ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಖಾಸಗೀಕರಣಗೊಳಿಸಲು ನಡೆಯುತ್ತಿದೆ ಒಳಸಂಚು:ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 12: 'ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಖಾಸಗೀಕರಣಕ್ಕೆ ಒಳಸಂಚು ನಡೆಯುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದ ಆಡಳಿತ ಕುಸಿದು ಹೋಗಿದೆ, ಈ ವರ್ಷ ನಡೆದಷ್ಟು ಪ್ರತಿಭಟನೆ ,ಚಳವಳಿಗಳು ಎಂದೂ ನಡೆದಿಲ್ಲ. ಮಾತು ಕೊಟ್ಟು ಅದರಂತೆ ಸರ್ಕಾರ ನಡೆದಿಲ್ಲ. ಎಲ್ಲ ವರ್ಗದವರಿಗೂ ಸಮಸ್ಯೆ ತಂದೊಡ್ಡಿದ್ದಾರೆ ಎಂದು ಆರೋಪಿಸಿದರು.

ಸಾರಿಗೆ ನೌಕರರ ಮುಷ್ಕರ ಸೋಮವಾರ ಅಂತ್ಯ?ಸಾರಿಗೆ ನೌಕರರ ಮುಷ್ಕರ ಸೋಮವಾರ ಅಂತ್ಯ?

ಮೂರು ಉಪಚುನಾವಣೆ ಪ್ರವಾಸ ಮಾಡಿ ಬಂದಿದ್ದೇನೆ, ಎಲ್ಲಾ ಕಡೆ ಈ ರಾಜ್ಯದಲ್ಲಿ ಬದಲಾವಣೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ.

ಸಾರಿಗೆ ನೌಕರರ ಸಮಸ್ಯೆ ಆಲಿಸಬೇಕಿತ್ತು

ಸಾರಿಗೆ ನೌಕರರ ಸಮಸ್ಯೆ ಆಲಿಸಬೇಕಿತ್ತು

ಸಾರಿಗೆ ನೌಕರರ ಸಮಸ್ಯೆಯನ್ನು ಸರ್ಕಾರ ಆಲಿಸಬೇಕಿತ್ತು, ಆದರೆ ಅದನ್ನು ಬಿಟ್ಟು ಸಾರಿಗೆಯನ್ನು ಖಾಸಗಿಯವರ ಕೈಗಿಡಲು ಹೊರಟಿದ್ದಾರೆ. ಕೆ.ಎಸ್ ಆರ್ ಟಿ ಸಿ , ಬಿ‌ಎಂಟಿಸಿಯನ್ನು ಖಾಸಗಿಯವರಿಗೆ ಮಾರುವ ಒಳಸಂಚು ನಡೆದಿದೆ ಎಂದರು.

ಮಸ್ಕಿ ಅಭ್ಯರ್ಥಿಯನ್ನು ಅನರ್ಹ ಎಂದು ಘೋಷಿಸಬೇಕು

ಮಸ್ಕಿ ಅಭ್ಯರ್ಥಿಯನ್ನು ಅನರ್ಹ ಎಂದು ಘೋಷಿಸಬೇಕು

ಮಸ್ಕಿ ಅಭ್ಯರ್ಥಿಯನ್ನು ಅನರ್ಹ ಎಂದು ಘೋಷಣೆ ಮಾಡಬೇಕು.ಏಕಾಂದರೆ ಸಮಾರಂಭಕ್ಕೆ ಬರಲು 300 ರೂಪಾಯಿ ಹಂಚುತ್ತಿದ್ದಾರೆ, ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಈ ವಿಡಿಯೋ ಕೂಡಾ ವೈರಲ್ ಆಗುತ್ತಿದೆ, ಮುಖ್ಯಮಂತ್ರಿಗಳೇ ಜಾತಿ ಸಭೆಗಳನ್ನು ನಡೆಸುತ್ತಿದ್ದಾರೆ. ಸಿಎಂಗೂ ಸೋಲಿನ ಭಯ ಕಾಡುತ್ತಿದೆ ಎಂದರು.

ಮುಷ್ಕರ; ಕೆಲಸಕ್ಕೆ ಬಂದ ನೌಕರರಿಗೆ ಮಾರ್ಚ್‌ ತಿಂಗಳ ವೇತನಮುಷ್ಕರ; ಕೆಲಸಕ್ಕೆ ಬಂದ ನೌಕರರಿಗೆ ಮಾರ್ಚ್‌ ತಿಂಗಳ ವೇತನ

ಚುನಾವಣೆಗೆ ಸರ್ಕಾರದ ಅಧಿಕಾರಿಗಳ ದುರ್ಬಳಕೆ

ಚುನಾವಣೆಗೆ ಸರ್ಕಾರದ ಅಧಿಕಾರಿಗಳ ದುರ್ಬಳಕೆ

ಚುನಾವಣೆಗೆ ಸರ್ಕಾರದ ಎಲ್ಲಾ ಅಧಿಕಾರಿಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು. ಒಬ್ಬ ಮುಖ್ಯಮಂತ್ರಿಯಾಗಿ ಚುನಾವಣಾ ಸಂದರ್ಭದಲ್ಲಿ ಜಾತಿ ಸಭೆಗಳನ್ನು ನಡೆಸಲು ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಚುನಾವಣೆ ಆಯೋಗ ಸಿಎಂ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Recommended Video

ದೇಶದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣದ ಜೊತೆ ಸಾವಿನ ಸಂಖ್ಯೆಯಲ್ಲೂ ಏರಿಕೆ..! | Oneindia Kannada
ಸರ್ಕಾರದ ಬಗ್ಗೆ ಸಿಟ್ಟಿದೆ

ಸರ್ಕಾರದ ಬಗ್ಗೆ ಸಿಟ್ಟಿದೆ

ಸರ್ಕಾರದ ಬಗ್ಗೆ ತುಂಬಾ ಕೋಪವಿದೆ, ಈ ಚುನಾವಣೆಗಳಲ್ಲಿ ನಮಗೆ ಅಪಾರ ಪ್ರೀತಿ ಅಭಿಮಾನ ಜನ ತೋರಿಸುತ್ತಿದ್ದಾರೆ. ನಾವು ಖಂಡಿತ ಎಲ್ಲಾ ಚುನಾವಣೆ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
KPCC President DK Shivakumar Reaction On transport workers strike in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X