• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಕೆಶಿ ವಿಚಾರಣೆ: ಇಡಿ ಅಧಿಕಾರಿಗಳ ಈ ಹೇಳಿಕೆಗೆ ರಾಜಕಾರಣಿಗಳು ತಲೆ ತಗ್ಗಿಸಲೇಬೇಕು

|
   DK Shivakumar : ಇಡಿ ಅಧಿಕಾರಿಗಳ ಈ ಹೇಳಿಕೆಗೆ ರಾಜಕಾರಣಿಗಳು ತಲೆ ತಗ್ಗಿಸಲೇಬೇಕು | Oneindia Kannada

   ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಬೇಲ್ ಸಿಗದೇ, ಜೈಲ್ ಮುಂದುವರಿದಿದೆ. ವಿಶೇಷ ನ್ಯಾಯಾಲಯ ಡಿಕೆಶಿಗೆ ಬೇಲ್ ನೀಡಲು ನಿರಾಕರಿಸಿದ್ದು, ಮುಂದಿನ ಮಂಗಳವಾರ (ಸೆ 17) ನೋಡೋಣ ಎಂದಿದೆ. ಅವತ್ತು ಅಂಗಾರಕ ಸಂಕಷ್ಟಿ, ಏನಾಗುತ್ತೋ (ಡಿಕೆಶಿ ಪರಮ ದೈವಭಕ್ತರಾಗಿರುವುದರಿಂದ).

   ಶುಕ್ರವಾರ, ಡಿಕೆಶಿ ಪರ ವಕೀಲರಾದ ಸಿಂಘ್ವಿ ಮತ್ತು ಇಡಿ ಪರ ವಕೀಲ ನಟರಾಜ್, ಮಂಡಿಸಿದ ವಕಾಲತ್ತು, ಇಡೀ ನಮ್ಮ ದೇಶದ ರಾಜಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ಅದರಲ್ಲೂ, ಇಡಿ ಪರ ವಕೀಲರು, ಡಿಕೆಶಿ ವಿರುದ್ದ ಮಾಡಿರುವ ಗಂಭೀರ ಆರೋಪ ಗಮನಿಸಬೇಕಾಗಿರುವಂತದ್ದು.

   ಒಂದು ವೇಳೆ ಈ ಆರೋಪಗಳು ರುಜುವಾತು ಆಗಿದ್ದೇ ಆದಲ್ಲಿ, ಅದು ನಮ್ಮ ರಾಜಕೀಯದ ದುರಂತ. ಕೇಂದ್ರದ ತನಿಖಾ ಸಂಸ್ಥೆಗಳು, ಮೋದಿ ಮತ್ತು ಶಾ ಅಣತಿಯಂತೆ ನಡೆಯುತ್ತದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಬಿಜೆಪಿಯವರು, ಆಕಡೆ ಕೂತಿದ್ದರೂ ಅದನ್ನೇ ಮಾಡುತ್ತಿದ್ದರು.

   ಡಿಕೆಶಿ ಸುಪರ್ಧಿಯಲ್ಲಿ 317 ಬ್ಯಾಂಕ್ ಖಾತೆ: ಇಡಿ ತನಿಖೆ

   ಆದರೂ, ನ್ಯಾಯಾಲಯಕ್ಕೆ ಆರೋಪಿ ವಿರುದ್ದ ಹೇಳಿಕೆಯನ್ನು ನೀಡುವಾಗ, ತನಿಖಾ ಸಂಸ್ಥೆಗಳು, ದಾಖಲೆಯಿಲ್ಲದೇ ಮಾತನಾಡುತ್ತವೆಯೇ ಎನ್ನುವುದು ಇಲ್ಲಿ ಕಾಮನ್ ಸೆನ್ಸ್. ಯಾಕೆಂದರೆ, ಈ ಕೋರ್ಟ್ ಇಲ್ಲದಿದ್ದರೇ, ಹೈಕೋರ್ಟ್, ಅಲ್ಲೂ ಆಗದಿದ್ದರೆ, ಸುಪ್ರೀಂಕೋರ್ಟ್ ಎನ್ನುವ ಆಪ್ಸನ್ ಎಲ್ಲರಿಗೂ ಇದ್ದೇ ಇರುತ್ತದೆ.

   ಡಿ.ಕೆ.ಶಿವಕುಮಾರ್‌ಗೆ 800 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ

   ಡಿ.ಕೆ.ಶಿವಕುಮಾರ್‌ಗೆ 800 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ

   ಇಡಿ ಪರ ವಾದ ಮಂಡಿಸುತ್ತಿದ್ದ ನಟರಾಜ್, " ಡಿ.ಕೆ.ಶಿವಕುಮಾರ್‌ಗೆ 800 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ ಇದೆ. ಈವರೆಗೆ 200 ಕೋಟಿ ಬೇನಾಮಿ ಆಸ್ತಿ ದಾಖಲೆ ದೊರೆತಿದೆ. ಇನ್ನೂ ಕೆಲವು ತನಿಖೆ ನಡೆಸಲಾಗುತ್ತಿದೆ" ಎಂದು ಹೇಳುತ್ತಾ ಎರಡು ಪ್ರಮುಖ ವಾದವನ್ನು ಮಂಡಿಸಿದ್ದಾರೆ.

   317 ಖಾತೆಗಳ ಮೂಲಕ ವಿವಿದೆಡೆ ಹೂಡಿಕೆ

   317 ಖಾತೆಗಳ ಮೂಲಕ ವಿವಿದೆಡೆ ಹೂಡಿಕೆ

   " ಡಿ.ಕೆ.ಶಿವಕುಮಾರ್ ತಮ್ಮ ಅಕ್ರಮ ಹಣವನ್ನು ಇಪ್ಪತ್ತು ವಿವಿಧ ಬ್ಯಾಂಕುಗಳ ಮೂಲಕ, 317 ಖಾತೆಗಳ ಮೂಲಕ ವಿವಿದೆಡೆ ಹೂಡಿಕೆ ಮಾಡಿದ್ದಾರೆ" ಎಂದು ನಟರಾಜ್, ಇಡಿ ಪರ ವಾದ ಮಂಡಿಸಿದ್ದಾರೆ. ಆ ವೇಳೆ, ಡಿ.ಕೆ.ಶಿವಕುಮಾರ್ ಅವರಿಗೆ ಸೂಕ್ತ ವೈದ್ಯಕೀಯ ಸವಲತ್ತು ನೀಡಿ ಆ ನಂತರ ಅವರನ್ನು ಪ್ರಶ್ನೆ ಮಾಡಿ ಎಂದು ಇಡಿಗೆ ನ್ಯಾಯಾಧೀಶರು ಸೂಚನೆ ನೀಡಿದರು.

   ಡಿಕೆಶಿ ವಿಚಾರಣೆ: 10 ದಿನದಲ್ಲಿ ಸಿಗದ ಉತ್ತರ 4 ದಿನದಲ್ಲಿ ಸಿಗುತ್ತಾ?

   ಡಿ.ಕೆ.ಶಿವಕುಮಾರ್ ಅವರಂತಹ ವ್ಯಕ್ತಿ, ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಕಳಂಕ

   ಡಿ.ಕೆ.ಶಿವಕುಮಾರ್ ಅವರಂತಹ ವ್ಯಕ್ತಿ, ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಕಳಂಕ

   " ಡಿ.ಕೆ.ಶಿವಕುಮಾರ್ ಅವರಂತಹ ವ್ಯಕ್ತಿ, ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಕಳಂಕ" ಎನ್ನುವ ರೀತಿಯಲ್ಲಿ ಇಡಿ ಪರ ವಕೀಲರು ವಾದ ಮಂಡಿಸಿದ್ದಾರೆ. ಇಷ್ಟೊಂದು ಬೇನಾಮಿ ಅಕೌಂಟ್, ಹಣ ವರ್ಗಾವಣೆಯ ಎಲ್ಲಾ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ ಎಂದು ಇಡಿ ಪರವಾಗಿ ವಕೀಲರು ವಾದ ಮಂಡಿಸಿದರು.

   ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಮಾತು

   ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಮಾತು

   317 ಖಾತೆಗಳು ಮತ್ತು ಡಿಕೆಶಿ ದೇಶದ ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಕಳಂಕ ಎನ್ನುವ ಇಡಿ ವಕೀಲರ ವಾದಕ್ಕೆ ಪೂರಕವಾದ ದಾಖಲೆಗಳು ಲಭ್ಯವಾಗಿದ್ದೇ ಆದಲ್ಲಿ, ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಆದರೆ, ಇದು ಪಕ್ಕಾ ಆಗುವುದು ಕೋರ್ಟ್ ಅಂತಿಮ ತೀರ್ಪಿನ ನಂತರ..

   ಮಲ್ಯ, ಮೋದಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೈಕೊಟ್ಟು ದೇಶಬಿಟ್ಟು ಹೋಗಲಿಲ್ಲವೇ?

   ಮಲ್ಯ, ಮೋದಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೈಕೊಟ್ಟು ದೇಶಬಿಟ್ಟು ಹೋಗಲಿಲ್ಲವೇ?

   ಮಲ್ಯ, ಚೋಕ್ಸಿ, ಮೋದಿ ಮುಂತಾದವರು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೈಕೊಟ್ಟು ದೇಶಬಿಟ್ಟು ಹೋಗಲಿಲ್ಲವೇ? ಆಗ, ದೇಶದ ಆರ್ಥಿಕತೆಗೆ ತೊಂದರೆ ಬಂದಿಲ್ಲವೇ ಎನ್ನುವುದು ಪ್ರಶ್ನೆ. ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17 ರ ವರೆಗೆ ಇಡಿ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಹುಲ್ ಕುಹರ್ ಆದೇಶ ನೀಡಿದ್ದಾರೆ. ಡಿಕೆಶಿ ಅವರ ಪರವಾಗಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಗೆ ಇಡಿ ಆಕ್ಷೇಪಣೆ ಸಲ್ಲಿಸದೇ ಇರುವುದು ಗಮನಿಸಬೇಕಾದ ವಿಚಾರ.

   English summary
   DK Shivakumar Case Hearing ED (Enforcement Directorate) Advocate Argument Is Key Interms Of Current Political Situation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X