ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಕ್ಕ ನೀನು, ನಿನ್ನ ಮಗಳೋ ಕುಸುಮಾ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ?

|
Google Oneindia Kannada News

ಬೆಂಗಳೂರು, ಅ. 23: ನನ್ನ ಜಾತಿ ಕಾಂಗ್ರೆಸ್. ನನಗೆ ಯಾವುದೇ ಜಾತಿಯಿಲ್ಲ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಆರ್ ಆರ್ ನಗರದ ಐಡಿಯಲ್ ಹೋಮ್ ಕಮ್ಯೂನಿಟಿ ಹಾಲ್‌ನಲ್ಲಿ ಸಭೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಬಂಡೆಯಾಗಲು ಇಚ್ಚಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿಕಲ್ಲಾಗುವ ಆಸೆ. ಈ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ ಎಂದು ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ ಅವರ ಪರವಾಗಿ ಆರ್.ಆರ್. ನಗರದ ಒಕ್ಕಲಿಗ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು. ಈಗ ನವರಾತ್ರಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ರಕ್ಷಣೆ ನೀಡಲು ದುರ್ಗಾದೇವಿ, ರಾಜರಾಜೇಶ್ವರಿ ಆಶೀರ್ವಾದ ಬೇಕಿದೆ. ಈ ದೇವತೆಗಳ ಆಶೀರ್ವಾದದೊಂದಿಗೆ ನಾವು ಕ್ಷೇತ್ರದ ಹಿತ ಕಾಯಲು ನೊಂದು ಬೆಂದಿರುವ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ ಎಂದರು.

ಒಕ್ಕಲಿಗರ ಸಭೆಯಲ್ಲಿ ಭಾವುಕರಾದ ಆರ್‌ಆರ್‌ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ!ಒಕ್ಕಲಿಗರ ಸಭೆಯಲ್ಲಿ ಭಾವುಕರಾದ ಆರ್‌ಆರ್‌ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ!

ಡಿಕೆ ರವಿ ಹೇಡಿತನ ತೋರಿದ

ಡಿಕೆ ರವಿ ಹೇಡಿತನ ತೋರಿದ

ನಮ್ಮ ರವಿ ಪತ್ನಿ ಕುಸುಮಾ. ಅವರ ಕುಟುಂಬ ನನಗೆ ಮುಂಚೆಯಿಂದಲೂ ಗೊತ್ತಿದೆ. ಪಾಪ ಆತ ಯಾವುದೋ ಕಾರಣಕ್ಕೆ ಹೇಡಿತನ ತೋರಿಬಿಟ್ಟ. ಆತ ಯಾವುದೇ ಪರಿಸ್ಥಿತಿ ಇದ್ದರೂ ಧೈರ್ಯದಿಂದ ಎದುರಿಸಿ ತನ್ನ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ನೋಡಿಕೊಳ್ಳಬೇಕಿತ್ತು. ನಮ್ಮ ಸಮಾಜ ಅವರನ್ನು ಎಷ್ಟು ಪ್ರೀತಿ, ಗೌರವದಿಂದ ನೋಡುತ್ತಿತ್ತು.

ಆದರೆ ನಷ್ಟ ಆಗಿದ್ದು ಯಾರಿಗೆ? ಆತನ ಸಾವಿಗೆ ಅನೇಕರು ಕೊಲೆಯಾಯ್ತು ಅಂತಾ ಧರಣಿ ಮಾಡಿದ್ದನ್ನು ನೋಡಿದ್ದೇವೆ. ನಮ್ಮದೇ ಸರ್ಕಾರ ಸಿಬಿಐ ತನಿಖೆಗೆ ಕೊಟ್ಟೆವು. ಯಾವ ಯಾವ ಹೇಳಿಕೆ ಕೊಡಿಸಿದ್ದಾರೆ ಎಂಬ ದಾಖಲೆಯೂ ನಮ್ಮ ಬಳಿ ಇದೆ. ಆದರೆ ನಾವು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದರು.

ಶೋಭಕ್ಕ ನೀನು ಏನ್ ಹೇಳುತ್ತಿದ್ದೆ?

ಶೋಭಕ್ಕ ನೀನು ಏನ್ ಹೇಳುತ್ತಿದ್ದೆ?

ನಮ್ಮ ಹೆಣ್ಣು ಮಗಳು ಎಲ್ಲರ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ. ಆದರೆ ನಮ್ಮ ಶೋಭಕ್ಕ ಚುನಾವಣೆ ವೇಳೆ ಗಂಡನ ಹೆಸರು ಬಳಸಿಕೊಳ್ಳಬೇಡ ಅಂತಾರಲ್ಲ ಹೇಗೆ ಸಾಧ್ಯ? ಶೋಭಕ್ಕ ನೀನು, ನಿನ್ನ ಮಗಳೋ, ತಂಗಿನೋ ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ? ಎಂದು ಡಿಕೆ ಶಿವಕುಮಾರ್ ಅವರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನೆ ಮಾಡಿದರು.

ರಾಜಕಾರಣಕ್ಕೆ ಸಂಪ್ರದಾಯವನ್ನೇ ತೆಗೆಯಬೇಕು ಎನ್ನುವುದು ಎಷ್ಟು ಸರಿ? ನಾನು ಕುಸುಮ ಅವರನ್ನು ಕೇಳಿದೆ ಮತದಾರ ಗುರುತಿನ ಚೀಟಿಯಲ್ಲಿ ಏನಂತಾ ಹೆಸರಿದೆ ಎಂದು. ಆರಂಭದಲ್ಲಿ ಕುಸುಮಾ ಹೆಚ್ ಅಂತಾ ಕೊಟ್ಟಿದ್ದು ಹಾಗೆ ಇದೆ ಎಂದರು. ಆದರೆ ಪಾಸ್ ಪೋರ್ಟ್ ಇತರ ದಾಖಲೆಯಲ್ಲಿ ಕುಸುಮಾ ಡಿ.ಕೆ ರವಿ ಅಂತಾನೆ ಇದೆ.

ಹೆಣ್ಣು ಮಗಳು ನೊಂದಿದ್ದಾಳೆ. ಸಮಾಜ ಸೇವೆ ಮಾಡಲು ಮುಂದೆ ಬಂದಿದ್ದಾಳೆ. ಅಂತಾ ನಾನು ಹಾಗೂ ಸುರೇಶ್ ಕೂತು ಮಾತನಾಡಿ ಈಕೆಯನ್ನು ಪಕ್ಷದ ಅಭ್ಯರ್ಥಿಯಾಗಿ ಮಾಡಲು ನಿರ್ಧರಿಸಿದೆವು ಎಂದು ಡಿಕೆ ಶಿವಕುಮಾರ್ ಹೇಳಿದರು.

ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು

ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು

ಕೆಲವರು ಬಂಡೆನ ಡೈನಮೇಟ್ ಇಟ್ಟು ಪುಡಿ ಪುಡಿ ಮಾಡುತ್ತೇವೆ ಅಂತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡುಗಂಭವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಲು ಸಾಧ್ಯ. ಮಿತಿ ಮೀರಿದರೆ . ಈ ಜನ ವಿರೋಧಿ ಸರ್ಕಾರಕ್ಕೆ ಜನ ಬೀಸುವ ಕಲ್ಲಾಗುವೆ. ಹೀಗಾಗಿ ನಾನು ಕೇವಲ ಬಂಡೆಯಾಗಲು ಇಚ್ಚಿಸುವುದಿಲ್ಲ. ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು ಎಂದು ಡಿಕೆ ಶಿವಕುಮಾರ್ ಅವರು ಹೇಳಿದರು.

Recommended Video

India China Border : ಇವರು ಬುದ್ದಿ ಕಲಿಯಲ್ಲಾ | Oneindia Kannada
ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಸೇರುತ್ತವೆ

ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಸೇರುತ್ತವೆ

ನಾವು ಬೀಜ ಬಿತ್ತುವಾಗ ಅದು ಮರವಾಗಿ ಹಣ್ಣಾದರೂ ನೀಡಲಿ, ನೆರಳಾದರು ನೀಡಲಿ ಎಂಬ ಒಳ್ಳೆ ಭಾವನೆಯಿಂದ ಬಿತ್ತುತ್ತೇವೆ. ಎಲ್ಲ ಬೀಜಗಳು ಹಣ್ಣನೇ ನೀಡಬೇಕು ಎಂದು ಬಯಸುವುದಿಲ್ಲ. ಕೆಲವೊಮ್ಮೆ ಒಬ್ಬರು ಮರ ಬೆಳೆಸುವವರೆ, ಮತ್ತೊಬ್ಬರು ಹಣ್ಣು ತಿನ್ನುತ್ತಾರೆ. ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಬಂದು ಸೇರುತ್ತದೆ. ಇದು ಪ್ರಕೃತಿ ನಿಯಮ ಎಂದರು.

English summary
KPCC President DK Shivakumar has spoken sentimental about RR Nagara by election Congress candidate H. Kusuma. He spoke at a meeting of the Federation of Okkaliga Sangha Organizations held at Ideal Home Community Hall in RR Nagara. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X