• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ : ವಾದ ಪ್ರತಿವಾದ ವಿವಾದ

By Prasad
|

ಕರ್ನಾಟಕ ಹಿಂದೆಂದೂ ಕಂಡರಿಯದ ಭೀಕರ ಬರಗಾಲವನ್ನು ಎದುರಿಸುತ್ತಿದೆ, ರಾಜ್ಯದಲ್ಲಿ ರೈತರು ಮೇವಿಗೆ, ಬೆಳೆಗೆ ನೀರಿಲ್ಲಿದೆ ವಿಲವಿಲ ಒದ್ದಾಡುತ್ತಿದ್ದಾರೆ, ಬೆಂಗಳೂರು ನೀರಿನ ಕೊರತೆ ಎದುರಿಸುತ್ತಿದೆ, ಲೋಡ್ ಶೆಡ್ಡಿಂಗ್ ಗೆ ಸಿದ್ಧರಾಗಬೇಕಿದೆ, ಸರಕಾರಿ ಇಲಾಖೆಯಲ್ಲಿಯೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಮಂಗಳೂರು ಕೋಮು ಗಲಭೆಯಿಂದ ಕುದಿಯುತ್ತಿದೆ...

ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಕರ್ನಾಟಕದ 'ಪ್ರತ್ಯೇಕ ಧ್ವಜ'

ಇಷ್ಟೆಲ್ಲ ತೊಂದರೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಕುಳಿತಿರುವಾಗ ಕರ್ನಾಟಕಕ್ಕೆ ತನ್ನದೇ ಆದ ಧ್ವಜ ಬೇಕೆಂದು ಸಿದ್ದರಾಮಯ್ಯ ಸರಕಾರ ನೇರವಾಗಿ ವಿವಾದದ ಹುತ್ತಕ್ಕೇ ಕೈಹಾಕಿದೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ, ಸ್ಥಳೀಯ ಚಾನಲ್ಲುಗಳಲ್ಲಿ ಮಾತ್ರವಲ್ಲ ರಾಷ್ಟ್ರೀಯ ವಾಹಿನಿಗಳಲ್ಲಿಯೂ ಚರ್ಚೆಗೆ ಈಡಾಗಿದೆ.

ಕರ್ನಾಟಕ 'ರಾಜ್ಯ ಧ್ವಜ'ದ ವಿನ್ಯಾಸಕ್ಕೆ ತಜ್ಞರ ಸಮಿತಿ ರಚನೆ

ಕರ್ನಾಟಕದಲ್ಲೇ ಕನ್ನಡನಾಡಿಗೊಂದು ಧ್ವಜ ಬೇಕು ಮತ್ತು ಬೇಡ ಎಂಬ ಎರಡು ಬಣಗಳು ವಾದವಾಗ್ವಾದ, ಹೋರಾಟಕ್ಕಿಳಿದಿವೆ. ಇದು ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಕಂಡರೂ ಇದರ ಹಿಂದಿರುವ ಸಿದ್ದರಾಮಯ್ಯನವರ ಹುನ್ನಾರ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರಿಂದ ಕನ್ನಡನಾಡೇ ಇಬ್ಭಾಗವಾದರೂ ಅಚ್ಚರಿಯಿಲ್ಲ.

ಸದ್ಯದಲ್ಲೇ ಕನ್ನಡ ಧ್ವಜವಾಗಲಿದೆ 'ರಾಜ್ಯ ಧ್ವಜ' : ಸಿದ್ದರಾಮಯ್ಯ

ಇನ್ನೇನು ವಿಧಾನಸಭೆ ಚುನಾವಣೆ ಹತ್ತಿರದಲ್ಲಿಯೇ ಬರಲಿದೆ. ಕರ್ನಾಟಕ ಧ್ವಜದ ವಿವಾದವನ್ನು ಮುಂದಿಟ್ಟುಕೊಂಡು ಕನ್ನಡಿಗರನ್ನು ಸೆಳೆಯುವುದು ಸಿದ್ದರಾಮಯ್ಯನವರ ಮಾಸ್ಟರ್ ಪ್ಲಾನ್ ಆಗಿದ್ದರೂ ಆಗಿರಬಹುದು. ಬಿಜೆಪಿ ಪಕ್ಷ ಹಿಂದೂಸ್ತಾನದ ಬಗ್ಗೆ ಮಾತುಕತೆ ಎತ್ತಿರುವಾಗ, ಸಿದ್ದರಾಮಯ್ಯನವರು ಕನ್ನಡ ಧ್ವಜವನ್ನು ಎತ್ತಿಹಿಡಿಯಲು ಹೊರಟಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಅಧಿಕೃತ ಬಾವುಟ ಇಲ್ಲ

ಇದರ ಹಿಂದೆ ರಾಜಕೀಯ ಹುನ್ನಾರ ಏನೇ ಇರಲಿ, ಕನ್ನಡ ನಾಡಿನ ಜನರು ಈ ವಿವಾದದ ಬಗ್ಗೆ ಏನು ಹೇಳುತ್ತಾರೆ, ನೋಡೋಣ ಬನ್ನಿ.

ಕನ್ನಡ ಧ್ವಜ ಬೇಡವೆಂದರೆ, ಕರ್ನಾಟಕ ಹೆಸರಾದರೂ ಏಕೆ?

ಕನ್ನಡ ಧ್ವಜ ಬೇಡವೆಂದರೆ, ಕರ್ನಾಟಕ ಹೆಸರಾದರೂ ಏಕೆ?

ಇಂಡಿಯಾಗೆ ಮೂರು ಬಣ್ಣದ ಬಾವುಟ ಇರುವಾಗ ಕರ್ನಾಟಕಕ್ಕೆ ಬೇರೆ ಬಾವುಟ ಬೇಡ. ಇಂಡಿಯಾಗೆ ದೇಶದ ಹಾಡು ಇರುವಾಗ ಕರ್ನಾಟಕಕ್ಕೆ ನಾಡಗೀತೆ ಬೇಡ. ಟೀಮ್ ಇಂಡಿಯಾ ಇರುವಾಗ ಕರ್ನಾಟಕ ರಣಜಿ ತಂಡ ಬೇಡ. ದೇಶದ ಒಗ್ಗಟ್ಟಿಗೆ ಹಿಂದಿ ಇರುವಾಗ ಕನ್ನಡ, ಮಲಯಾಳಿ, ಮರಾಟಿ, ಬಂಗಾಳಿ ಯಾವ್ದೂ ಬೇಡ.. ಇನ್ನು ಕರ್ನಾಟಕ, ತಮಿಳುನಾಡು, ಆಂಧ್ರ, ಅಸ್ಸಾಮ್... ಹೆಸರು... ಅದೂ ಬೇಡ... ಇಂಡಿಯಾ 1, ಇಂಡಿಯಾ 2, ಇಂಡಿಯಾ 3 ...ಅಂತ ಆಗಬಹುದ?

ಕಲ್ಯಾಣ ರಾಮನ್ ಚಂದ್ರಶೇಖರನ್

ಈ ಬಾವುಟದ ಪರಿಕಲ್ಪನೆ ಹೇರಿಕೆಯೋ

ಈ ಬಾವುಟದ ಪರಿಕಲ್ಪನೆ ಹೇರಿಕೆಯೋ

#ಉತ್ತರ_ಕನ್ನಡ ಜಿಲ್ಲೆಯವರೆಲ್ಲ ಒಂದಾಗಿ‌. ನಮಗೂ ಒಂದು #ಧ್ವಜ ಬ್ಯಾಡ್ವೆ? (ಸಂವಿಧಾನದ ಯಾವ ವಿಧಿ ರಾಜ್ಯಗಳು ಧ್ವಜ ಹೊಂದದಂತೆ ನಿರ್ಬಂಧ ವಿಧಿಸುತ್ತದೆ? - #ಮುಖ್ಯಮಂತ್ರಿ_ಸಿದ್ದರಾಮಯ್ಯ). ಈ ಬಾವುಟದ ಪರಿಕಲ್ಪನೆ ಹೇರಿಕೆಯೋ, ಇನ್ಯಾವ ನಿಗೂಢ ಉದ್ದೇಶದ್ದೋ ಗೊತ್ತಾಗಲಿಲ್ಲ. ಬಲ್ಲವರು ವಿವರವಾಗಿ (ಕೊಂಕು, ತಮಾಷೆ ಇತ್ಯಾದಿ ಇಲ್ಲದೆ) ಉತ್ತರಿಸಬಹುದು.

ರವೀಂದ್ರ ಮಾವಖಂಡ

ಸುರೇಶ್ ಕುಮಾರ್ ಅವರಿಗೆ ದಿನೇಶ್ ಪ್ರಶ್ನೆ

ಸುರೇಶ್ ಕುಮಾರ್ ಅವರಿಗೆ ದಿನೇಶ್ ಪ್ರಶ್ನೆ

ನಮ್ಮ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರಚಿಸುವ ಕುರಿತು ಸಮಿತಿ ಘೋಷಣೆ ಮಾಡುವ ಮೊದಲು ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆಯೇ ಎಂಬುದನ್ನು ಸರಕಾರ ಪರಿಶೀಲಿಸಬೇಕಿತ್ತಲ್ಲವೇ? ನರ್ಸರಿ ವಿದ್ಯಾರ್ಥಿಗಳು ಕೇಳುವ ಈ ಪ್ರಶ್ನೆಯನ್ನು ಕೇಳಿದವರು ನನ್ನ ಸ್ನೇಹಿತರು, 'ಸಜ್ಜನ' ಶಾಸಕರು, ಕಾನೂನು ಪದವೀಧರರು ಮತ್ತು ಮಾಜಿ ಕಾನೂನು ಸಚಿವರಾದ ಸುರೇಶ್ ಕುಮಾರ್. ಏನು ಸ್ವಾಮಿ, ಸಂವಿಧಾನದ ಪ್ರತಿಯೂ ನಿಮ್ಮ ಮನೆಯಲ್ಲಿ ಇಲ್ಲವೇ?

ದಿನೇಶ್ ಅಮಿನಮಟ್ಟು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ

ಧ್ವಜ ಕುರಿತು ಸುರೇಶ್ ಕುಮಾರ್ ವಾದ

ಧ್ವಜ ಕುರಿತು ಸುರೇಶ್ ಕುಮಾರ್ ವಾದ

ನಮ್ಮ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರಚಿಸುವ ಕುರಿತು ಸಮಿತಿ ಘೋಷಣೆ ಮಾಡುವ ಮೊದಲು ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆಯೇ ಎಂಬುದನ್ನು ಸರಕಾರ ಪರಿಶೀಲಿಸಬೇಕಿತ್ತಲ್ಲವೇ?

ಸುರೇಶ್ ಕುಮಾರ್, ರಾರಾಜಿನಗರ ಶಾಸಕ

ಮತ್ತೊಂದು ಹೊಸ ಬಾವುಟವೇಕೆ?

ಮತ್ತೊಂದು ಹೊಸ ಬಾವುಟವೇಕೆ?

ತುಳುನಾಡಿನವರು, ಕೊಡವರು, ಕೊಂಕಣಿಗರು ನಮಗೂ ನಮ್ಮದೇ ಬಾವುಟಬೇಕೆಂದು ಈಗಾಗಲೆ ದನಿಯೆತ್ತಿದ್ದಾರೆ. ಅವರಿಗೇನುತ್ತರಿಸುವಿರಿ ಕನ್ನಡ ಪರ ಹೋರಾಟಗಾರರೆ? ಕರ್ನಾಟಕ ರಾಜ್ಯಕ್ಕೆ ಈಗಾಗಲೆ ಮಾ. ರಾಮಮೂರ್ತಿಯವರ ಕೆಂಪು ಹಳದಿ ಬಣ್ಣದ ಕನ್ನಡ ಬಾವುಟವಿರುವಾಗ ಮತ್ತೊಂದು ಹೊಸ ಬಾವುಟವೇಕೆ?

ಸನಾತನಿ ಕನ್ನಡ ಅಭಿಮಾನಿ

ಬಾವುಟ ಏರಿಸಿ ಅಭಿಮಾನ ತೋರುವ ಅಗತ್ಯವಿಲ್ಲ

ಬಾವುಟ ಏರಿಸಿ ಅಭಿಮಾನ ತೋರುವ ಅಗತ್ಯವಿಲ್ಲ

ಕನ್ನಡ ನಾಡಿನ ಬಗ್ಗೆ ನನಗಿರುವ ಅಭಿಮಾನವನ್ನು ಬಾವುಟ ಏರಿಸಿ, ಓರಾಟಮಾಡಿ ಜಾಹೀರುಪಡಿಸಬೇಕಾದ ಅನಿವಾರ್ಯ ನನಗಿಲ್ಲ. ಕೆಟ್ಟಪದಗಳ ಬಳಕೆ ಮಾಡದೇ ನುಡಿಯುವುದನ್ನು ಮತ್ತು ಬರೆಯುವುದನ್ನು ರೂಢಿಸಿಕೊಂಡರೆ ಭಾಷಾಭಿಮಾನ ಹಾಗೂ ಕೈಲಾದಷ್ಟು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರೆ ನಾಡಿನ ಮೇಲಿರುವ ಅಭಿಮಾನ ತಂತಾನೆ ಬಹಿರಂಗಗೊಳ್ಳುತ್ತವೆ. ರಾಜಕೀಯ ಲೆಕ್ಕಾಚಾರಕ್ಕೆ ನನ್ನ ಅಭಿಮಾನವನ್ನು ಒತ್ತೆ ಇಡಬೇಕಾಗಿಲ್ಲ.

ಆತ್ರಾಡಿ ಸುರೇಶ ಹೆಗ್ಡೆ

ಮತ್ತೊಂದು ಹೊಸ ಬಾವುಟವೇಕೆ?

ಮತ್ತೊಂದು ಹೊಸ ಬಾವುಟವೇಕೆ?

ಕರ್ನಾಟಕ ರಾಜ್ಯಕ್ಕೆ ಈಗಾಗಲೆ ಮಾ. ರಾಮಮೂರ್ತಿಯವರ ಕೆಂಪು ಹಳದಿ ಬಣ್ಣದ ಕನ್ನಡ ಬಾವುಟವಿರುವಾಗ ಮತ್ತೊಂದು ಹೊಸ ಬಾವುಟವೇಕೆ? ತುಳುನಾಡಿನವರು, ಕೊಡವರು ನಮಗೂ ನಮ್ಮದೇ ಬಾವುಟಬೇಕೆಂದು ಈಗಾಗಲೆ ದನಿಯೆತ್ತಿದ್ದಾರೆ. ಅವರಿಗೇನುತ್ತರಿಸುವುದು? ಈ ಸರಕಾರಾನ, ಸಮಿತಿ ಸದಸ್ಯರನ್ನ ನಂಬೋಕ್ಕಾಗಲ್ಲ ಸ್ವಾಮಿ. ಅಲ್ಪಸಂಖ್ಯಾತರ ವೋಟಿಗಾಗಿ ಕೆಂಪು, ಹಳದಿ ಮದ್ಯೆ ಹಸಿರನ್ನೂ ಸೇರಿಸಿ ಜಾತ್ಯಾತೀತ ಕರ್ನಾಟಕದ ಬಾವುಟ ಎಂದು ಮಾಡುವುದಕ್ಕೂ ಹೇಸೊಲ್ಲ ಈ ಭ್ರಷ್ಟರು!

English summary
Do we really want separate flag for Karnataka? Debate is on in social media. Facebook friends have expressed their views on this burning issue, which has been started by chief minister of Karnataka Siddaramaiah. What is your opinion?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more