಗೆ ಆಗಿರುವ ತೊಂದರೆ ಬಗ್ಗೆ ಸಮಿತಿ ವಿವರಣೆಯನ್ನು ನೀಡಿದೆ. ಈಗಿರುವ ನಿಯಮವನ್ನು ಶೇ. 90ರಷ್ಟು ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಉಲ್ಲಂಘಿಸಿ ನಿಗದಿತ 1 ಲಕ್ಷ ದಂಡ ಕಟ್ಟಿ ಗ್ರಾಮೀಣ ಸೇವೆಯಿಂದ ಪಾರಾಗುತ್ತಿದ್ದಾರೆ ಎಂದು ಸಮಿತಿ ಹೇಳಿದೆ.[ಗ್ರಾಮೀಣ ಸೇವೆ ತಪ್ಪಿಸಿದರೆ ವೈದ್ಯರಿಗೆ ದಂಡ!]

ಒಂದು ಲಕ್ಷ ಇರುವ ದಂಡದ ಮೊತ್ತವನ್ನು 10 ಲಕ್ಷಕ್ಕೆ ಏರಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಸಮಿತಿಯ ಶಿಫಾರಸು ವಿಧಾನ ಸಭೆಯಲ್ಲಿ ಮಾತ್ರ ಮಂಡನೆ ಆಗಿದೆ. ಉಭಯ ಸದನಗಳಲ್ಲೂ ಈ ವರದಿ ಬಗ್ಗೆ ಸಮಗ್ರ ಚರ್ಚೆ ನಡೆದ ಬಳಿಕ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ.[ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯ ಕಾಲೇಜು ಸ್ಥಾಪನೆ]

English summary
The fine imposed on the government doctors who decide to skip their mandatory rural service will increase to Rs 10 lakh k shivashankar reddy comitee recommended the Karnataka government in it's report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X