ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಚಾಲಕನ ಅಭಿಮಾನಕ್ಕೆ ಕರಗಿದ ಡಿ. ಕೆ. ಶಿವಕುಮಾರ್!

|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ತಮ್ಮ ಅಪ್ಪಟ ಅಭಿಮಾನಿಯನ್ನು ಸನ್ಮಾನಿಸಿದರು. ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದಾಗ ಮೂರು ದಿನಗಳ ಕಾಲ ಪ್ರಯಾಣಿಕರಿಗೆ ಉಚಿತ ಆಟೋ ಸೇವೆಯನ್ನು ಒದಗಿಸಿ ಆಟೋ ಚಾಲಕ ಅಭಿಮಾನ ಮೆರೆದಿದ್ದರು.

ಮಂಗಳವಾರ ಸದಾಶಿವನಗರದ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಭದ್ರಪ್ಪ ಲೇಔಟ್ ನಿವಾಸಿ ದಿಲೀಪ್‌ರನ್ನು ಸನ್ಮಾನಿಸಿದರು. ಹಾಸನ ಮೂಲದ ದಿಲೀಪ್ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ. ಅವರು ಡಿ. ಕೆ. ಶಿವಕುಮಾರ್‌ ಅಪ್ಪಟ ಅಭಿಮಾನಿ.

ಡಿಕೆಶಿ ಬಿಡುಗಡೆ ಸಂಭ್ರಮಿಸಲು ಉಚಿತ ಆಟೋ ಪ್ರಯಾಣಡಿಕೆಶಿ ಬಿಡುಗಡೆ ಸಂಭ್ರಮಿಸಲು ಉಚಿತ ಆಟೋ ಪ್ರಯಾಣ

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯ ತಿಹಾರ್ ಜೈಲಿನಿಂದ ಹೊರಬಂದು ಬೆಂಗಳೂರಿಗೆ ಆಗಮಿಸಿದಾಗ ಮೂರು ದಿನಗಳ ಕಾಲ ಪ್ರಯಾಣಿಕರಿಗೆ ಉಚಿತವಾಗಿ ಆಟೋ ಸೇವೆಯನ್ನು ದಿಲೀಪ್ ಒದಗಿಸಿದ್ದರು.

ಡಿಕೆ ಶಿವಕುಮಾರ್ ಬೆಂಬಿಡದ ಇ.ಡಿ: ಸುಪ್ರೀಂಕೋರ್ಟ್‌ಗೆ ಮೇಲ್ಮನವಿಡಿಕೆ ಶಿವಕುಮಾರ್ ಬೆಂಬಿಡದ ಇ.ಡಿ: ಸುಪ್ರೀಂಕೋರ್ಟ್‌ಗೆ ಮೇಲ್ಮನವಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. ದೆಹಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಡಿ. ಕೆ. ಶಿವಕುಮಾರ್ ಅಕ್ಟೋಬರ್ 23ರಂದು ಬಿಡುಗಡೆಗೊಂಡಿದ್ದರು. ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?

ಯಾರು ಈ ದಿಲೀಪ್?

ಯಾರು ಈ ದಿಲೀಪ್?

ಡಿ. ಕೆ. ಶಿವಕುಮಾರ್ ಅಪ್ಪಟ ಅಭಿಮಾನಿ ದಿಲೀಪ್ ಹಾಸನ ಜಿಲ್ಲೆಯವರು. ಬೆಂಗಳೂರಿನ ಭದ್ರಪ್ಪ ಲೇಔಟ್ ನಿವಾಸಿಯಾಗಿರುವ ಅವರು ಆಟೋ ಓಡಿಸುತ್ತಾರೆ. ತಮ್ಮ ಆಟೋ ಮೇಲೆ ಮುಂದಿನ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅಣ್ಣ ಎಂದು ಬರೆಸಿಕೊಂಡಿದ್ದಾರೆ.

ಆಟೋದಲ್ಲಿ ಉಚಿತ ಪ್ರಯಾಣ

ಆಟೋದಲ್ಲಿ ಉಚಿತ ಪ್ರಯಾಣ

ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದಾಗ ಉಚಿತ ಆಟೋ ಪ್ರಯಾಣವನ್ನು ದಿಲೀಪ್ ನೀಡಿದ್ದರು. 'ಡಿ. ಕೆ. ಶಿವಕುಮಾರ್ ಬಿಡುಗಡೆ ಪ್ರಯುಕ್ತ ಉಚಿತ ಆಟೋ ಪ್ರಯಾಣ(ಅಂತರ 4 ಕಿ. ಮೀ)" ಎಂದು ಆಟೋ ಮೇಲೆ ಬ್ಯಾನರ್ ಕಟ್ಟಿಕೊಂಡಿದ್ದರು.

ಅಭಿಮಾನಕ್ಕೆ ಕರಗಿದ ಬಂಡೆ

ಅಭಿಮಾನಕ್ಕೆ ಕರಗಿದ ಬಂಡೆ

ದಿಲೀಪ್ ಅಭಿಮಾನಕ್ಕೆ ಡಿ. ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ದಿಲೀಪ್‌ರನ್ನು ಸನ್ಮಾನಿಸಿದರು. ಸಾಮಾಜಿಕ ಕಾರ್ಯಗಳನ್ನು ಮುಂದುವರೆಸುವಂತೆ ಅಭಿಮಾನಿಗೆ ನಿರ್ದೇಶಿಸಿದರು.

ಡಿ. ಕೆ. ಶಿವಕುಮಾರ್ ಜೈಲು ಸೇರಿದ್ದರು

ಡಿ. ಕೆ. ಶಿವಕುಮಾರ್ ಜೈಲು ಸೇರಿದ್ದರು

ಡಿ. ಕೆ. ಶಿವಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಗೊಂಡು ಬೆಂಗಳೂರಿಗೆ ಆಗಮಿಸಿದಾಗ ಅದ್ದೂರಿ ಸ್ವಾಗತ ಸಿಕ್ಕಿತು. ಅಕ್ಟೋಬರ್ 26ರಂದು ವಿಮಾನ ನಿಲ್ದಾಣದಿಂದ ಭವ್ಯ ಮರೆವಣಿಗೆಯಲ್ಲಿ ಅವರನ್ನು ಕೆಪಿಸಿಸಿ ಕಚೇರಿಗೆ ಕರೆತರಲಾಗಿತ್ತು.

English summary
Former minister D.K.Shivakumar thanked the auto driver Deelep who celebrate D.K.Shivakumar release by offers 4 km free ride. D.K.Shivakumar released from Tihar jail on October 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X