ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರು ಬೆಂಗಳೂರು ಬಿಟ್ಟು ಹೊರಟಿದ್ದೇಕೆ; ಸೀಕ್ರೆಟ್ ಬಿಚ್ಚಿಟ್ಟ ಡಿಕೆಶಿ!

|
Google Oneindia Kannada News

ಬೆಂಗಳೂರು, ಜುಲೈ.13: ನೊವೆಲ್ ಕೊರೊನಾವೈರಸ್ ಭೀತಿಯಲ್ಲಿ ಜನರು ಬೆಂಗಳೂರನ್ನು ತೊರೆದು ತಮ್ಮೂರುಗಳತ್ತ ಹೊರಟಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

Recommended Video

ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಚಾರ: ಆರ್ ಅಶೋಕ್ ಸ್ಪಷ್ಟನೆ

ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ರಾಜ್ಯದಲ್ಲಿ ಸರ್ಕಾರವು ಬಿಜೆಪಿಯ ಅಜಂಡಾದಂತೆ ನಡೆಯುತ್ತಿದೆ ಎಂದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಒಟ್ಟಾಗಿ ಕೆಲಸ ಮಾಡುವುದಕ್ಕೆ ನಮ್ಮ ಕಾರ್ಯಕರ್ತರು ಸಿದ್ಧರಿದ್ದಾರೆ. ಆದರೆ ಬಿಜೆಪಿಯವರು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಏಳ್ಗೆಗೆ ಡಿಕೆಶಿ ಪ್ರತಿಜ್ಞೆ ಏನು?ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಏಳ್ಗೆಗೆ ಡಿಕೆಶಿ ಪ್ರತಿಜ್ಞೆ ಏನು?

ಸರ್ಕಾರದ ನಡೆಸುತ್ತಿರುವವರ ಮಧ್ಯೆದಲ್ಲಿ ನಾವೇಕೆ ಹೋಗುವುದು ಎಂದು ಸುಮ್ಮನಿದ್ದೇವೆ. ಅವರು ತಮ್ಮ ಕಾರ್ಯಕರ್ತರಿಗಷ್ಟೇ ಕರೆ ನೀಡಿದ್ದು, ಅವರಿಗೆ ಏನು ಬೇಕೋ ಅದನ್ನು ಮಾಡಿಕೊಳ್ಳಲಿ. ಅವರು ಕರೆದಾಗ ಮಾತ್ರ ಹೋಗುತ್ತೇವೆ. ನಮ್ಮನ್ನು ಕರೆದ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಸರ್ಕಾರದ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ

ಸರ್ಕಾರದ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ

ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅವರಿಗೆ ಸರಿಯಾದ ರೀತಿಯಲ್ಲಿ ಸರ್ಕಾರವನ್ನು ನಡೆಸುವುದಕ್ಕೆ ಬರುತ್ತಿಲ್ಲ. ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಡಿಕೆಶಿ ದೂರಿದರು.

ಬಿಜೆಪಿ ಸಚಿವರ ನಡುವೆ ಹೊಂದಾಣಿಕೆಯ ಕೊರತೆ

ಬಿಜೆಪಿ ಸಚಿವರ ನಡುವೆ ಹೊಂದಾಣಿಕೆಯ ಕೊರತೆ

ರಾಜ್ಯದಲ್ಲಿ ಸರ್ಕಾರವನ್ನು ನಡೆಸುತ್ತಿರುವ ಬಿಜೆಪಿಯ ಶಾಸಕರು ಮತ್ತು ಸಚಿವರ ನಡುವೆ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರ ನಡುವೆಯೇ ಹೊಂದಾಣಿಕೆಯಿಲ್ಲ. ಒಬ್ಬೊಬ್ಬ ಸಚಿವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರಲ್ಲಿಯೇ ಅವರಿಗೆ ಸರಿಯಾದ ನಂಬಿಕೆಯಿಲ್ಲ. ಅಧಿಕಾರಿಗಳನ್ನೂ ಸರಿಯಾಗಿ ನಂಬುತ್ತಿಲ್ಲ ಎಂದು ಡಿಕೆಶಿ ಆರೋಪಿಸಿದ್ದಾರೆ.

ಟಾಮ್ ಟಾಮ್ ಸುದ್ದಿ: ಬೆಂಗಳೂರು ಬಿಟ್ಟು ಹೊರಟವರಿಗೆ 800 ಬಸ್!ಟಾಮ್ ಟಾಮ್ ಸುದ್ದಿ: ಬೆಂಗಳೂರು ಬಿಟ್ಟು ಹೊರಟವರಿಗೆ 800 ಬಸ್!

ರಾಜ್ಯ ಸರ್ಕಾರದ ಮೇಲೆ ಜನರು ಭರವಸೆಯೇ ಇಲ್ಲ

ರಾಜ್ಯ ಸರ್ಕಾರದ ಮೇಲೆ ಜನರು ಭರವಸೆಯೇ ಇಲ್ಲ

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಸಾವಿರಾರು ಜನರಿಗೆ ಕೊರೊನಾವೈರಸ್ ಸೋಂಕಿತ ಭೀತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಸರಿಯಾದ ಭರವಸೆನೀಡುತ್ತಿಲ್ಲ. ಸರ್ಕಾರವನ್ನೂ ಸರಿಯಾಗಿ ನಡೆಸುತ್ತಿಲ್ಲ. ಇದರಿಂದಾಗಿಯೇ ಜನರು ಬೆಂಗಳೂರನ್ನು ತೊರೆದು ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳುತ್ತಿದ್ದಾರೆ ಎಂದು ಡಿಕೆಶಿ ಕಿಡಿ ಕಾರಿದ್ದಾರೆ.

ದೇಶದ ಜನರ ದಾರಿ ತಪ್ಪಿಸುತ್ತಿದೆಯಾ ಬಿಜೆಪಿ?

ದೇಶದ ಜನರ ದಾರಿ ತಪ್ಪಿಸುತ್ತಿದೆಯಾ ಬಿಜೆಪಿ?

ರಾಜಸ್ಥಾನ ಕಾಂಗ್ರೆಸ್ ನಲ್ಲಿ ಸೃಷ್ಟಿಯಾಗಿರುವ ಭಿನ್ನಮತದ ಬಗ್ಗೆಯೂ ಡಿಕೆಶಿ ಪ್ರತಿಕ್ರಿಯೆ ನೀಡಿದರು. ಇಡೀ ದೇಶವೇ ಕೊರೊನಾವೈರಸ್ ನಿಂದ ತತ್ತರಿಸಿ ಹೋಗುತ್ತಿದೆ. ಇಂಥ ಸಂದರ್ಭದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ. ಬಿಜೆಪಿ ಅಜೆಂಡಾ ಇದೇ ರೀತಿಯಾಗಿದೆ. ಆದರೆ ಇಂಥ ಸಂದರ್ಭದಲ್ಲೂ ಬಿಜೆಪಿ ತನ್ನ ಅಜೆಂಡಾವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಸಮಸ್ಯೆಯನ್ನು ಸಮರ್ಥವಾಗಿ ಬಗೆಹರಿಸಲಿದೆ ಎಂದು ತಿಳಿಸಿದ್ದಾರೆ.

English summary
KPCC President D K Shivakumar Lists Reasons on Why did people leaving Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X