ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಿಣಿಯರಿಗೆ ಕೊರೊನಾ ಲಸಿಕೆ: ವೈದ್ಯರು ನೀಡಿರುವ ಸಲಹೆ ಏನು?

|
Google Oneindia Kannada News

ಬೆಂಗಳೂರು, ಜುಲೈ 03: ಕೇಂದ್ರ ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮತಿ ನೀಡಿದೆ, ಆದರೆ ಕೊರೊನಾ ಮೂರನೇ ಅಲೆಗೂ ಮುನ್ನ ಲಸಿಕೆ ಪಡೆಯುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕೊರೊನಾ ಎರಡನೇ ಅಲೆ ಗರ್ಭಿಣಿಯರ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಸಾಕಷ್ಟು ಗರ್ಭಿಣಿಯರಲ್ಲಿ ಉಸಿರಾಟ ಸಮಸ್ಯೆ ಸೇರಿದಂತೆ ಗಂಭೀರ ಸ್ವರೂಪದ ಲಕ್ಷಣಗಳು ಕಂಡು ಬಂದಿದ್ದವು.

 ಗರ್ಭಿಣಿಯರಿಗೆ ಕೊರೊನಾ ಲಸಿಕೆ; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ ಗರ್ಭಿಣಿಯರಿಗೆ ಕೊರೊನಾ ಲಸಿಕೆ; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಗರ್ಭಿಣಿಯರಿಗೆ ಲಸಿಗೆ ನೀಡಲು ಒಪ್ಪಿಗೆ ನೀಡಿದ್ದು, ಇದರ ಬೆನ್ನಲ್ಲೇ ಕೊರೊನಾ 3ನೇ ಅಲೆ ಆರಂಭಕ್ಕೂ ಮುನ್ನ ಲಸಿಕೆ ಪಡೆದುಕೊಳ್ಳುವಂತೆ ಗರ್ಭಿಣಿ ಮಹಿಳೆಯರಿಗೆ ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ.

 ಕೊರೊನಾ 3ನೇ ಅಲೆಗೂ ಮುನ್ನ ಲಸಿಕೆ ಪಡೆಯಿರಿ

ಕೊರೊನಾ 3ನೇ ಅಲೆಗೂ ಮುನ್ನ ಲಸಿಕೆ ಪಡೆಯಿರಿ

ಇದೀಗ ಕೇಂದ್ರ ಸರ್ಕಾರ ಗರ್ಭಿಣಿಯರಿಗೆ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆ ಆರಂಭಕ್ಕೂ ಮುನ್ನ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲು ಯಾವುದೇ ರೀತಿಯ ಸಮಸ್ಯೆ ಹಾಗೂ ತೊಡಕುಗಳು ಎದುರಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಲಸಿಕಾ ಅಭಿಯಾನವನ್ನು ಸರ್ಕಾರ ನಡೆಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

 ಲಸಿಕೆ ನೀಡುವ ಪ್ರಕ್ರಿಯೆ

ಲಸಿಕೆ ನೀಡುವ ಪ್ರಕ್ರಿಯೆ

ಈಗಾಗಲೇ ಗರ್ಭಿಣಿಯರಿಗೆ ಲಸಿಕೆ ನೀಡುವ ಕಾರ್ಯಕ್ರಮಗಳು ಆರಂಭವಾಗಿದೆ. ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಲು ಈಗಿನಿಂದಲೇ ತಾವಾಗಿಯೇ ಮುಂದಾಗಿದ್ದೇ ಆದರೆ, ಮೂರನೇ ಆರಂಭವಾಗುವುದಕ್ಕೂ ಮುನ್ನ ಎಲ್ಲಾ ಗರ್ಭಿಣಿಯರಿಗೂ ಲಸಿಕೆ ನೀಡಲು ಸಹಾಯಕವಾಗುತ್ತದೆ ಎಂದು ಎಂದು ಡಾ. ಸುಹಾಸಿನಿ ಹೇಳಿದ್ದಾರೆ.

 ಪ್ರತ್ಯೇಕ ಅಭಿಯಾನ

ಪ್ರತ್ಯೇಕ ಅಭಿಯಾನ

ಹೆಚ್ಚೆಚ್ಚು ಜನರಿರುವ ಪ್ರದೇಶದಲ್ಲಿ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳುವುದು ಅಪಾಯಕಾರಿಯಾಗಿದ್ದು, ಹೀಗಾಗಿ ಗರ್ಭಿಣಿಯರಿಗೆ ಲಸಿಕೆ ನೀಡಲು ಪ್ರತ್ಯೇಕ ಅಭಿಯಾನ ಆರಂಭಿಸಬೇಕಿದೆ. ಇನ್ನು ಹಾಲುಣಿಸುವ ತಾಯಿಯಂದಿರು ಮಗುವಿಗೆ ಜನ್ಮ ನೀಡಿ 3-4 ವಾರಗಳ ಬಳಿಕ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವ ಗರ್ಭಿಣಿಯರು ಲಸಿಕೆ ಪಡೆದುಕೊಂಡ ಬಳಿಕ ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕು. ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಲಸಿಕೆ ಪಡೆದುಕೊಳ್ಳುವುದಕ್ಕೂ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

 ಗರ್ಭಿಣಿಯರ ಆರೋಗ್ಯದ ಮೇಲೆ ಅಡ್ಡ ಪರಿಣಾಮ

ಗರ್ಭಿಣಿಯರ ಆರೋಗ್ಯದ ಮೇಲೆ ಅಡ್ಡ ಪರಿಣಾಮ

ಮೊದಲ ತ್ರೈಮಾಸಿಕ ಬಳಿಕ ಗರ್ಭಿಣಿಯರು ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಮೊದಲ ತ್ರೈಮಾಸಿಕ ಪೂರ್ಣಗೊಂಡ ಬಳಿಕ ಯಾವಾಗ ಬೇಕಾದರೂ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಗರ್ಭಧರಿಸಿದ ಆರಂಭಿಕ ತಿಂಗಳುಗಳಲ್ಲಿ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಮೊದಲ ತ್ರೈಮಾಸಿಕದ ಬಳಿಕ ಲಸಿಕೆ ಪಡೆದುಕೊಳ್ಳುವುದು ಉತ್ತಮ .

 ಅಕಾಲಿಕ ಹೆರಿಗೆ ಕಡಿಮೆ

ಅಕಾಲಿಕ ಹೆರಿಗೆ ಕಡಿಮೆ

''ಗರ್ಭಿಣಿಯರು ಲಸಿಕೆ ಪಡೆದುಕೊಂಡಿದ್ದೇ ಆದರೆ, ಸೋಂಕಿನ ತಗುಲಿದರೂ ಅದರ ತೀವ್ರತೆ ಕಡಿಮೆಯಿರುತ್ತದೆ. ಅಲ್ಲದೆ, ಹೆರಿಗೆ ಮತ್ತು ಅಕಾಲಿಕ ಹೆರಿಗೆಗಳ ಅಪಾಯ ಕಡಿಮೆ ಇರುತ್ತದೆ. ಸೋಂಕು ಹರಡುವ ಪ್ರಮಾಣ ಕೂಡ ಕಡಿಮೆ ಇರುತ್ತದೆ'' ಎಂದು ಡಾ. ಭಾರತಿ ತಿಳಿಸಿದ್ದಾರೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ ಡಾ.ಭಾರತಿ ಕಾಮೋಜಿ ಮಾತನಾಡಿ, ಇತರಂತೆಯೇ ಎಲ್ಲಾ ಗರ್ಭಿಣಿ ಮಹಿಳೆಯರಿಗೂ ಕೋವಿಡ್ ಲಸಿಕೆಗಳನ್ನು ನೀಡಬೇಕು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

English summary
While the Union Health Ministry has given its nod for pregnant women to get vaccinated against Covid-19, experts have pointed out that they should come forward and get themselves vaccinated before the third wave sets in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X