ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ, ದೇಶ ಕುರಿತು ಡಿಕೆ ಶಿವಕುಮಾರ್ Rapid ಉತ್ತರ

|
Google Oneindia Kannada News

ಬೆಂಗಳೂರು ಆಗಸ್ಟ್ 13: ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷ ತುಂಬುತ್ತಿರುವ ಸವಿನೆನಪಿನ ಅಮೃತ ಮಹೋತ್ಸವ ಸಂಬಂದ ಕರ್ನಾಟಕ ಕಾಂಗ್ರೆಸ್ ಬೃಹತ್ 'ಸ್ವಾತಂತ್ರ್ಯ ನಡಿಗೆ' ಹಮ್ಮಿಕೊಂಡಿದೆ. ಇದರ ಭಾಗವಾಗಿ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ದೇಶ, ಸ್ವಾತಂತ್ರ್ಯ ಕುರಿತು ಉತ್ತರಿಸಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಮಧ್ಯಾಹ್ನ 2ಗಂಟೆಗೆ ನಗರದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೆ ಸ್ವಾತಂತ್ರ್ಯ ಪಾದಯಾತ್ರೆಯನ್ನು (ಫ್ರೀಡಂಮಾರ್ಚ)ಹಮ್ಮಿಕೊಂಡಿದೆ.

ಇದರಲ್ಲಿ ಭಾಗವಹಿಸುವಂತೆ ಕೋರಿರುವ ಕೆಪಿಸಿಸಿ ಅಧ್ಯಕಷ ಡಿ.ಕೆ.ಶಿವಕುಮಾರ್ ಅವರು ರ್‍ಪಿಡ್ ಸುತ್ತಿನ ಪ್ರಶ್ನೆಗಳಿಗೆ ಏನೆಂದು ಉತ್ತರಿಸಿದ್ದಾರೆ ಎಂದು ಇಲ್ಲಿ ನೋಡಬಹುದು.

DK Shivakumar Rapid Answer about Indipendence day

ನಿರುದ್ಯೋಗ, ಕೋಮುಗಲಭೆ, ಅಸಮಾನತೆ ನಿವಾರಣೆ ಆಗಿರಬೇಕು

ಭಾರತದ 100ನೇ ವರ್ಷದ ಸ್ವಾತಂತ್ರ್ಯೊತ್ಸವದ ವೇಳೆ ಯಾವ ಮೂರು ವಿಷಯಗಳು ನಿವಾರಣೆ ಆಗಿರಬೇಕೆಂದು ಭಾವಿಸುತ್ತೀರಿ ಎಂಬ ಕಾಂಗ್ರೆಸ್‌ನ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು, ಸ್ವಾತಂತ್ರ್ಯ ಶತಮಾನೋತ್ಸವ ವೇಳೆಗೆ ದೇಶದಲ್ಲಿ ನಿರುದ್ಯೋಗ, ಕೋಮುಗಲಭೆ ಮತ್ತು ಮಹಿಳಾ ಅಸಮಾನತೆ ತೊಲಗಿರಬೇಕು ಎಂದು ಬಯಸುತ್ತೇನೆ. ಈ ನಿಟ್ಟಿನಲ್ಲಿ ಮುಂದೆ ಅಧಿಕಾರಕ್ಕೆ ಬರಲಿರುವ ಕಾಂಗ್ರೆಸ್‌ ಶ್ರಮಿಸಲಿದೆ ಎಂದು ತಿಳಿಸಿದ್ದಾರೆ.

ಭಾರತವನ್ನು ಮೂರು ಪದಗಳಲ್ಲಿ ವಿವರಿಸುವುದಾದರೆ 'ನನ್ನ ಪ್ರೀತಿಯ ರಾಷ್ಟ್ರ' ಎಂದು ಹೇಳಿದ್ದಾರೆ. ನನ್ನ ಪ್ರಕಾರ ಮೂರೇ ಪದಗಳಲ್ಲಿ ಸ್ವಾತಂತ್ರ್ಯ ಎಂದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌ ಅಂಬೇಡ್ಕರ್ ನೀಡಿದ 'ಸಂವಿಧಾನ, ಹಕ್ಕುಗಳು, ಅಹಿಂಸೆ ಎಂದು ತಿಳಿಸಿದರು.

ಭಾರತ ರೂಪಿಸಲು ಕಾರಣವಾದ ಐದು ಅಂಶಗಳು

ಇನ್ನೂ ಸ್ವಾತಂತ್ರ್ಯ ಭಾರತ ರೂಪಿಸಲು ಕಾರಣವಾದ ಐದು ಅಂಶಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಮಹಾತ್ಮ ಗಾಂಧಿಯವರ ಹತ್ಯೆ, ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರು ಅವರಿಂದ ಭಾಷಾವಾರು ರಾಜ್ಯಗಳ ರಚನೆ, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ಹಸಿರು ಕ್ರಾಂತಿ, ಬ್ಯಾಂಕುಗಳ ರಾಷ್ಟ್ರೀಕರಣ. ರಾಜೀವ್ ಗಾಂಧಿಯವರ ಗಣಕಯಂತ್ರ ಕ್ರಾಂತಿ ಹಾಗೂ ಸೋನಿಯಾ ಗಾಂಧಿ ಅವರ ನರೇಗಾ ನೀತಿಗಳು. ಇವು ಭಾರತವನ್ನು ರೂಪಿಸಲು ಪ್ರಮುಖ ಕಾರಣವಾಗಿವೆ ಎಂದರು.

DK Shivakumar Rapid Answer about Indipendence day

ರಾಷ್ಟ್ರಧ್ವಜದ ಮೂರು ಬಣ್ಣಗಳು ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂಬುದನ್ನು ಸೂಚಿಸುತ್ತದೆ. ಅಂತೆಯೇ ನಾವೇಲ್ಲರೂ ಒಗ್ಗಟ್ಟಿನಿಂದ ದೇಶಕ್ಕಾಗಿ ನಿಲ್ಲಬೇಕು ಎನ್ನುವ ಮೂಲಕ ಕೂ ವೇದಿಕೆಯಲ್ಲಿ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಅಲ್ಲದೇ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾರ್ವಜನಿಕರ ಸಾರಿಗೆಯನ್ನೇ ಬಳಸಿ ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಇನ್ನು ಕಾಂಗ್ರೆಸ್‌ ನಡೆಸುತ್ತಿರುವ ಐತಿಹಾಸಿಕ 'ಸ್ವಾತಂತ್ರ್ಯ ನಡಿ'ಗೆ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸುತ್ತೇನೆ, ನೀವು ಭಾಗವಹಿಸಿ ಎನ್ನುವ ಮೂಲಕ ಕಾಂಗ್ರೆಸ್ ನಾಯಕರು ಅಭಿಯಾನ ಆರಂಭಿಸಿದ್ದಾರೆ. ಪ್ರಿಯಾಂಕ್‌ ಖರ್ಗೆ ಸೇರಿದಂತೆ ಅನೇಕ ನಾಯಕರು ಕೂ ಮಾಡಿದ್ದಾರೆ.

English summary
KPCC President D K Shivakumar Answers to few Rapid questions about Freedom and India in KOO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X