ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

DK Shivakumar ED Investigation LIVE Updates: ಭಾವುಕರಾದ ಡಿ.ಕೆ.ಶಿವಕುಮಾರ್, ಅಪ್ಪನ ನೆನೆದು ಗದ್ಗದಿತ

|
Google Oneindia Kannada News

Recommended Video

      Live : DK Shivakumar Press Meet

      ಬೆಂಗಳೂರು, ಆಗಸ್ಟ್ 30: ಡಿಕೆ ಶಿವಕುಮಾರ್ ಅವರಿಗೆ ಇಡಿ ಸಂಕಷ್ಟ ಶುರುವಾಗಿದ್ದು, ಇಡಿ ಸಮನ್ಸ್‌ ರದ್ದು ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ಹೈಕೋರ್ಟ್‌ ತಳ್ಳಿ ಹಾಕಿದೆ.

      ಹೈಕೋರ್ಟ್‌, ಡಿಕೆಶಿ ಅರ್ಜಿಯನ್ನು ತಳ್ಳಿ ಹಾಕಿದ ಕೂಡಲೇ ಇಡಿ ಡಿ.ಕೆ.ಶಿವಕುಮಾರ್ ಅವರಿಗೆ ಹೊಸ ಸಮನ್ಸ್‌ ಕಳುಹಿಸಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಕೋರಿದೆ.

      ಬಂಧನದಿಂದ ರಕ್ಷಣೆ: ಮಧ್ಯಾಹ್ನ ಡಿಕೆ ಶಿವಕುಮಾರ್ ಭವಿಷ್ಯ ನಿರ್ಧಾರಬಂಧನದಿಂದ ರಕ್ಷಣೆ: ಮಧ್ಯಾಹ್ನ ಡಿಕೆ ಶಿವಕುಮಾರ್ ಭವಿಷ್ಯ ನಿರ್ಧಾರ

      ಡಿ.ಕೆ.ಶಿವಕುಮಾರ್‌ಗೆ ಅವರ ದೆಹಲಿ ನಿವಾಸದಲ್ಲಿ ದೊರೆತಿದ್ದ ಎಂಟು ಕೋಟಿ ರೂಪಾಯಿ ಅಕ್ರಮ ಹಣದ ಬಗ್ಗೆ ತನಿಖೆಗೆ ಈ ಸಮನ್ಸ್‌ ಅನ್ನು ಇಡಿ ನೀಡಿದೆ. ಇಂದಿನ ವಿಚಾರಣೆಗೆ ಡಿ.ಕೆ.ಶಿವಕುಮಾರ್‌ಗೆ ಸಂಕಷ್ಟ ತರುವ ಸಾಧ್ಯತೆ ಇದೆ.

      DK Shivakumar ED Investigation And High Court Order LIVE Updates

      ಇಂದಿನ ಡಿ.ಕೆ.ಶಿವಕುಮಾರ್ ಅವರ ಉತ್ತರಗಳು ಇಡಿಗೆ ತೃಪ್ತಿ ತರದ ಪಕ್ಷದಲ್ಲಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಪ್ರಸ್ತುತ ಕುಟುಂಬ ಸಮೇತ ದೇವಾಲಯಕ್ಕೆ ತೆರಳಿರುವ ಡಿ.ಕೆ.ಶಿವಕುಮಾರ್ ಅವರು ಕೆಲವೇ ಸಮಯದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

      Newest FirstOldest First
      12:15 PM, 2 Sep

      ಡಿಕೆ.ಶಿವಕುಮಾರ್ ಪರಿಸ್ಥಿತಿ ನೋಡಿ ಅವರ ತಾಯಿ ಗೌರಮ್ಮ ಅವರು ಕಣ್ಣೀರು ಸುರಿಸಿದ್ದಾರೆ.
      11:36 AM, 2 Sep

      ವಿಚಾರಣೆಗೆ ಹಾಜರಾಗುವ ಮುನ್ನಾ ಡಿ.ಕೆ.ಶಿವಕುಮಾರ್ ಅವರು ವಿಘ್ನವಿನಾಶಕ ಗಣೇಶನ ದರ್ಶನ ಪಡೆದು ಪೂಜೆ ನಡೆಸಿದರು. ಸಹೋದರ ಡಿ.ಕೆ.ಸುರೇಶ್ ಸಹ ಜೊತೆಗೆ ಇದ್ದರು.
      11:19 AM, 2 Sep

      ಇಡಿ ವಿಚಾರಣೆಗೆ ತೆರಳುವ ಮುನ್ನಾ ಮಾಧ್ಯಮಗಳ ಮುಂದೆ ಮಾತನಾಡಿದ ಡಿ.ಕೆ.ಶಿವಕುಮಾರ್ ಭಾವುಕರಾದರು. ಅಪ್ಪನ ಕಾರ್ಯ ಇಂದು, ಅವರಿಗೆ ಎಡೆ ಇಡಲು ಸಹ ಆಗಲಿಲ್ಲ. ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಡಿಕೆಶಿ ಹೇಳಿದರು.
      6:46 PM, 31 Aug

      ಸತತ ಎಂಟು ಗಂಟೆಗಳ ನಂತರವೂ ಡಿಕೆ ಶಿವಕುಮಾರ್ ಅವರ ವಿಚಾರಣೆ ನಡೆದೇ ಇದೆ. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರಾರಂಭವಾದ ವಿಚಾರಣೆ ಇನ್ನೂ ನಡೆಯುತ್ತಿದೆ. ನಡುವೆ ಕೆಲ ಸಮಯ ಊಟಕ್ಕೆ ಅಷ್ಟೆ ಡಿಕೆ ಶಿವಕುಮಾರ್ ಅವರಿಗೆ ವಿರಾಮ ನೀಡಲಾಗಿತ್ತು.
      3:35 PM, 31 Aug

      ಊಟದ ವಿರಾಮಕ್ಕೆ ಹೊರಗೆ ಬಂದಿದ್ದ ಡಿ.ಕೆ.ಶಿವಕುಮಾರ್ ಈಗ ಮತ್ತೆ ಇಡಿ ಕಚೇರಿಗೆ ಬಂದಿದ್ದಾರೆ. ಬೆಳಿಗ್ಗೆ 11:30 ಕ್ಕೆ ಇಡಿ ಕಚೇರಿಗೆ ತೆರಳಿರುವ ಡಿ.ಕೆ.ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದಾರೆ.
      3:01 PM, 31 Aug

      ಇಡಿ ಕಚೇರಿಯಿಂದ ಡಿ.ಕೆ.ಶಿವಕುಮಾರ್ ಅವರು ಹೊರಬಂದಿದ್ದಾರೆ. ಊಟದ ವಿರಾಮ ಇರುವ ಕಾರಣ, ಊಟಕ್ಕೆಂದು ಡಿ.ಕೆ.ಶಿವಕುಮಾರ್ ಅವರು ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಊಟದ ವಿರಾಮದ ಬಳಿಕ ಮತ್ತೆ ವಿಚಾರಣೆಗೆ ತೆರಳಲಿದ್ದಾರೆ.
      11:53 AM, 31 Aug

      ಡಿ.ಕೆ.ಶಿವಕುಮಾರ್ ಅವರು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಎರಡನೇ ದಿನದ ವಿಚಾರಣೆ ನಡೆಯುತ್ತಿದೆ.
      Advertisement
      11:30 AM, 31 Aug

      ಇಡಿ ತನಿಖೆಗೆ ಎಲ್ಲ ‌ಸಹಕಾರ ನೀಡಿದ್ದೇನೆ. ನನಗೆ ಯಾವುದೇ ಭಯವಿಲ್ಲ. ತಪ್ಪು ಮಾಡಿದ್ದರೆ ತಾನೇ ಹೆದರಬೇಕು. ನಾನು ಯಾವ ತಪ್ಪು ಮಾಡಿಲ್ಲ. ಇಡಿ ಅಧಿಕಾರಿಗಳು ಒಂದು ತಿಂಗಳು ವಿಚಾರಣೆಗೆ ಕರೆದರೂ ಹಾಜರಾಗುತ್ತೇನೆ. ನ್ಯಾಯಾಂಗ ಹಾಗೂ ಕಾನೂ‌ನಿ‌ನ ಮೇಲೆ ನಂಬಿಕೆ ಹಾಗೂ ಗೌರವವಿದೆ- ಡಿ.ಕೆ.ಶಿವಕುಮಾರ್
      11:03 AM, 31 Aug

      ಎರಡನೇ ದಿನದ ಇಡಿ ವಿಚಾರಣೆಗೆ ಸಂಸದ ಡಿ.ಕೆ.ಸುರೇಶ್ ನಿವಾಸದಿಂದ ಡಿ.ಕೆ.ಶಿವಕುಮಾರ್ ಅವರು ತೆರಳಿದ್ದಾರೆ. ಇಂದು ಹನ್ನೊಂದು ಗಂಟೆಗೆ ಇಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ತಿಳಿಸಲಾಗಿತ್ತು.
      8:36 AM, 31 Aug

      ರಾತ್ರಿ ವಿಚಾರಣೆ ಮುಗಿದ ಬಳಿಕ ಮತ್ತೆ ಸಮನ್ಸ್ ನೀಡಿರುವ ಇಡಿ ಅಧಿಕಾರಿಗಳು, ಶನಿವಾರ ಬೆಳಿಗ್ಗೆ ಪುನಃ ಹಾಜರಾಗುವಂತೆ ಸೂಚಿಸಿದ್ದಾರೆ.
      8:34 AM, 31 Aug

      ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಸುಮಾರು 70 ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
      8:25 AM, 31 Aug

      ಶುಕ್ರವಾರ ರಾತ್ರಿಯಿಂದಲೂ ಡಿಕೆ ಶಿವಕುಮಾರ್ ಅವರೊಂದಿಗೆ ಇದ್ದು ಅನೇಕ ಮುಖಂಡರು ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ.
      Advertisement
      8:19 AM, 31 Aug

      ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಶರ್ಮಾ ಟ್ರಾನ್ಸ್‌ಪೋರ್ಟ್ ಮಾಲೀಕ ಸುನಿಲ್ ಶರ್ಮಾ, ಡಿಕೆ ಶಿವಕುಮಾರ್ ಆಪ್ತ ಸಚಿನ್ ನಾರಾಯಣ್, ಡಿಕೆಶಿ ಆಪ್ತ ಸಹಾಯಕ ಆಂಜನೇಯ ಅವರಿಗೆ ಸಮನ್ಸ್ ನೀಡಿಲ್ಲ.
      12:17 AM, 31 Aug

      ಶುಕ್ರವಾರದ ವಿಚಾರಣೆ ಮುಗಿಸಿಕೊಂಡು ಹೊರ ಬಂದ ಡಿ.ಕೆ ಶಿವಕುಮಾರ್, "ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ, ನಾಳೆ(ಆಗಸ್ಟ್ 31) ಬೆಳಗ್ಗೆ11ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ, ನಾನು ನ್ಯಾಯಯುತವಾಗಿ ನಡೆದುಕೊಳ್ಳುತ್ತೇನೆ" ಎಂದರು
      12:15 AM, 31 Aug

      ಡಿ.ಕೆ ಶಿವಕುಮಾರ್ ಗೆ ನೀಡಿದ್ದ ಸಮನ್ಸ್ ಅವಧಿ ಶುಕ್ರವಾರ ರಾತ್ರಿ 12 ಗಂಟೆಗೆ ಮುಗಿಯುವುದರಿಂದ 12 ಗಂಟೆಯೊಳಗೆ ಇಂದಿನ ವಿಚಾರಣೆ ಮುಗಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು
      12:14 AM, 31 Aug

      ಶುಕ್ರವಾರ ಸಂಜೆ 6 ಗಂಟೆಯಿಂದ ರಾತ್ರಿ 11.30ರ ತನಕ ಡಿ.ಕೆ ಶಿವಕುಮಾರ್ ವಿಚಾರಣೆ ನಡೆಸಲಾಗಿದೆ
      11:28 PM, 30 Aug

      ಇಡಿ ಕಚೇರಿ ಬಳಿ ಮಾತನಾಡಿದ ಮಂಡ್ಯ ಕ್ಷೇತ್ರದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, "ಡಿ. ಕೆ. ಶಿವಕುಮಾರ್‌ರನ್ನು ರಾಜಕೀಯವಾಗಿ ಮುಗಿಸಲು ಇಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಪರೇಷನ್ ಕಮಲದ ಬಗ್ಗೆಯೂ ತನಿಖೆ ಮಾಡಲಿ" ಎಂದರು.
      11:13 PM, 30 Aug

      ಡಿ. ಕೆ. ಶಿವಕುಮಾರ್‌ಗೆ ಇಡಿ ಕಚೇರಿಯ ಸಿಬ್ಬಂದಿಗಳು ರಾತ್ರಿಯ ಊಟವನ್ನು ತಂದುಕೊಟ್ಟಿದ್ದಾರೆ. ಅಧಿಕಾರಿಗಳು, ಅಲ್ಲಿಯೇ ಊಟ ಮುಗಿಸಿದ್ದಾರೆ.
      11:12 PM, 30 Aug

      ಒಂದು ಹಂತದ ವಿಚಾರಣೆ ಪೂರ್ಣಗೊಳಿಸಿದ ಇಡಿ ಅಧಿಕಾರಿಗಳು. ಸ್ವಲ್ಪ ವಿಶ್ರಾಂತಿ ಕೊಟ್ಟು 2ನೇ ಹಂತದ ವಿಚಾರಣೆ ಆರಂಭಿಸಿದರು.
      11:11 PM, 30 Aug

      ಸಂಜೆ 6.30ರಿಂದ ನವದೆಹಲಿಯ ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಲ್ಲಿ ಡಿ. ಕೆ. ಶಿವಕುಮಾರ್ ವಿಚಾರಣೆ ನಡೆಯುತ್ತಿದೆ.
      6:36 PM, 30 Aug

      ವಿಚಾರಣೆಗೆ ಸಮಯ ನೀಡಿದರೆ ಈಗಲೇ ವಿಚಾರಣೆ ಎದುರಿಸುತ್ತೇನೆ ಎಂದು ಹೇಳಿರುವ ಡಿಕೆ ಶಿವಕುಮಾರ್ ನಾನು ಯಾವ ತಪ್ಪೂ ಮಾಡಿಲ್ಲ, ಕಾನೂನಿಗೆ ನಾನು ಗೌರವ ಕೊಡಬೇಕು, ಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
      6:02 PM, 30 Aug

      ಡಿಕೆ ಶಿವಕುಮಾರ್ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ತೆರಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಉತ್ತರಗಳು ಇಡಿ ಅಧಿಕಾರಿಗಳಿಗೆ ತೃಪ್ತಿ ಆಗದೇ ಇದ್ದಲ್ಲಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
      5:27 PM, 30 Aug

      ಮಂಗಳೂರು, ದಕ್ಷಿಣ ಕನ್ನಡ, ಬೆಂಗಳೂರು, ನೆಲಮಂಗಲ, ಕನಕಪುರ, ರಾಮನಗರ ಇನ್ನೂ ಕೆಲವು ಕಡೆ ಡಿ.ಕೆ.ಶಿವಕುಮಾರ್ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
      5:00 PM, 30 Aug

      ಡಿಕೆ ಶಿವಕುಮಾರ್ ಅವರು ಇದೀಗಷ್ಟೆ ದೆಹಲಿಗೆ ತೆರಳಿದ್ದು, ಅವರು ನೇರವಾಗಿ ಇಡಿ ಕಚೇರಿಗೆ ತೆರಳುತ್ತಾರೆಯೋ ಅಥವಾ ಕಾನೂನು ಸಲಹೆಗಾರರನ್ನು ಭೇಟಿ ಮಾಡಿ ಆ ನಂತರ ವಿಚಾರಣೆಗೆ ಹಾಜರಾಗುತ್ತಾರೆಯೋ ಕಾದು ನೋಡಬೇಕಿದೆ.
      2:24 PM, 30 Aug

      ಟ್ವೀಟ್‌ ಮೂಲಕ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಂತಿರುವ ಸಿದ್ದರಾಮಯ್ಯ, 'ಕೇಂದ್ರ ಸರ್ಕಾರ ಸಿಬಿಐ,ಇಡಿ ಮೊದಲಾದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ದುರುಪಯೋಗ ಮಾಡುತ್ತಿರುವುದು ಖಂಡನೀಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕೇ ಹೊರತು ಹೀಗೆ ಅಧಿಕಾರ ದುರ್ಬಳಕೆ ಮೂಲಕ ಅಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
      1:56 PM, 30 Aug

      2017 ರಲ್ಲಿ ನಾನು ಮಹಾರಾಷ್ಟ್ರದ ನನ್ನ ಪಕ್ಷದ ಶಾಸಕರನ್ನು, ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು, ನನ್ನದೇ ರಾಜ್ಯದ ನಮ್ಮ ಪಕ್ಷದ ಶಾಸಕರನ್ನು ನಮ್ಮ ಪಕ್ಷದ ಆಜ್ಞೆಯಂತೆ ಕಾಪಾಡಿಕೊಂಡೆ ಅಂದಿನಿಂದಲೂ ನನ್ನ ವಿರುದ್ಧ ರಾಜಕೀಯ ಪ್ರೇರಿತವಾದ ಐಟಿ, ಇಡಿ ತಂತ್ರವನ್ನು ಬಳಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
      1:47 PM, 30 Aug

      ಇಂದು ಅಕಸ್ಮಾತ್ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿದ್ದೇ ಆದರೆ ಕನಿಷ್ಟ ಎರಡು ದಿನ ಡಿ.ಕೆ.ಶಿವಕುಮಾರ್ ಇಡಿ ವಶದಲ್ಲೇ ಇರಬೇಕಾಗುತ್ತದೆ. ನಾಳೆ ಶನಿವಾರ ಮತ್ತು ಭಾನುವಾರ ನ್ಯಾಯಾಲಯ ಕಾರ್ಯ ನಿರ್ವಿಸುವುದಿಲ್ಲ ಹಾಗಾಗಿ ಅವರಿಗೆ ಜಾಮೀನು ದೊರೆಯುವ ಸಾಧ್ಯತೆ ಇಲ್ಲ.
      1:45 PM, 30 Aug

      ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ರಕ್ಷಣೆಯನ್ನು ನೀಡಲು ಹೈಕೋರ್ಟ್‌ ನಿರಾಕರಿಸುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನದ ಭೀತಿ ಉದ್ಭವವಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಡಿ ಬಳಿ ವಿಚಾರಣೆಗೆ ತೆರಳಿದಾಗ, ಅವಶ್ಯಕತೆ ಬಿದ್ದರೆ ಇಂದೇ ಅವರನ್ನು ವಶಕ್ಕೆ ಪಡೆಯ ಬಹುದಾಗಿದೆ.
      1:45 PM, 30 Aug

      ಡಿ.ಕೆ.ಶಿವಕುಮಾರ್ ಅವರು ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗದೇ ಇದ್ದರೆ ಇಡಿಯವರೇ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಈಗಾಗಲೇ ದೆಹಲಿಗೆ ತೆರಳಿರುವ ಡಿ.ಕೆ.ಶಿವಕುಮಾರ್ ಅವರು ಕಾನೂನು ತಜ್ಞರ ಸಲಹೆ ಪಡೆದು ಇಂದೇ ಇಡಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
      1:40 PM, 30 Aug

      ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ರಕ್ಷಣೆಯನ್ನು ನೀಡಲು ಹೈಕೋರ್ಟ್‌ ನಿರಾಕರಿಸುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನದ ಭೀತಿ ಉದ್ಭವವಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಡಿ ಬಳಿ ವಿಚಾರಣೆಗೆ ತೆರಳಿದಾಗ, ಅವಶ್ಯಕತೆ ಬಿದ್ದರೆ ಇಂದೇ ಅವರನ್ನು ವಶಕ್ಕೆ ಪಡೆಯ ಬಹುದಾಗಿದೆ.
      READ MORE

      English summary
      DK Shivakumar today attending front of ED for investigation. He also requested high court for interim protection.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X