ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಅಖಾಡಕ್ಕೆ ಆಹ್ವಾನಿಸಿದ ಎಂಟಿಬಿಗೆ ಡಿಕೆ ಶಿವಕುಮಾರ್ ಕೊಟ್ಟ ಉತ್ತರವೇನು?

|
Google Oneindia Kannada News

Recommended Video

D K Shivakumar step back on By-Elections | Oneindia Kannada

ಬೆಂಗಳೂರು, ಅಕ್ಟೋಬರ್ 29: ಹೊಸಕೋಟೆ ಚುನಾವಣೆ ರಣರಂಗದಲ್ಲಿ ನೋಡಿಕೊಳ್ಳುತ್ತೇನೆ ಎಂದು ಎಂಟಿಬಿ ನಾಗರಾಜ್‌ಗೆ ಸವಾಲು ಹಾಕಿದ್ದ ಡಿಕೆ ಶಿವಕುಮಾರ್ ಈಗ ಹಿಂದೆ ಸರಿದಿದ್ದಾರೆ.

ಈಗ ನನಗೆ ಯಾವ ವಿಚಾರವೂ ಬೇಡ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ಉಪ ಚುನಾವಣೆ ಅಖಾಡದಿಂದ ಹಿಂದೆ ಸರಿಯುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಬ್ಬಾಳಮ್ಮ ದೇವಿ ದರ್ಶನ ನಂತರ ಸಿಎಂ ಹುದ್ದೆ ಬಗ್ಗೆ ಡಿಕೆಶಿ ಹೇಳಿದ್ದೇನು?ಕಬ್ಬಾಳಮ್ಮ ದೇವಿ ದರ್ಶನ ನಂತರ ಸಿಎಂ ಹುದ್ದೆ ಬಗ್ಗೆ ಡಿಕೆಶಿ ಹೇಳಿದ್ದೇನು?

ದೋಸ್ತಿ ಸರ್ಕಾರ ಪತನಕ್ಕೂ ಮುನ್ನ ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಚರ್ಚೆಯ ವೇಳೆ ಡಿಕೆಶಿ ಅವರು ಎಂಟಿಬಿ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು. ನನ್ನ ನಿನ್ನ ಭೇಟಿ ಹೊಸಕೋಟೆಯ ರಾಜಕೀಯ ರಣರಂಗದಲ್ಲಿ ಎಂದು ಎಂಬಿಟಿಬಿ ಹೇಳಿದ್ದಾರೆ. ಇರಲಿ ನಾನು ಅವರನ್ನು ಅಲ್ಲೇ ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು.

ಕಬ್ಬಾಳು ಗ್ರಾಮದೇವತೆಗೆ ಮೊರೆ

ಕಬ್ಬಾಳು ಗ್ರಾಮದೇವತೆಗೆ ಮೊರೆ

ಮಾಜಿ ಸಚಿವ ಡಿಕೆ ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದಾರೆ. ಸೋಮವಾರ ಸಂಜೆ ಕನಕಪುರದ ಕಬ್ಬಾಳು ಗ್ರಾಮದೇವತೆ ಕಬ್ಬಾಳಮ್ಮಗೆ ಪೂಜೆ ಸಲ್ಲಿಸಿದ್ದ ಡಿಕೆ, ರಾತ್ರಿ 10 ಗಂಟೆಗೆ ಬೆಂಗಳೂರಿನ ವಿಜಯನಗರದಲ್ಲಿರೋ ಚುಂಚನಗಿರಿ ಮಠಕ್ಕೆ ತೆರಳಿದರು. ಶ್ರೀಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಸತತ 3 ಗಂಟೆಗಳ ಕಾಲ ಶ್ರೀಗಳ ಜೊತೆ ರಹಸ್ಯ ಚರ್ಚೆ ನಡೆಸಿ ಕುತೂಹಲ ಮೂಡಿಸಿದ್ರು.

ನನಗೆ ಈಗ ಯಾವ ವಿಚಾರವೂ ಬೇಡ

ನನಗೆ ಈಗ ಯಾವ ವಿಚಾರವೂ ಬೇಡ

ಎಂಟಿಬಿ ನಾಗರಾಜ್ ವಿಚಾರದಲ್ಲಿ ಡಿಕೆ ಶಿವಕುಮಾರ್ ಮಾತು ಬದಲಿಸಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ, ಈಗ ನನಗೆ ಯಾರ ವಿಚಾರವೂ ಬೇಡ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದು ಹೇಳಿದರು.

ಉಪ ಚುನಾವಣಾ ಅಖಾಡಕ್ಕೆ ಡಿಕೆಶಿ ಆಹ್ವಾನಿಸಿದ ಎಂಟಿಬಿ ನಾಗರಾಜ್ಉಪ ಚುನಾವಣಾ ಅಖಾಡಕ್ಕೆ ಡಿಕೆಶಿ ಆಹ್ವಾನಿಸಿದ ಎಂಟಿಬಿ ನಾಗರಾಜ್

ಹೊಸಕೋಟೆ ಅಖಾಡದಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದ ಡಿಕೆಶಿ

ಹೊಸಕೋಟೆ ಅಖಾಡದಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದ ಡಿಕೆಶಿ

ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಅವರ ವಿರುದ್ಧ ಗುಡುಗಿದ್ದ ಡಿಕೆಶಿ, ಹೊಸಕೋಟೆ ಅಖಾಡದಲ್ಲಿ ನೋಡಿಕೊಳ್ಳೋಣ ಎಂದು ಸವಾಲು ಹಾಕಿದ್ದರು. ಆದರೆ ಸೋಮವಾರ ತದ್ವಿರುದ್ಧವಾಗಿ ಮಾತನಾಡಿದ್ದರು.

ಉಪ ಚುನಾವಣೆ ಪ್ರಚಾರದಿಂದ ದೂರ ಇರುತ್ತಾರಾ?

ಉಪ ಚುನಾವಣೆ ಪ್ರಚಾರದಿಂದ ದೂರ ಇರುತ್ತಾರಾ?

ಕೆಪಿಸಿಸಿ ಅಧ್ಯಕ್ಷ ಗಾದಿ ಕೈಗೆ ಸಿಗೋವರೆಗೂ, ಅನಾರೋಗ್ಯದ ನೆಪ ಹೇಳಿ ಪಕ್ಷದ ಚಟುವಟಿಕೆ, ಉಪಚುನಾವಣಾ ಪ್ರಚಾರದಿಂದ ದೂರ ಇರುತ್ತಾರಾ ಎನ್ನುವ ಪ್ರಶ್ನೆ ಡಿಕೆ ನಡೆಯಿಂದ ಉದ್ಭವಿಸಿವೆ.

English summary
DK Shivakumar said, Now I have no idea that everything will be answered in time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X