ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬೆನ್ನಲ್ಲೆ ಡಿಕೆಶಿ ಮೆಗಾ ಪ್ಲಾನ್!

|
Google Oneindia Kannada News

ಬೆಂಗಳೂರು, ಡಿ. 30: ಪಂಚಾಯತಿ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಲು ಹಾಗೂ ಮುಂಬರುವ ಉಪ ಚುನಾವಣೆಗಳು, ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಪಕ್ಷದ ಬಲವರ್ಧನೆಗೆ ವಿಭಾಗವಾರು ಸಭೆ ನಡೆಸಲು ಕಾಂಗ್ರೆೆಸ್ ನಿರ್ಧರಿಸಿದೆ.

ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಎಲ್ಲ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರೊಂದಿಗೆ ವರ್ಚುವಲ್ ಸಭೆ ನಡೆಸಿ, ಜನವರಿ 6 ರಂದು ಮೈಸೂರು ವಿಭಾಗದ ಸಭೆಯನ್ನು ಮಂಗಳೂರಿನ ಬಂಟ್ವಾಳದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರು, ಹಾಲಿ ಶಾಸಕರು, ಮಾಜಿ ಸಚಿವರು, ಸಂಸದರು, ಶಾಸಕರು, ಕೆಪಿಸಿಸಿ ಮಾಜಿ ಪದಾದಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Karnataka Gram Panchayat Election Results 2020 Live : ಪಂಚಾಯಿತಿ ಫಲಿತಾಂಶKarnataka Gram Panchayat Election Results 2020 Live : ಪಂಚಾಯಿತಿ ಫಲಿತಾಂಶ

ಇಡೀ ದಿನ ನಡೆಯುವ ಸಭೆಯಲ್ಲಿ ಜಿಲ್ಲಾ ಮುಖಂಡರು ತಮ್ಮ ಜಿಲ್ಲೆೆಯಲ್ಲಿನ ಸಮಸ್ಯೆೆ ಹಾಗೂ ಪಕ್ಷ ಸಂಘಟನೆಗೆ ಆಗುತ್ತಿರುವ ಸಮಸ್ಯೆೆಯ ಬಗ್ಗೆೆ ಮುಕ್ತವಾಗಿ ಮಾತನಾಡಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

DK Shivakumar decided to hold divisional meeting to strengthen party at panchayat level

ಜನವರಿ 8 ಬೆಂಗಳೂರು ವಿಭಾಗದ ಸಭೆಯನ್ನು ರಾಮನಗರದ ಬಿಡದಿಯಲ್ಲಿ, ಜ. 11 ರಂದು ಬೆಳಗಾವಿ ವಿಭಾಗದ ಸಭೆಯನ್ನು ಹುಬ್ಬಳ್ಳಿ ಹಾಗೂ ಜ. 15 ರಂದು ಕಲಬುರ್ಗಿಯಲ್ಲಿ ವಿಭಾಗ ಮಟ್ಟದ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಪಂಚಾಯತಿ ಸಮಿತಿ ರಚನೆ: ಎಲ್ಲ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರು ಜನವರಿ 25 ರೊಳಗೆ ಪಕ್ಷದ ವತಿಯಿಂದ ಪಂಚಾಯತಿ ಸಮಿತಿಗಳ ಮತ್ತು ನಗರ ಪ್ರದೇಶದಲ್ಲಿ ವಾರ್ಡ್ ಸಮಿತಿಗಳ ರಚನೆ ಮಾಡುವಂತೆ ಸೂಚನೆ ನೀಡಿದ್ದಾಾರೆ. ನಂತರ ಬೂತ್ ಸಮಿತಿ ರಚನೆಗೂ ಸೂಚನೆ ನೀಡಲಾಗಿದೆ.

ಪ್ರತಿ ಪಂಚಾಯತಿ ಸಮಿತಿಯಲ್ಲಿ 5 ಜನ ಪದಾಧಿಕಾರಿಗಳು ಹಾಗೂ ಕನಿಷ್ಠ 25 ಜನ ಸದಸ್ಯರಿರುವಂತೆ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ಬೂತ್‌ನವರು ಸಮಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ನಗರ ಪ್ರದೇಶದಲ್ಲಿಯೂ ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ವಿಭಾಗವಾರು ಸಭೆಗಳ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಂಸದ ಧ್ರುವ ನಾರಾಯಣ, ವಿಧಾನ ಪರಿಷತ್ ಸದಸ್ಯ ಎಸ್.ರವಿ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಫಿ ಉಲ್ಲಾ ಹಾಜರಿದ್ದರು.

Recommended Video

ರಾಯಚೂರು: ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿ ಅಸ್ವಸ್ಥ-ಕೆಲ ಕಾಲ ಮತ ಎಣಿಕೆ ಕಾರ್ಯ ಸ್ಥಗಿತ | Oneindia Kannada

English summary
Congress Party has decided to hold a divisional meeting to strengthen the party at the panchayat level and strengthen the party for the upcoming by-elections, taluka and district panchayat elections. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X