ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಭೇಟಿ ಮಾಡಿದ ಡಿಕೆಶಿ, ಸರ್ಕಾರ ಉಳಿಸಲು ಹೊಸ ತಂತ್ರ

|
Google Oneindia Kannada News

ಬೆಂಗಳೂರು, ಜುಲೈ 07: ಹದಿಮೂರು ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೆ ಇಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರು, ವಸ್ತುಸ್ಥಿತಿ ವಿವರಣೆ ಮಾಡಿದ ಡಿ.ಕೆ.ಶಿವಕುಮಾರ್, ಹೆಚ್ಚಿನ ಡ್ಯಾಮೆಜ್ ಆಗದಂತೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳು, ಕಾಂಗ್ರೆಸ್ ಶಾಸಕರ ಸ್ಥಿತಿ ಎಲ್ಲವನ್ನೂ ವಿವರಿಸಿದ್ದಾರೆ.

ಆಪರೇಷನ್ ಕಮಲಕ್ಕೆ ಬಿಜೆಪಿಯಿಂದ ಬಿಲ್ಡರ್ಸ್ ಹಣ ಬಳಕೆ: ಶಿವಕುಮಾರ್ಆಪರೇಷನ್ ಕಮಲಕ್ಕೆ ಬಿಜೆಪಿಯಿಂದ ಬಿಲ್ಡರ್ಸ್ ಹಣ ಬಳಕೆ: ಶಿವಕುಮಾರ್

ಇಬ್ಬರೂ ಸೇರಿ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಜೊತೆ ಸಚಿವ ಎಚ್.ಡಿ.ರೇವಣ್ಣ ಅವರು ಸಹ ದೇವೇಗೌಡ ಅವರನ್ನು ಭೇಟಿ ಮಾಡಿದರು.

DK Shivakumar met Deve Gowda, HD Revanna also present

ಮೂವರು ನಾಯಕರು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಬಗೆಯನ್ನು ಚರ್ಚಿಸಿದ್ದಾರೆ. ಹೊಸ ಕಾರ್ಯತಂತ್ರವನ್ನು ಸಹ ಹೆಣೆದಿದ್ದಾರೆ ಎನ್ನಲಾಗಿದೆ.

ಮನವೊಲಿಸಲು ಯಶಸ್ವಿಯಾದ್ರಾ ಡಿಕೆಶಿ: ಮತ್ತೆ ನಿರ್ಧಾರ ಬದಲಿಸಿದ್ರಾ ಶಾಸಕರು?ಮನವೊಲಿಸಲು ಯಶಸ್ವಿಯಾದ್ರಾ ಡಿಕೆಶಿ: ಮತ್ತೆ ನಿರ್ಧಾರ ಬದಲಿಸಿದ್ರಾ ಶಾಸಕರು?

ಈಗಾಗಲೇ ಡಿ.ಕೆ.ಶಿವಕುಮಾರ್ ಶಿಡ್ಲಘಟ್ಟದ ಅತೃಪ್ತ ಕೈ ಶಾಸಕ ಮುನಿಯಪ್ಪ ಅವರನ್ನು ಕರೆಸಿಕೊಂಡಿದ್ದಾರೆ. ಇನ್ನೂ ಕೆಲವು ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ದೇವೇಗೌಡ ಅವರು ಸಹ ಜೆಡಿಎಸ್ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ.

English summary
Minister DK Shivakumar met HD Deve Gowda, minister HD Revanna also present. They discussed about saving coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X