ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆ ಬಗೆದ್ರೆ ಕಾಂಗ್ರೆಸ್ ಅಂದ್ರು, ಈಗ ಬಿಜೆಪಿಯಲ್ಲಿದ್ದಾರೆ: ಏನು ಮಾಡೋಕಾಗುತ್ತೆ?

|
Google Oneindia Kannada News

ಬೆಂಗಳೂರು, ಜುಲೈ 3: ಯಡಿಯೂರಪ್ಪ ಸರಕಾರ ರಚನೆಗೆ ಕಾರಣೀಕರ್ತರಾದ ಮುಖಂಡರು ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

"ಮುಖಂಡರುಗಳು ಒಬ್ಬರೊನ್ನೊಬ್ಬರು ಭೇಟಿಯಾಗುತ್ತಿರುತ್ತಾರೆ, ಅರ್ಜಿಯನ್ನು ಹಾಕುತ್ತಿರುತ್ತಾರೆ. ಇದೆಲ್ಲಾ ಮೊದಲಿಂದಲೂ ನಡೆದುಕೊಂಡು ಬರುತ್ತಿರುವ ವಿಚಾರಗಳು, ಇದರಲ್ಲಿ ಹೊಸದೇನಿಲ್ಲ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಜ್ಞಾವಂತ ಕನ್ನಡಿಗರಿಗೆ ಬಿಜೆಪಿಯ ಮೋಸ ಅರ್ಥಮಾಡಿಕೊಳ್ಳುವ ಜಾಣ್ಮೆಇದೆಪ್ರಜ್ಞಾವಂತ ಕನ್ನಡಿಗರಿಗೆ ಬಿಜೆಪಿಯ ಮೋಸ ಅರ್ಥಮಾಡಿಕೊಳ್ಳುವ ಜಾಣ್ಮೆಇದೆ

"ಎದೆ ಬಗೆದರೆ ಶಿವಕುಮಾರ್ ಇದ್ದಾರೆ, ಕಾಂಗ್ರೆಸ್ ಇದೆ ಎಂದು ತೋರಿಸುವವರು ಇರುತ್ತಾರೆ. ಎಂ.ಟಿ.ಬಿ ನಾಗರಾಜ್ ಗೆ ನಾನೇ ಟಿಕೆಟ್ ಕೊಡಿಸಿದೆ. ಗೆದ್ದು ಬಂದ, ನನ್ನಿಂದಾಗಿ ಗೆದ್ದರು ಎಂದು ಹೇಳುವುದಿಲ್ಲ"ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.

DK Shivakumar Takes Dig at Leaders Who Joined BJP from Congress

"ನನ್ನ ಎದೆಯಲ್ಲಿ ಕಾಂಗ್ರೆಸ್ಸಿದೆ ಎಂದು ಹೇಳುತ್ತಿದ್ದ ಎಂಟಿಬಿಯವರು ಕಾಂಗ್ರೆಸ್ ಬಿಟ್ಟು ಹೋದರು, ಏನು ಮಾಡೋಕಾಗುತ್ತೆ. ಪಕ್ಷ ಸೇರಲು ಅರ್ಜಿ ಯಾರು ಹಾಕಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ"ಎಂದು ಡಿಕೆಶಿ ಈ ಸಂದರ್ಭದಲ್ಲಿ ಹೇಳಿದರು.

ಎಚ್‌ಡಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಪುತ್ರ ಯತೀಂದ್ರಎಚ್‌ಡಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಪುತ್ರ ಯತೀಂದ್ರ

"ದೇಶದಲ್ಲಿ ವ್ಯಾಕ್ಸಿನೇಶನ್ ಎನ್ನುವುದು ಮಹಾನ್ ಮೋಸ, ಏನು ಮಂತ್ರಿಗಳು ಹೇಳುತ್ತಿದ್ದಾರೋ, ಅದು ಬರೀ ಸುಳ್ಳು. ನನ್ನ ಬಳಿ ಇದಕ್ಕೆ ಸಂಬಂಧ ಪಟ್ಟ ಎಲ್ಲಾ ಮಾಹಿತಿಗಳು ಇವೆ. ಸದ್ಯದಲ್ಲೇ ಪ್ರೆಸ್ ಕಾನ್ಫರೆನ್ಸ್ ಕರೆದು ಬಹಿರಂಗ ಪಡಿಸುತ್ತೇನೆ"ಎಂದು ಡಿಕೆಶಿ ಹೇಳಿದರು.

ನಾಡಿನ ಪೀಠಾಧಿಪತಿಗಳ ಪೈಕಿ ಕೆಲವರು ಬಿಎಸ್ವೈ ಅವರೇ ಸಿಎಂ ಆಗಿ ಮುಂದುವರಿಬೇಕು ಎಂದು ಹೇಳಿರುವ ವಿಚಾರದಲ್ಲಿ ಬೇಸರ ವ್ಯಕ್ತ ಪಡಿಸಿ ಹೇಳಿಕೆ ನೀಡಿದ್ದ ಕುಮಾರಸ್ವಾಮಿಯವರ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿಕೆಶಿ, ಆ ವಿಚಾರವನ್ನು ಅವರಲ್ಲೇ ಕೇಳಿ ಎಂದಿದ್ದಾರೆ.

English summary
KPCC President takes dig at ministers who joined BJP from congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X