ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸಿಐಆರ್ ರದ್ದಿಗೆ ಡಿ.ಕೆ.ಶಿವಕುಮಾರ್ ಮನವಿ, ಫೆ.27ರಂದು ತೀರ್ಪು

|
Google Oneindia Kannada News

ಬೆಂಗಳೂರು, ಫೆಬ್ರವರಿ 06 : ಇಸಿಐಆರ್ ರದ್ದುಗೊಳಿಸುವಂತೆ ಕೋರಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯ ದಾಖಲು ಮಾಡಿರುವ Enforcement Case Information Report (ECIR) ರದ್ದುಗೊಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಫೆಬ್ರವರಿ 27ರಂದು ತೀರ್ಪನ್ನು ಪ್ರಕಟಿಸಲಾಗುತ್ತದೆ.

ಹಣ ಪತ್ತೆ ಕೇಸು : ಹೈಕೋರ್ಟ್ ಮೊರೆ ಹೋದ ಡಿ.ಕೆ.ಶಿವಕುಮಾರ್ಹಣ ಪತ್ತೆ ಕೇಸು : ಹೈಕೋರ್ಟ್ ಮೊರೆ ಹೋದ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್ ಅವರ ದೆಹಲಿಯ ನಿವಾಸದ ಮೇಳೆ ದಾಳಿ ನಡೆಸಿದಾಗ ಅವರ ಫ್ಲ್ಯಾಟ್‌ನಲ್ಲಿ ದಾಖಲೆ ಇಲ್ಲದ 8 ಕೋಟಿ ಹಣ ಪತ್ತೆಯಾಗಿತ್ತು. ಈ ದಾಳಿಯ ವರದಿಯನ್ನು ಜಾರಿ ನಿರ್ದೇಶನಾಲಯಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದರು.

ಸಂಕಷ್ಟ ನಿವಾರಣೆಗೆ ಮೂಕಾಂಬಿಕೆಗೆ ಮೊರೆ ಹೋದ ಸಚಿವ ಡಿಕೆ ಶಿವಕುಮಾರ್ಸಂಕಷ್ಟ ನಿವಾರಣೆಗೆ ಮೂಕಾಂಬಿಕೆಗೆ ಮೊರೆ ಹೋದ ಸಚಿವ ಡಿಕೆ ಶಿವಕುಮಾರ್

DK Shivakumar seeks ECIR quash high court reserves judgement

ಈ ವರದಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಇಸಿಐರ್ ದಾಖಲು ಮಾಡಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ಸಂಬಂಧ ಫೆ.8ರಂದು ವಿಚಾರಣೆಗೆ ಬರುವಂತೆ ಇಡಿ ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ನೀಡಿದೆ.

ಇಡಿಯಿಂದ ನೊಟೀಸ್ ಬಂದಿಲ್ಲ, ಬೇರೆ ನೊಟೀಸ್‌ ಬಂದಿದೆ: ಡಿಕೆಶಿಇಡಿಯಿಂದ ನೊಟೀಸ್ ಬಂದಿಲ್ಲ, ಬೇರೆ ನೊಟೀಸ್‌ ಬಂದಿದೆ: ಡಿಕೆಶಿ

ದಾಳಿಯ ವೇಳೆ ಸಿಕ್ಕ ಹಣಕ್ಕೆ ಯಾವುದೇ ದಾಖಲೆಗಳು ಇರಲಿಲ್ಲ. ಈ ಹಣ ಕೃಷಿ ಮೂಲದಿಂದ ಬಂದಿದ್ದು ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಆದರೆ, ಅದಕ್ಕೆ ದಾಖಲೆಗಳನ್ನು ನೀಡುವಲ್ಲಿ ವಿಫಲರಾಗಿದ್ದರು.

English summary
Karnataka water resources minister D.K.Shivakumar prayed the High Court of Karnataka for quashing of Enforcement Case Information Report (ECIR) field against him. High court reserved judgement for February 27, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X