ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಎಚ್. ಡಿ. ದೇವೇಗೌಡ ಭೇಟಿಯಾದ ಡಿ. ಕೆ. ಸುರೇಶ್

|
Google Oneindia Kannada News

Recommended Video

D K Shivakumar case : ಎಚ್. ಡಿ. ದೇವೇಗೌಡ ಭೇಟಿಯಾದ ಡಿ. ಕೆ. ಸುರೇಶ್ | Oneindia Kannada

ನವದೆಹಲಿ, ಸೆಪ್ಟೆಂಬರ್ 25 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ವಾಕ್ಸಮರ ನಡೆದಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಭೇಟಿ ಮಾಡಿದರು.

ದೆಹಲಿಯಲ್ಲಿರುವ ಎಚ್. ಡಿ. ದೇವೇಗೌಡರ ನಿವಾಸಕ್ಕೆ ಮಂಗಳವಾರ ಡಿ. ಕೆ. ಸುರೇಶ್ ಭೇಟಿ ನೀಡಿದರು. ಮಾಜಿ ಸಚಿವ ಎಚ್. ಡಿ. ರೇವಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಡಿ. ಕೆ. ಶಿವಕುಮಾರ್ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

ಡಿಕೆ ಶಿವಕುಮಾರ್ ಭೇಟಿ ಮಾಡದೆ ಹೊರಟ ಸೋನಿಯಾ: ಕಾರಣಗಳುಡಿಕೆ ಶಿವಕುಮಾರ್ ಭೇಟಿ ಮಾಡದೆ ಹೊರಟ ಸೋನಿಯಾ: ಕಾರಣಗಳು

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದಾರೆ. ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಇಂದು ತೀರ್ಪು ಪ್ರಕಟವಾಗಲಿದೆ.

ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳುನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಕಾನೂನು ಹೋರಾಟವನ್ನು ನಡೆಸುವ ಕುರಿತು ಡಿ. ಕೆ. ಸುರೇಶ್ ಎಚ್. ಡಿ. ದೇವೇಗೌಡರ ಸಲಹೆಯನ್ನು ಪಡೆದಿದ್ದಾರೆ. ಡಿ. ಕೆ. ಶಿವಕುಮಾರ್ ಬಂಧನವಾದ ನಂತರ ಅವರ ಕುಟುಂಬಕ್ಕೆ ಎಚ್. ಡಿ. ಕುಮಾರಸ್ವಾಮಿ ಸಹ ಧೈರ್ಯ ಹೇಳಿದ್ದರು.

ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ ಡಿಕೆ ಶಿವಕುಮಾರ್ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ ಡಿಕೆ ಶಿವಕುಮಾರ್

ಎಚ್. ಡಿ. ದೇವೇಗೌಡರು ಹೇಳಿದ್ದೇನು?

ಎಚ್. ಡಿ. ದೇವೇಗೌಡರು ಹೇಳಿದ್ದೇನು?

ಡಿ. ಕೆ. ಸುರೇಶ್ ಭೇಟಿಯ ಬಳಿಕ ಮಾತನಾಡಿದ ಎಚ್. ಡಿ. ದೇವೇಗೌಡರು, "ಒಳ್ಳೆಯ ತೀರ್ಥ ಕ್ಷೇತ್ರದಲ್ಲಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ದೇವರ ದಯೆಯಿಂದ ಡಿ. ಕೆ. ಶಿವಕುಮಾರ್ ಇವತ್ತು ಬಿಡುಗಡೆಯಾಗುವ ವಿಶ್ವಾಸವಿದೆ" ಎಂದು ಹೇಳಿದರು.

ಬಿಡುಗಡೆ ನಿರೀಕ್ಷೆಯಲ್ಲಿ ಅಭಿಮಾನಿಗಳು

ಬಿಡುಗಡೆ ನಿರೀಕ್ಷೆಯಲ್ಲಿ ಅಭಿಮಾನಿಗಳು

ಸೆಪ್ಟೆಂಬರ್ 3ರಂದು ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್‌ರನ್ನು ಬಂಧಿಸಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್‌ಗೆ ಇಂದು ಜಾಮೀನು ನೀಡಲಿದ್ದು, ಅವರು ಬಿಡುಗಡೆಯಾಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

ನ್ಯಾಯಾಂಗ ಬಂಧನ

ನ್ಯಾಯಾಂಗ ಬಂಧನ

ಡಿ. ಕೆ. ಶಿವಕುಮಾರ್‌ರನ್ನು ಅಕ್ಟೋಬರ್ 1ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದ್ದು ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಇಂದು ಅವರಿಗೆ ಜಾಮೀನು ಸಿಗದಿದ್ದರೆ ಜೈಲಿನಲ್ಲಿಯೇ ಇರಬೇಕಾಗುತ್ತದೆ.

ದೆಹಲಿ ಹೈಕೋರ್ಟ್ ಮೊರೆ

ದೆಹಲಿ ಹೈಕೋರ್ಟ್ ಮೊರೆ

ಒಂದು ವೇಳೆ ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್‌ಗೆ ಜಾಮೀನು ನೀಡಲು ನಿರಾಕರಿಸಿದರೆ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯ ವಿಚಾರಣೆ ನಡೆಯುವ ತನಕ ಜೈಲಿನಲ್ಲಿಯೇ ಇರಬೇಕು.

English summary
Congress leader and D.K.Shivakumar brother D.K.Suresh met the JD(S) supremo H.D.Deve Gowda in New Delhi. D.K.Shivakumar bail application verdict will announced today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X