ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಉದ್ಯಮಿಗಳು, ಸಾರ್ವಜನಿಕರಿಗೆ ಡಿಕೆಶಿ ಮನವಿ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 18: ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ ಲಕ್ಷಾಂತರ ಮಂದಿ ತೊಂದರೆಗೀಡಾಗದ್ದು ಅವರ ನೆರವಿನ ಹಸ್ತ ಚಾಚುವಂತೆ ಉದ್ಯಮಿಗಳು ಹಾಗೂ ಸಾರ್ವಜನಿಕರಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಹಲವರು ನಿರ್ಗತಿಕರಾಗಿದ್ದಾರೆ, ಆಹಾರ, ಬಟ್ಟೆ, ವೈದ್ಯಕೀಯ ಸೌಲಭ್ಯ ಇನ್ನುಳಿದ ಅಗತ್ಯಗಳಿಗೆ ಉದಾರ ನೆರವಿನ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ತಾವು ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಸಭಾ ಕ್ಷೇತ್ರದ ಸಂಸದರು ಮತ್ತು ರಾಮನಗರ ಕ್ಷೇತ್ರದ ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿಕೊಂಡು ರಾಮನಗರ ಜಿಲ್ಲಾಕೇಂದ್ರದಿಂದ ನೆರವಿನ ಸಾಮಗ್ರಿಗಳನ್ನು ರವಾನೆ ಮಾಡುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಕೈಗಾರಿಕೋದ್ಯಮಿಗಳು ನೆರವು ನೀಡಿ

ಕೈಗಾರಿಕೋದ್ಯಮಿಗಳು ನೆರವು ನೀಡಿ

ರಾಮನಗರ ವ್ಯಾಪ್ತಿಯ ಟೆಕ್ಸ್‌ಟೇಲ್ಸ್‌ ಸಂಸ್ಥೆಗಳ ತಮ್ಮಲ್ಲಿನ ಅನುಪಯುಕ್ತ ಬಟ್ಟೆಗಳನ್ನು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಬೇಕು ಎಂದು ಮನವಿ ಮಾಡಿದ ಅವರು, ಜೊತೆಗೆ ಕೈಗಾರಿಕೋದ್ಯಮಿಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಉದಾರವಾಗಿ ಸಹಾಯ ಮಾಡಬೇಕು ಎಂದು ಹೇಳಿದರು.

ಸೇನಾ ವಿಮಾನದಲ್ಲಿ ಕೊಡಗು ಪ್ರವಾಹ ಸಮೀಕ್ಷೆಗೆ ಹೊರಟ ಎಚ್‌ಡಿಕೆಸೇನಾ ವಿಮಾನದಲ್ಲಿ ಕೊಡಗು ಪ್ರವಾಹ ಸಮೀಕ್ಷೆಗೆ ಹೊರಟ ಎಚ್‌ಡಿಕೆ

ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಿರಿ

ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಿರಿ

ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ.ಜೆ.ಶ್ರೀನಿವಾಸ್ ಅವರಿಗೆ ಇದರ ಉಸ್ತುವಾರಿ ವಹಿಸಿದ್ದು, ಅವರ ಸಂಪರ್ಕ ಸಂಖ್ಯೆ 98459701510, 8073 25236 ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ 2727377, ಸಚಿವರ ಆಪ್ತ ಸಹಾಯಕ ಮೊಬೈಲ್ 9606006699 ಇಲ್ಲಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಕೊಡಗಿನ ಜಲಪ್ರಳಯವನ್ನೂ ನರೇಂದ್ರ ಮೋದಿಯವರು ವೀಕ್ಷಿಸಲಿಕೊಡಗಿನ ಜಲಪ್ರಳಯವನ್ನೂ ನರೇಂದ್ರ ಮೋದಿಯವರು ವೀಕ್ಷಿಸಲಿ

ವೈದ್ಯಕೀಯ ಕಾಲೇಜುಗಳಿಗೆ ಮನವಿ

ವೈದ್ಯಕೀಯ ಕಾಲೇಜುಗಳಿಗೆ ಮನವಿ

ವೈದ್ಯಕೀಯ ನೆರವಿಗಾಗಿ ಈಗಾಗಲೇ ಹಲವು ವೈದ್ಯಕೀಯ ಕಾಲೇಜುಗಳಿಗೆ ಮನವಿ ಸಲ್ಲಿಸಲಾಗಿದ್ದು, ಎಲ್ಲಾ ವೈದ್ಯಕೀಯ ಕಾಲೇಜುಗಳು ತಲಾ ಒಂದು ತಂಡವನ್ನು ಸನ್ನದ್ಧವಾಗಿಟ್ಟುಕೊಂಡಿರಬೇಕು ಕೇರಳ ಅಥವಾ ಕರ್ನಾಟಕ ಎರಡೂ ಕಡೆಗಳಲ್ಲಿ ನೆರವಿನ ಅಗತ್ಯತೆ ಇರುವ ಕಾರಣ, ಕರೆ ಬಂದ ಕೂಡಲೇ ಹೊರಡಲು ಸಿದ್ಧವಾಗಿರಬೇಕು ಎಂದು ಅವರು ಹೇಳಿದರು.

ಕೊಡಗು ಪ್ರವಾಹ: ಅಧಿಕಾರಿಗಳ ಜತೆ ಸಿಎಂ ಚರ್ಚೆ, ಪ್ರಮುಖ ಅಂಶಗಳು ಕೊಡಗು ಪ್ರವಾಹ: ಅಧಿಕಾರಿಗಳ ಜತೆ ಸಿಎಂ ಚರ್ಚೆ, ಪ್ರಮುಖ ಅಂಶಗಳು

ನೆರವು ದುರುಪಯೋಗ ಆಗಬಾರದು

ನೆರವು ದುರುಪಯೋಗ ಆಗಬಾರದು

ನೆರೆ ಸಂತ್ರಸ್ತರಿಗೆ ಸಾರ್ವಜನಿಕರು ನೀಡುವ ಬಟ್ಟೆ, ಬರೆ ಇನ್ನಿತರೆ ನೆರವಿನ ಸಾಮಗ್ರಿಗಳು ಮತ್ತು ಹಣ ದುರುಪಯೋಗವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.

English summary
Minister DK Shivakumar request to businessman and public to give help to flood affected coastal Karnataka people. He requested MP's, MLAs also help the flood victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X