ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿಗೆ ಇಂಧನ, ಬೇಗ್ ಗೆ ಹಜ್ ಖಾತೆ

|
Google Oneindia Kannada News

ಬೆಂಗಳೂರು, ಜ. 2: ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ಮತ್ತು ರೋಷನ್ ಬೇಗ್ ಅವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರಿಗೆ ನಿರೀಕ್ಷೆಯಂತೆ ಇಂಧನ ಖಾತೆ ನೀಡಲಾಗಿದ್ದು, ರೋಷನ್ ಬೇಗ್ ಅವರಿಗೆ ಹಜ್, ಮೂಲಸೌಕರ್ಯ ಮತ್ತು ವಾರ್ತಾ ಇಲಾಖೆಯನ್ನು ನೀಡಲಾಗಿದ್ದು, ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಹೊಸ ಸಚಿವರು ಸೇರ್ಪಡೆಗೊಂಡ ಬಳಿಕ ಖಾತೆಗಾಗಿ ಕ್ಯಾತೆ ಆರಂಭವಾಗಿತ್ತು. ಅದರಲ್ಲೂ ರೋಷನ್ ಬೇಗ್ ಅವರಿಗೆ ಖಾತೆ ಹಂಚಿಕೆ ಕುರಿತು ಸಚಿವರ ನಡುವೆ ಕಿತ್ತಾಟ ಆರಂಭವಾಗಿತ್ತು. ರೋಷನ್ ಬೇಗ್ ಅವರಿಗೆ ಹಜ್ ಖಾತೆ ನೀಡಬೇಕು ಎಂದು ಸಿಎಂ ಬಯಸಿದ್ದರು. ರೋಷನ್ ಬೇಗ್ ಸಹ ಆ ಖಾತೆಗಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಆ ಖಾತೆ ಹೊಂದಿದ್ದ ಖಮರುಲ್ ಇಸ್ಲಾಂ ಖಾತೆ ಬಿಟ್ಟು ಕೊಡಲು ಒಪ್ಪುತ್ತಿರಲಿಲ್ಲ. ಸಚಿವ ಎಚ್.ಕೆ.ಪಾಟೀಲ್ ನಡೆಸಿದ ಸಂಧಾನ ಸಭೆ ಸಫಲವಾಗಿದ್ದು, ಖಾತೆ ಬಿಟ್ಟುಕೊಟ್ಟಿದ್ದಾರೆ. [ಈಗ ಖಾತೆಗಾಗಿ ಕಿತ್ತಾಟ!]

DK Shivakumar, Roshan Baig

ಡಿಕೆ ಶಿವಕುಮಾರ್ ಅವರಿಗೆ ಇಂಧನ ಖಾತೆ, ರೋಷನ್ ಬೇಗ್ ಅವರಿಗೆ ಹಜ್, ಮೂಲ ಸೌಕರ್ಯ ಮತ್ತು ವಾರ್ತಾ ಖಾತೆ ನೀಡಿ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ ಕಳುಹಿಸಿದ್ದರು. ಗುರುವಾರ ಸಂಜೆ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದು, ಇಬ್ಬರಿಗೂ ಖಾತೆ ಹಂಚಿಕೆ ಕಾರ್ಯ ಪೂರ್ಣಗೊಂಡಿದೆ. ಇದರಿಂದ ಸಂತೋಷ್ ಲಾಡ್ ರಾಜೀನಾಮೆಯಿಂದ ತೆರವಾದ ವಾರ್ತಾ ಮತ್ತು ಮೂಲ ಸೌಕರ್ಯ ಖಾತೆ ಜವಾಬ್ದಾರಿಯನ್ನು ರೋಷನ್ ಬೇಗ್ ಅವರಿಗೆ ನೀಡಲಾಗಿದೆ.

English summary
Karnataka Chief Minister Siddaramaiah has expanded his cabinet by inducting MLAs DK Shivakumar (Kanakapura) and Roshan Baig (Shivajinagar). Roshan Baig get Hajj, Information and Infrastructure and DK Shivakumar get Energy portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X