ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಫಲಿತಾಂಶದ ಟ್ರೆಂಡ್, ಡಿಕೆಶಿ ಮೊದಲ ಪ್ರತಿಕ್ರಿಯೆ

|
Google Oneindia Kannada News

Recommended Video

D K Shivakumar warn CM of ‘serious action’ | DKS | YEDYURAPPA | BJP | CONGRESS | JDS | ONEINDIA

ಬೆಂಗಳೂರು, ಡಿಸೆಂಬರ್ 09: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಡಿಸೆಂಬರ್ 9ರಂದು ಆರಂಭವಾಗಿದ್ದು, ಆರಂಭಿಕ ಟ್ರೆಂಡ್ ನಂತೆ ಬಿಜೆಪಿಗೆ ಗೆಲುವು ಎಂಬ ಮಾಹಿತಿ ಹೊರ ಬಂದಿದೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಫಲಿತಾಂಶಕ್ಕೆ ಕ್ಷಣಗಣನೆ: ಬಿಎಸ್ವೈಗೆ 'ಒಳ್ಳೆದಾಗಲಿ' ಎಂದ ಡಿಕೆಶಿಫಲಿತಾಂಶಕ್ಕೆ ಕ್ಷಣಗಣನೆ: ಬಿಎಸ್ವೈಗೆ 'ಒಳ್ಳೆದಾಗಲಿ' ಎಂದ ಡಿಕೆಶಿ

ಎಲ್ಲಾ ಸಮೀಕ್ಷೆಗಳ ಸರಾಸರಿ ನೋಡಿದರೆ ಕೇವಲ 8 ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ. ಬಿಜೆಪಿ ಸಮೀಕ್ಷೆ ಕೂಡ 10ಕ್ಕೂ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ವರದಿ ಬಂದಿದೆ. ಈಗ ಈ ಸಮಯದ ಟ್ರೆಂಡ್ ನೋಡಿದರೆ ಕನಿಷ್ಠ 10-12ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಕನಿಷ್ಠ 10 ಸ್ಥಾನ ಗೆಲ್ಲುವ ಖಾತ್ರಿ ಹೊಂದಿದೆ ಎಂಬ ಟ್ರೆಂಡ್ ಸುದ್ದಿ ಬಗ್ಗೆ ಡಿಕೆ ಶಿವಕುಮಾರ್ ಅವರು ಎಎನ್ಐ ಪ್ರತಿನಿಧಿ ಜೊತೆ ಮಾತನಾಡಿದರು.

By-Election Results LIVE: ಗೆಲುವಿನತ್ತ ಬಿಜೆಪಿ: ಸರ್ಕಾರ ಸೇಫ್By-Election Results LIVE: ಗೆಲುವಿನತ್ತ ಬಿಜೆಪಿ: ಸರ್ಕಾರ ಸೇಫ್

"ಮತದಾರರು ನೀಡಿದ ತೀರ್ಪಿಗೆ ತಲೆ ಬಾಗಲೇಬೇಕು, 15 ಕ್ಷೇತ್ರಗಳಲ್ಲಿ ಯಾವ ರೀತಿ ಫಲಿತಾಂಶ ಬಂದರೂ ಸ್ವೀಕರಿಸಲು ಸಿದ್ಧವಾಗಿದ್ದೇವೆ. ಅನರ್ಹರಂದು ಜನರು ಒಪ್ಪಿಕೊಂಡು ಆಶೀರ್ವದಿಸಿದರೆ, ನಾವು ನಮ್ಮ ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಇದರಿಂದ ಹಿನ್ನಡೆಯಾಗಿದೆ ಎನ್ನಲಾಗುವುದಿಲ್ಲ, ರಾಜಕೀಯ ಸ್ಥಿತ್ಯಂತರ ಒಪ್ಪಿಕೊಳ್ಳಬೇಕು'' ಎಂದು ಡಿಕೆ ಶಿವಕುಮಾರ್ ಹೇಳಿದರು.

DK Shivakumar on #KarnatakaBypolls results

ಫಲಿತಾಂಶಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಪ್ರಕ್ರಿಯೆಯತ್ತ ಯಡಿಯೂರಪ್ಪ ಫಲಿತಾಂಶಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಪ್ರಕ್ರಿಯೆಯತ್ತ ಯಡಿಯೂರಪ್ಪ

ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ವಿಧಾನಸಭೆ ಸದಸ್ಯ ಬಲ 112 ಆಗಲು ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕು. ಆಗ ಮಾತ್ರ ಸರ್ಕಾರ ಬಹುಮತ ಪಡೆಯಲು ಸಾಧ್ಯ. ಇನ್ನೂ 2 ಕ್ಷೇತ್ರದ ಉಪ ಚುನಾವಣೆ ನಡೆಯಬೇಕು. ಆದ್ದರಿಂದ, ಸೋಮವಾರ ಫಲಿತಾಂಶ ಪ್ರಕಟಗೊಂಡ ಬಳಿಕ ಸದನದ ಬಲ 222ಕ್ಕೆ ಏರಿಕೆಯಾಗಲಿದೆ.

English summary
Karnataka Congress leader DK Shivakumar on #KarnatakaBypolls results: We have to agree with the mandate of the voters of these 15 constituencies. People have accepted the defectors. We have accepted defeat, I don't think we have to be disheartened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X