ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳು

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 5: ಡೆಂಗ್ಯೂ ವೈರಸ್‌ನಿಂದ ಹರಡುವ ರೋಗವಾಗಿದ್ದು, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1,DENV2,DENV3,DENV4 ಎಂಬ ನಾಲ್ಕು ವಿಧದ ವೈರಸ್‌ಗಳಿಂದ ಇದು ಹರಡುತ್ತಿದೆ.

ಸೋಂಕು ರೋಗಗಳಲ್ಲಿ ಅತ್ಯಂತ ಅಪಾಯಕಾರಿಯಾದದ್ದು ಡೆಂಗ್ಯೂ. ಇದು ಸೊಳ್ಳೆಗಳ ಮೂಲಕ ಹರಡುವ ಭಯಂಕರವಾದ ಕಾಯಿಲೆ. ಏಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಈ ಸೊಳ್ಳೆಯನ್ನು ಟೈಗರ್ ಸೊಳ್ಳೆ ಎಂದು ಕರೆಯುವುದುಂಟು. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ.

ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?

ಈ ಸೊಳ್ಳೆ ಕಡಿದ ಐದರಿಂದ ಎಂಟು ದಿನಗಳ ಬಳಿಕ ರೋಗದ ಲಕ್ಷಣಗಳು ಕಾಣಿಸುತ್ತವೆ. ಅದೇ ರೀತಿ ಡೆಂಗ್ಯೂ ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದರೂ ಈ ವೈರಸ್ ವ್ಯಾಪಿಸುತ್ತದೆ.

ಸದ್ಯಕ್ಕೆ ಮಳೆ ಬೀಳುತ್ತಿರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಕಾಲದಲ್ಲೇ ಡೆಂಗ್ಯೂ ಸೋಂಕು ಹರಡುತ್ತದೆ. ಆದಕಾರಣ ಈ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಉತ್ತಮ.

 ಉದ್ದ ತೋಳಿನ ಬಟ್ಟೆ, ಸಾಕ್ಸ್‌ ಮತ್ತು ಶೂಸ್ ಗಳನ್ನು ಧರಿಸಿ

ಉದ್ದ ತೋಳಿನ ಬಟ್ಟೆ, ಸಾಕ್ಸ್‌ ಮತ್ತು ಶೂಸ್ ಗಳನ್ನು ಧರಿಸಿ

ಡೆಂಗ್ಯೂವನ್ನು ನಿವಾರಿಸಲು ಯಾವುದೇ ಲಸಿಕೆಗಳು ಲಭ್ಯವಿಲ್ಲ. ಡೆಂಗ್ಯೂವನ್ನು ನಿವಾರಿಸಲು ಇರುವ ಅತ್ಯುತ್ತಮ ನಿವಾರಣೋಪಾಯ ಎಂದರೆ ಅದು ಸೊಳ್ಳೆಗಳಿಂದ ಕಡಿಸಿಕೊಳ್ಳದೆ ಇರುವಿಕೆಯಾಗಿರುತ್ತದೆ. ಸೊಳ್ಳೆ ನಿವಾರಕಗಳು (ರಿಪೆಲ್ಲೆಂಟ್‌ಗಳು), ಸೊಳ್ಳೆ ಪರದೆಗಳು, ಮೆಶ್ ಗಳು ಮತ್ತು ಮನೆಯಿಂದ ಹೊರಗೆ ಇರುವ ಸಂದರ್ಭದಲ್ಲಿ ಉದ್ದ ತೋಳಿನ ಬಟ್ಟೆಗಳನ್ನು, ಸಾಕ್ಸ್‌ಗಳನ್ನು ಮತ್ತು ಬೂಟ್‌ಗಳನ್ನು ಧರಿಸುವ ಮೂಲಕ ಡೆಂಗ್ಯೂವನ್ನು ನಿವಾರಿಸಿಕೊಳ್ಳಬಹುದು.

 ಹೂಕುಂಡಗಳು, ನೀರಿನ ತೊಟ್ಟಿಯಲ್ಲಿ ನೀರುನಿಲ್ಲದಂತೆ ನೋಡಿಕೊಳ್ಳಿ

ಹೂಕುಂಡಗಳು, ನೀರಿನ ತೊಟ್ಟಿಯಲ್ಲಿ ನೀರುನಿಲ್ಲದಂತೆ ನೋಡಿಕೊಳ್ಳಿ

ಏಡಿಸ್ ಈಜಿಪ್ಟಿ ಸೊಳ್ಳೆಗಳು ಹೂಕುಂಡಗಳು, ನೀರಿನ ತೊಟ್ಟಿಗಳು, ಟೈರ್ ಗಳಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಇದರ ಮೊಟ್ಟೆಗಳು ಒಣ ಸ್ಥಿತಿಯಲ್ಲಿಯೇ ಒಂದು ವರ್ಷದವರೆಗೆ ಜೀವಿಸುತ್ತವೆ. ನಿಮ್ಮ ಮನೆಯ ಅಕ್ಕ-ಪಕ್ಕ ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಟೈರ್‌ಗಳು ಮತ್ತಿತರ ವಸ್ತು ಮತ್ತು ಸ್ಥಳಗಳನ್ನು ಸ್ವಚ್ಛ ಮಾಡಿ, ನೀರು ನಿಲ್ಲದಂತೆ ಮಾಡುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದು.

ಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನ

 ರೋಗದ ಲಕ್ಷಣಗಳು..

ರೋಗದ ಲಕ್ಷಣಗಳು..

ತೀವ್ರವಾದ ತಲೆನೋವುಃ ಡೆಂಗ್ಯೂ ಲಕ್ಷಣಗಳಲ್ಲಿ ಮುಖ್ಯವಾದದ್ದು ತಲೆನೋವು. ಡೆಂಗ್ಯೂ ಸೋಕಿದವರಿಗೆ ವಿಪರೀತ ತಲೆನೋವು ಇರುತ್ತದೆ. ತಲೆ ಭಾರವಾಗಿ ಇರುತ್ತದೆ. ಜ್ವರಃ ಡೆಂಗ್ಯೂ ಸೋಂಕು ಇರುವರಿಗೆ ಜ್ವರ ಬರುತ್ತಾ, ಬಿಡುತ್ತಾ ಇರುತ್ತದೆ. ಒಂದೊಂದು ಸಲ ಜ್ವರದ ತೀವ್ರತೆ 104 ಡಿಗ್ರಿ ಫಾರನ್ ಹೀಟ್ ವರೆಗೂ ಹೆಚ್ಚಾಗಬಹುದು. ಈ ರೀತಿ ನಿತ್ಯ ಆಗುತ್ತಿದ್ದರೆ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಆ ಜ್ವರ ಡೆಂಗ್ಯೂಗೆ ದಾರಿಯಾಗಬಹುದು.

ಕೀಲು ನೋವುಃ ಡೆಂಗ್ಯೂ ಕಾಯಿಲೆ ಬಂದರೆ ಕೀಲು ನೋವು, ಸ್ನಾಯುಗಳ ನೋವು ಹೆಚ್ಚಾಗಿ ಇರುತ್ತದೆ. ರಕ್ತಸ್ರಾವಃ ಡೆಂಗ್ಯೂ ಲಕ್ಷಣಗಳಲ್ಲಿ ಇದು ಮುಖ್ಯವಾದದ್ದು. ಡೆಂಗ್ಯೂ ಇದ್ದರೆ ಮೂಗಿನಿಂದ ರಕ್ತಸ್ರಾವ ಆಗುತ್ತಿರುತ್ತದೆ. ಕಾಯಿಲೆ ತೀವ್ರಗೊಂಡರೆ ಈ ರಕ್ತಸ್ರಾವ ಅಧಿಕವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸಾಯುವ ಸಾಧ್ಯತೆಗಳಿರುತ್ತವೆ.

ವಾಂತಿ ಮತ್ತು ಭೇದಿಃ ಡೆಂಗ್ಯೂ ಸೋಕಿದವರಿಗೆ ಬಾಯಿ ಒಣಗುತ್ತಿರುತ್ತದೆ. ಮಾತುಮಾತಿಗೂ ದಾಹವಾಗುತ್ತಿರುತ್ತದೆ. ಅದೇ ರೀತಿ ಹೊಟ್ಟೆಯಲ್ಲಿ ಸ್ವಲ್ಪ ನೋವು, ವಾಂತಿ ಬರುವಂತೆ, ವಾಂತಿ ಆಗುತ್ತಿರುವಂತೆ, ಭೇದಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

 ಪಪ್ಪಾಯ ಹಣ್ಣಿನ ಬೀಜವನ್ನು ಆಹಾರದ ಜತೆಗೆ ಸೇವಿಸಬೇಕು

ಪಪ್ಪಾಯ ಹಣ್ಣಿನ ಬೀಜವನ್ನು ಆಹಾರದ ಜತೆಗೆ ಸೇವಿಸಬೇಕು

ಪಪ್ಪಾಯ ಬೀಜವನ್ನು ಆಹಾರದ ಜತೆ ತಿನ್ನುವುದರಿಂದ ಅದರಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಗುಣ ಡೆಂಗ್ಯೂ ಜ್ವರವನ್ನು ಕಡಿಮೆ ಮಾಡುತ್ತದೆ. ತಾಜಾ ಪರಂಗಿ ಎಲೆಯನ್ನು ಶುದ್ಧ ಮಾಡಿ ಅದನ್ನು ಹಿಂಡಿ ರಸ ತೆಗೆದು ದಿನಕ್ಕೆ ಎರಡು ಚಮಚ ಸೇವಿಸಬೇಕು.

ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!

 ಡೆಂಗ್ಯೂ ನಿಯಂತ್ರಣ ಬೇವಿನ ಎಲೆಯಿಂದಲೂ ಸಾಧ್ಯ

ಡೆಂಗ್ಯೂ ನಿಯಂತ್ರಣ ಬೇವಿನ ಎಲೆಯಿಂದಲೂ ಸಾಧ್ಯ

ಕೊಂಚ ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ನೀರನ್ನು ಕುಡಿಯಿರಿ. ಸಂಶೋಧನೆಗಳ ಮೂಲಕ ಈ ನೀರನ್ನು ನಿಯಮಿತವಾಗಿ ಕುಡಿದ ಡೆಂಘಿ ರೋಗಪೀಡಿತರ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿದ್ದುದು ಕಂಡುಬಂದಿದೆ. ಸಮಪ್ರಮಾಣದಲ್ಲಿ ಇವೆರಡೂ ಎಲೆಗಳ ಹಸಿರು ಭಾಗವನ್ನು ಅರೆದು ಸೇವಿಸುವ ಮೂಲ ಡೆಂಗ್ಯೂ ಜ್ವರವನ್ನು ವಾಸಿ ಮಾಡಬಹುದಾಗಿದೆ.

 ಹುಳಿ ಮಿಶ್ರಿತ ಹಣ್ಣುಗಳನ್ನು ತಿನ್ನಿ

ಹುಳಿ ಮಿಶ್ರಿತ ಹಣ್ಣುಗಳನ್ನು ತಿನ್ನಿ

ನಿಂಬೆ ಹಣ್ಣು, ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಜ್ವರ ಬಾರದಂತೆ ತಡೆಗಟ್ಟಲು ಈ ಹುಳಿ ಮಿಶ್ರಿತ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ದ್ರಾಕ್ಷಿ ತಿಂದರೆ ಶೀತವಾಗುತ್ತೆಂದೂ, ಔಷಧ ಸಿಂಪಡನೆ ಮಾಡುತ್ತಾರೆ ಎಂದು ಸೇವಿಸುವುದಿಲ್ಲ ಆದರೆ ಕಡ್ಡಾಯವಾಗಿ ಸೇವಿಸಲೇ ಬೇಕಾಗಿದೆ.

English summary
Regular flu may be due to a simple viral or bacterial infection, amongst other possible causes. Dengue is a more dangerous form and needs a hands-on approach. The World Health Organisation says,Dengue is a viral infection transmitted by the bite of an infected female Aedes mosquito.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X