ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ರಾಜೀನಾಮೆ ಹಿಂದಿನ ಕಾರಣ ಹೇಳಿದ ಡಿ.ಕೆ. ಶಿವಕುಮಾರ್!

|
Google Oneindia Kannada News

ಬೆಂಗಳೂರು, ಜು. 26: ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ಅವರ ರಾಜೀನಾಮೆ ಕೆಲ ದಿನಗಳಿಂದ ನಿರೀಕ್ಷಿತವೇ ಆಗಿದ್ದರೂ, ರಾಜ್ಯತ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡಿದೆ. ವಿರೋಧ ಪಕ್ಷಗಳ ನಾಯಕರು ಯಡಿಯೂರಪ್ಪ ರಾಜೀನಾಮೆಯನ್ನು ತಮ್ಮದೇ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಜೊತೆಗೆ ಮುಂದಿನ ರಾಜಕೀಯ ಲೆಕ್ಕಚಾರಗಳನ್ನು ಹಾಕುತ್ತಿದ್ದರೆ. ಜೊತೆಗೆ ಯಡಿಯೂರಪ್ಪ ಅವರನ್ನು ರಾಜಕೀಯ ದಾಳವನ್ನಾಗಿ ಉಪಯೋಗಿಸುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಅಚ್ಚರಿ ಮೂಡಿಸಿದೆ.

'ಇಂದು ರಾಜೀನಾಮೆ ವಿಚಾರ. ಪ್ರಸ್ತಾಪಿಸಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಕಣ್ಣೀರಿಟ್ಟಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರಾರು?' ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕುರಿತು ಸದಾಶಿವನಗರ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

'ಸಂತೋಷ' ಕಾಣುತ್ತಿಲ್ಲ!

'ಸಂತೋಷ' ಕಾಣುತ್ತಿಲ್ಲ!

'ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ 'ಸಂತೋಷ' ಕಾಣುತ್ತಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವು ಕಾಣುತ್ತಿದೆ. ಆ ನೋವು ಏನು? ಆ ನೋವು ಕೊಟ್ಟವರು ಯಾರು ಎಂಬುದನ್ನು ಹಂಗಾಮಿ ಸಿಎಂ ಯಡಿಯೂರಪ್ಪ ಅವರು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು" ಎಂದು ಡಿಕೆಶಿ ಆಗ್ರಹಿಸಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿಯೇ ಯಡಿಯೂರಪ್ಪ ಅವರ 'ಸಂತೋಷ'ವನ್ನು ಕಡಿಸಿಕೊಂಡಿದ್ದು ಯಾರು ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

"ರಾಜೀನಾಮೆ ಕುರಿತ ನಮ್ಮ ವಿಮರ್ಶೆಯನ್ನು ಮುಂದೆ ತಿಳಿಸುತ್ತೇವೆ. ಆದರೆ ಅದಕ್ಕೂ ಮೊದಲು ಯಡಿಯೂರಪ್ಪ ತಮ್ಮ ನೋವಿನ ಬಗ್ಗೆ ಜನರಿಗೆ ತಿಳಿಸಬೇಕು. ಎರಡು ವರ್ಷಗಳಲ್ಲಿ ಜನರು ಕೋವಿಡ್ ಸಮಸ್ಯೆಗೆ ತುತ್ತಾಗಿದ್ದರಿಂದ ನೋವಾಯ್ತಾ? ಪಕ್ಷದ ಶಾಸಕರನ್ನು ಹೈಕಮಾಂಡ್ ನಿಯಂತ್ರಣ ಮಾಡಲಿಲ್ಲ ಎಂದು ನೋವಾಯ್ತಾ? ಎಂಬುದು ಜನರಿಗೆ ಗೊತ್ತಾಗಬೇಕು' ಎಂದು ಆಗ್ರಹಿಸಿದ್ದಾರೆ.

ರಾಜೀನಾಮೆ ಹಿಂದಿನ ಕಾರಣ ಬಿಚ್ಚಿಟ್ಟ ಡಿಕೆಶಿ

"ಬಿಜೆಪಿ ನಾಯಕರುಗಳೇ ಯಡಿಯೂರಪ್ಪ ಅವರಿಗೆ ಹಿಂದಿನಿಂದ ಚುಚ್ಚಿದ್ದಾರೆ. ಯಡಿಉರಪ್ಪ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಸಂಪುಟದಲ್ಲಿ ಇದ್ದುಕೊಂಡೆ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ಕೊಡುತ್ತರೆ, ಸಂಪುಟದ ಮತ್ತೊಬ್ಬ ಸಹೋದ್ಯೋಗಿ ಪರೀಕ್ಷೆ ಬರೆದಿದ್ದೀನಿ ಎಂದರು, ಮಗದೊಬ್ಬರು ಅವರ ವಿರುದ್ಧ ಹಾದಿ-ಬೀದಿಯಲ್ಲಿ ಟೀಕೆ ಮಾಡುತ್ತಾ ಮಾನ ಕಳೆದರು" ಎಂದು ಯಡಿಯೂರಪ್ಪ ಅವರ ಎದುರಿಸಿದ್ದ ಪ್ರಸಂಗಗಳನ್ನು ಡಿಕೆ ಶಿವಕುಮಾರ್ ನೆನಪಿಸಿದ್ದಾರೆ.

"ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಯಡಿಯೂರಪ್ಪ ಅವರಿಗೆ ಮೊದಲಿಂದಲೂ ತೊಂದರೆ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ಅವರ ಪಕ್ಷದ ಹೈಕಮಾಂಡ್ ನಿಂದ ಬೆಂಬಲ ಸಿಗಲಿಲ್ಲ. ಯಡಿಯೂರಪ್ಪ ವಿರುದ್ಧ ಮಾತನಾಡಿದವರನ್ನು ನಿಯಂತ್ರಿಸಲಿಲ್ಲ" ಎಂದು ಯಡಿಯೂರಪ್ಪ ಅವರ ರಾಜೀನಾಮೆ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆ.

ಅವರು ಕೇಳಿದಾಗ ಚಪ್ಪಾಳೆ ತಟ್ಟಿದ್ದೇವೆ!

ಅವರು ಕೇಳಿದಾಗ ಚಪ್ಪಾಳೆ ತಟ್ಟಿದ್ದೇವೆ!

"ಯಡಿಯೂರಪ್ಪ ಇವತ್ತು ರಾಜೀನಾಮೆ ಕೊಟ್ಟು ಇದೆಲ್ಲದಕ್ಕೂ ತೆರೆ ಎಳೆದಿದ್ದಾರೆ. ನಾವು ಯಡಿಯೂರಪ್ಪ ಅವರಿಗೆ ತೊಂದರೆ ಕೊಡಲಿಲ್ಲ. ಚಪ್ಪಾಳೆ ತಟ್ಟಿ ಅಂದಾಗ ತಟ್ಟಿದ್ದೇವೆ. ಕೊರೊನಾ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ಎಂದು ಹೇಳಿದ್ದೇವೆ. ಅಷ್ಟು ಬಿಟ್ರೆ ನಮ್ಮಿಂದ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಯಡಿಯೂರಪ್ಪ ಅವರ ಸ್ಥಾನ ಯಾರು ತುಂಬುತ್ತಾರೆ ಎಂಬುದರ ಬಗ್ಗೆ ನಾನು ಮಾತಾಡಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ" ಎಂದು ಮುಂದಿನ ಮುಖ್ಯಮಂತ್ರಿಯ ಬಗ್ಗೆ ಡಿಕೆಶಿ ಅಭಿಪ್ರಾಯ ಕೊಟ್ಟಿದ್ದಾರೆ.


"ಕಾಂಗ್ರೆಸ್ ಬಿಟ್ಟು ಹೋದವರು ಇಂದು ಮಾಜಿಗಳಾಗಿದ್ದಾರೆ. ಅವರು ಪಕ್ಷಕ್ಕೆ ಬರುವ ವಿಚಾರವನ್ನು ಮುಂದೆ ನೋಡೋಣ. ಬಿಜೆಪಿ ನಾಯಕತ್ವದಿಂದ ಯಡಿಯೂರಪ್ಪ ಅವರನ್ನು ಬದಲಿಸಿದ್ದರಿಂದ ನಮಗೇನೂ ಲಾಭ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬದಲಿಸಬೇಕು ಎಂದು ರಾಜ್ಯದ ಜನರೇ ತೀರ್ಮಾನಿಸಿದ್ದಾರೆ" ಎಂದು ಬಿಜೆಪಿ ಸೇರಿ ಮಂತ್ರಿಯಾದವ ಬಗ್ಗೆ ಲೇವಡಿ ಮಾಡಿದ್ದಾರೆ.

ರಾಜಕೀಯದ ಲೆಕ್ಕಾಚಾರವೇ? ಅನುಕಂಪವೋ?

ರಾಜಕೀಯದ ಲೆಕ್ಕಾಚಾರವೇ? ಅನುಕಂಪವೋ?

ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ಅವರು ರಾಜೀನಾಮೆ ಕೊಡುತ್ತಿದ್ದಂತೆಯೆ ರಾಜಕೀಯ ನಾಯಕರು ಅಳೆದು ತೂಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರು ರಾಜೀನಾಮೆ ಕೊಡುವುದು ಖಚಿತವಾಗುತ್ತಿದ್ದಂತೆಯೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಭೇಟಿ ಮಾಡಿದ್ದರು. ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ. ಪಾಟೀಲ್ ಅವರು ಯಡಿಯೂರಪ್ಪ ಅವರಿಗೆ ಬೆಂಬಲ ಕೊಟ್ಟಿದ್ದರು.

ಹೀಗಾಗಿ ಹಂಗಾಮಿ ಸಿಎಂ ಯಡಿಯೂರಪ್ಪ ಅವರ ಕುರಿತು ಅನುಕಂಪ ವ್ಯಕ್ತಪಡಿಸುವ ಮೂಲಕ ಅವರು ಪ್ರತಿನಿಧಿಸುತ್ತಿದ್ದ ಲಿಂಗಾಯತ ಸಮುದಾಯವನ್ನು ಸೆಳೆಯುವ ಪ್ರಯತ್ನಗಳು ನಡೆದಿವೆ ಎಂದು ವಲಯದಲ್ಲಿ ಚರ್ಚೆಗಳಾಗುತ್ತವೆ. ಇದೇ ಸಂದರ್ಭದಲ್ಲಿ ಜಾತಿ ರಾಜಕಾರಣದಿಂದ ಹಿಂದೆ ಸರಿಯಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ. ಹೀಗಾಗಿಯೇ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಇಳಿಸುವ ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ.

ಬಿಜೆಪಿ ಹೈಕಮಾಂಡ್ ಅಥವಾ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಲೆಕ್ಕಚಾರಗಳು ಏನೆ ಇರಲಿ. ಮತದಾರರ ಲೆಕ್ಕಾಚಾರಗಳು ಅವೆಲ್ಲವನ್ನೂ ತಲೆಕೆಳಗು ಮಾಡಬಲ್ಲವು ಎಂಬುದು ಹಿಂದಿನ ಚುನಾವಣೆಗಳ ಫಲಿತಾಂಶಗಳಲ್ಲಿ ಕಂಡು ಬಂದಿದೆ. ಹೀಗಾಗಿ ಹಂಗಾಮಿ ಸಿಎಂ ಯಡಿಯೂರಪ್ಪ ಅವರು ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಮೇಲೆ ಈ ಎಲ್ಲ ರಾಜಕೀಯ ಲೆಕ್ಕಾಚಾರಗಳು ನಿಂತಿವೆ ಎನ್ನಲಾಗುತ್ತಿದೆ.

Recommended Video

ಹಂಗಾಮಿ ಮುಖ್ಯಮಂತ್ರಿಗೆ ಏನೆಲ್ಲಾ ಅಧಿಕಾರ ಇರುತ್ತೆ ಗೊತ್ತಾ? | Oneindia Kannada

English summary
KPCC President DK Shivakumar Reveals Resign behind BS Yediyurappa Resignation. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X