ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮಾ-ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಸಿಎಂಗೆ ಡಿಕೆಶಿ ಪತ್ರ

|
Google Oneindia Kannada News

ಬೆಂಗಳೂರು, ಮಾರ್ಚ್‌ 21: ಕೃಷ್ಣಾ-ಭೀಮಾ ನದಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸಿಎಂಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಅವರಿಗೆ ಪತ್ರ ಬರೆದಿದ್ದಾರೆ.

ಉತ್ತರ ಕರ್ನಾಟಕದ ಜನ ತೀವ್ರ ಬರಗಾಲದಿಂದ ತತ್ತರಿಸಿದ್ದು, ಮಹಾರಾಷ್ಟ್ರದ ಕೋಯ್ನಾ, ಉಜ್ಜಯಿನಿ ಅಣೆಕಟ್ಟೆಗಳಿಂದ ರಾಜ್ಯದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುವಂತೆ ಕುಮಾರಸ್ವಾಮಿ ಅವರು ಮಹಾರಾಷ್ಟ್ರ ಸಿಎಂ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಬಿಎಸ್ ವೈ-ಡಿಕೆಶಿ ದೋಸ್ತಿ ಬೇರೆ, ಚುನಾವಣಾ ಅಖಾಡ ಬೇರೆ:ಮಧು ಬಂಗಾರಪ್ಪಬಿಎಸ್ ವೈ-ಡಿಕೆಶಿ ದೋಸ್ತಿ ಬೇರೆ, ಚುನಾವಣಾ ಅಖಾಡ ಬೇರೆ:ಮಧು ಬಂಗಾರಪ್ಪ

ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಈ ನಾಲ್ಕು ಜಿಲ್ಲೆಗಳಿಗೆ ನೀರು ಹರಿಸಲು ಕೃಷ್ಣಾ-ಭೀಮಾ ನದಿಗೆ ನೀರು ಬಿಡಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

DK Shivakumar wrote letter to Maharashtra CM to release water

ಬಾಕಿ ಅನುದಾನ ಬಿಡುಗಡೆ ಮಾಡಲು ಮೋದಿಗೆ ಎಚ್ಡಿಕೆ ಒತ್ತಾಯಬಾಕಿ ಅನುದಾನ ಬಿಡುಗಡೆ ಮಾಡಲು ಮೋದಿಗೆ ಎಚ್ಡಿಕೆ ಒತ್ತಾಯ

ಕರ್ನಾಟಕ ರಾಜ್ಯವು ಈಗಾಗಲೇ ತೀವ್ರ ಬರಗಾಲ ಎದುರಿಸುತ್ತಿದೆ. ಉತ್ತರ ಕರ್ನಾಟಕದ ಬಹುಪಾಲು ಎಲ್ಲ ಜಿಲ್ಲೆಗಳೂ ಸಹ ಬರಪೀಡಿತ ಜಿಲ್ಲೆಗಳಾಗಿವೆ. ಮುಂಗಾರು ಕೊರತೆ ತೀವ್ರವಾಗಿದ್ದು ಮಾರ್ಚ್‌ ಆರಂಭದಲ್ಲಿಯೇ ನದಿಗಳಲ್ಲಿ ನೀರು ಕೊರತೆ ಪ್ರಾರಂಭವಾಗಿದೆ. ಈ ಎಲ್ಲ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಡಿಕೆಶಿ-ಎಚ್‌ಡಿಕೆ ಭೇಟಿ: ಮಂಡ್ಯ-ಶಿವಮೊಗ್ಗಕ್ಕೆ ರಣತಂತ್ರಡಿಕೆಶಿ-ಎಚ್‌ಡಿಕೆ ಭೇಟಿ: ಮಂಡ್ಯ-ಶಿವಮೊಗ್ಗಕ್ಕೆ ರಣತಂತ್ರ

ಮಹಾರಾಷ್ಟ್ರ ಸರ್ಕಾರವು ಮಾನವೀಯತೆಯ ಆಧಾರದ ಮೇಲೆ ಜನರು ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಪೂರೈಸಲು ಕೊಯ್ನಾದಿಂದ ಕೃಷ್ಣ ನದಿಗೆ 2 ಟಿಎಂಸಿ ಹಾಗೂ ಉಜ್ಜನಿಯಿಂದ ಭೀಮಾ ನದಿಗೆ 2 ಟಿಎಂಸಿ ನೀರನ್ನು ಹರಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

English summary
Water resource minister DK Shivakumar wrote a letter to Maharastra CM Devendra Fadnavis. He requests to release water to Krishna and Bhima river. North Kartanata affected from drought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X