ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಶೇ.51ರಷ್ಟು ಮಹಿಳೆಯರಲ್ಲಿ ಕಬ್ಬಿಣಾಂಶ ಕೊರತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಕರ್ನಾಟಕದಲ್ಲಿರುವ ಶೇ.51ರಷ್ಟು ಮಹಿಳೆಯರು ಕಬ್ಬಣಾಂಶ ಕೊರತೆಯಿಂದ ಬಳಲುತ್ತಿದ್ದಾರೆ ಎನ್ನುವ ಆತಂಕಕಾರಿ ವರದಿಯನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಆದರೆ ಕಬ್ಬಿಣಾಂಶದ ಕೊರತೆ ಇದೆ ಎಂದು ಮಹಿಳೆಯರು ಎತೇಚ್ಚವಾಗಿ ಐರನ್ ಯುಕ್ತ ಆಹಾರವನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪ್ರಕರಣವೂ ಬೆಳಕಿಗೆ ಬಂದಿದೆ.

ಕರ್ನಾಟಕ ಒಂದರಲ್ಲೇ ಶೇ 51ರಷ್ಟು ಮಹಿಳೆಯರು ಕಬ್ಬಿಣಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇಯಿಂದ ಮಾಹಿತಿ ಲಭ್ಯವಾಗಿದೆ.

Doctor say iron deficiency a bigger issue in karnataka

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳುವ ಪ್ರಕಾರ ದಿನಕ್ಕೆ ಒಂದು 21 ಎಂಜಿಯಷ್ಟು ಡೆಸಿಲೀಟರ್ ಐರನ್‌ನ್ನು ಸೇವನೆ ಮಾಡಬೇಕಾಗುತ್ತದೆ. ಅದಾದ ಬಳಿಕ ಮಹಿಳೆಯರು ಅತಿ ಹೆಚ್ಚು ಕಬ್ಬಿಣದಾಂಶವುಳ್ಳ ಆಹಾರವನ್ನು ಸ್ವೀಕರಿಸಲು ಆರಂಭಿಸಿದರು. ಹಾಗಾಗಿ ಐಸಿಎಂಆರ್ ನಿತ್ಯ 15 ಎಂಜಯಷ್ಟು ಐರನ್ ಯುಕ್ತ ಆಹಾರ ಸ್ವೀಕರಿಸಿದರೆ ಸಾಕು ಎಂದು ತಿಳಿಸಿತು.

ಕಳೆದ 10 ವರ್ಷಗಳ ಹಿಂದೆ ಶೇ.80ರಷ್ಟು ಮಹಿಳೆಯರು ಐರನ್ ಅನೇಮಿಯಾ ರೋಗದಿಂದ ಬಳಲುತ್ತಿದ್ದರು, ಹಿಮೋಗ್ಲೋಬಿನ್ 11ಕ್ಕಿಂತ ಕಡಿಮೆ ಇರುತ್ತಿತ್ತು. ಆದರೆ ಇದೀಗ ಅದು ಶೇ.50ರಷ್ಟು ಇಳಿದಿದೆ.

ಕಬ್ಬಿಣಾಂಶಯುಕ್ತ ಆಹಾರ ಸೇವನೆ ಕಡಿಮೆಯಾಗಿರುವ ಕಾರಣ ಗರ್ಭಿಣಿಯರಲ್ಲಿ ಕಬ್ಬಿಣಾಂಶ ಕಡಿಮೆಯಾಗುತ್ತಿದೆ. ಆದರೆ ಬೆಂಗಳೂರಿನ ಸೇಂಟ್ ಜಾನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನೀಡಿರುವ ಮಾಹಿತಿ ಪ್ರಕಾರ ಕಬ್ಬಿಣಾಂಶ ಕೊರತೆ ಇದೆ ಎಂದು ಎತೇಚ್ಚವಾಗಿ ಕಬ್ಬಿಣಾಂಶಯುಕ್ತ ಆಹಾರವನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದೆ.

English summary
Iron deficiency anaemia affects more than 51% of women in the state of Karnataka alone, according to the National Family Health Survey 4 (NFHS 4). In an effort to combat the rising levels of iron deficiency anaemia in the country, the Indian Council of Medical Research (ICMR) had in 2010 recommended that 21 mg per deciliter of iron was to be taken daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X