• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿ. ಕೆ. ಶಿವಕುಮಾರ್ ಜಂಘಾಬಲವನ್ನೇ ಅಡಗಿಸಿದ ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆ!

|
   DK Shivakumar case : ಡಿ. ಕೆ. ಶಿವಕುಮಾರ್ ವಿರುದ್ಧ ರಾಶಿರಾಶಿ ದಾಖಲೆ! | Oneindia Kannada

   ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಗುರುವಾರ (ಸೆ 19) ಭಾರೀ ಪೂರ್ವತಯಾರಿ ಮಾಡಿಕೊಂಡು ಬಂದಿದ್ದರು.

   ನಟರಾಜ್, ಅದೆಷ್ಟು ಸಿದ್ದತೆ ಮಾಡಿಕೊಂಡು ಬಂದಿದ್ದರು ಎಂದರೆ, ಐದು ಸೂಟ್ಕೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಕೇಸ್ ವಿರುದ್ದದ ದಾಖಲೆಗಳನ್ನು ನ್ಯಾಯಾಯಲಕ್ಕೆ ತಂದಿದ್ದರು.

   ಒಂದೊಂದು ವಾದಗಳನ್ನು ಮಂಡಿಸುವಾಗಲೂ, ಅದಕ್ಕೆ ಸಂಬಂಧಪಟ್ಟ ಹಲವು ದಾಖಲೆಗಳನ್ನು ರೋಸ್‌ ಅವೆನ್ಯೂ ನ್ಯಾಯಾಲಯದ ಜಡ್ಜ್ ಮುಂದಿಡುತ್ತಿದ್ದರು. ಹಾಗಾಗಿ, ಅತ್ಯಂತ ಸುದೀರ್ಘವಾಗಿ ವಿಚಾರಣೆ ನಡೆಯಿತು.

   ಡಿ.ಕೆ.ಶಿವಕುಮಾರ್ ವಿರುದ್ಧ ರಾಶಿಗಟ್ಟಲೆ ಸಾಕ್ಷ್ಯ ನೀಡಿದ ಇಡಿ

   ಗುರುವಾರ ನಡೆದ ವಿಚಾರಣೆಯ ವೇಳೆ, ಇಡಿ ಪರ ವಾದ ಮಂಡಿಸುತ್ತಿರುವ ನಟರಾಜ್, ಪ್ರತಿವಾದಿಗಳಿಗೆ ವಾದ ಮಂಡಿಸಲೂ ಅವಕಾಶವನ್ನೇ ನೀಡಿರಲಿಲ್ಲ. ಒಂದೊಂದು ಅಂಶವನ್ನೂ ಅತ್ಯಂತ ತರ್ಕಬದ್ದವಾಗಿ ವಾದಿಸುತ್ತಿದ್ದರು. ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆಗಳು ಡಿಕೆಶಿ ಜಂಘಾಬಲವನ್ನೇ ಅಡಗಿಸುವ ಸಾಧ್ಯತೆಯಿದೆ, ಮುಂದೆ ಓದಿ..

   ಡಿ.ಕೆ.ಶಿವಕುಮಾರ್ ಅವರ ಪುತ್ರಿ

   ಡಿ.ಕೆ.ಶಿವಕುಮಾರ್ ಅವರ ಪುತ್ರಿ

   ಡಿ.ಕೆ.ಶಿವಕುಮಾರ್ ಅವರ ಪುತ್ರಿಯನ್ನು ನಾವು ವಿಚಾರಣೆಗೆ ಒಳಪಡಿಸಿದೆವು. ಸಾಲು ಕೊಟ್ಟವರು ಯಾರು ಎನ್ನುವ ಬಗ್ಗೆ, ಸರಿಯಾದ ಮಾಹಿತಿ ಅವರಿಗಿಲ್ಲ. ನಲವತ್ತು ಕೋಟಿ ನೀಡಲಾಗಿದೆ ಎಂದು ದಾಖಲೆ ಒದಗಿಸಲಾಗಿದೆ. ಈ ಬಗ್ಗೆ, ಇನ್ನೂ ಕೂಲಂಕುಷ ವಿಚಾರಣೆಗೆ ನಮಗೆ ಕಾಲಾವಕಾಶ ಬೇಕಿದೆ.

   ಅಪನಗದೀಕರಣದ ವೇಳೆ

   ಅಪನಗದೀಕರಣದ ವೇಳೆ

   ಅಪನಗದೀಕರಣದ ವೇಳೆ, ಭಾರೀ ಹಣಕಾಸಿನ ವ್ಯವಹಾರ ನಡೆದಿದೆ. ಕೆಲವೊಂದು, ಹೇಳಿಕೆಗಳಿಗೂ, ದಾಖಲೆಗಳಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಈ ಕೇಸಿಗೆ ಸಂಬಂಧಿಸಿದಂತೆ, ಹಲವು ರಾಜಕೀಯ ಮುಖಂಡರು ಸೇರಿದಂತೆ, ಉದ್ಯಮಿಗಳು, ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಬೇಕಿದೆ.

   ಇ.ಡಿಯಿಂದ ಮತ್ತೊಂದು ಬಾಂಬ್: ಡಿಕೆ ಶಿವಕುಮಾರ್ ಮಾವನಿಗೆ ಸಮನ್ಸ್‌

   85 ನಿಮಿಷ ಸತತವಾಗಿ ಇಡಿ ಪರ ವಕೀಲ ನಾಗರಾಜ್ ವಾದ

   85 ನಿಮಿಷ ಸತತವಾಗಿ ಇಡಿ ಪರ ವಕೀಲ ನಾಗರಾಜ್ ವಾದ

   ಸುಮಾರು 85 ನಿಮಿಷ ಸತತವಾಗಿ ಇಡಿ ಪರ ವಕೀಲ ನಟರಾಜ್ ವಾದ ಮಂಡಿಸುತ್ತಿದ್ದರು. ಪ್ರತಿಯೊಂದು ವಾದಕ್ಕೂ, ಪೂರಕವಾದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುತ್ತಿದ್ದರು. ಡಿಕೆಶಿ ಮತ್ತು ಈ ಕೇಸಿಗೆ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಿದಾಗ, ಸಂಬಂಧಪಟ್ಟ ದಾಖಲೆಯನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ನಟರಾಜ್, ನ್ಯಾಯಾಧೀಶರಿಗೆ ಹೇಳಿದರು.

   ತಾಯಿ, ಸಹೋದರನ ಹೆಸರಿನಲ್ಲಿ ನೊಂದಣಿಯಾಗಿರುವ ಆಸ್ತಿಗ

   ತಾಯಿ, ಸಹೋದರನ ಹೆಸರಿನಲ್ಲಿ ನೊಂದಣಿಯಾಗಿರುವ ಆಸ್ತಿಗ

   ತನ್ನ ತಾಯಿ, ಸಹೋದರನ ಹೆಸರಿನಲ್ಲಿ ನೊಂದಣಿಯಾಗಿರುವ ಆಸ್ತಿಗಳನ್ನು, ನೇರ ನಗದು ವ್ಯವಹಾರದಲ್ಲಿ ಖರೀದಿಸಲಾಗಿದೆ. ತಮ್ಮದು, ರೈತ ಕುಟುಂಬ ಎಂದು ಹೇಳುವ ಡಿ.ಕೆ.ಶಿವಕುಮಾರ್, ಅದು ಹೇಗೆ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಳ್ಳಲು ಸಾಧ್ಯವೆಂದ ನಟರಾಜ್, ಅದಕ್ಕೂ ಪೂರಕವಾದ ದಾಖಲೆಯನ್ನು ನೀಡಿದ್ದಾರೆ.

   ತೆರಿಗೆ ಕಟ್ಟಿದ ಮಾತ್ರಕ್ಕೆ, ಎಲ್ಲಾ, ಕಪ್ಪುಹಣ ಬಿಳಿಯಾಗಲು ಸಾಧ್ಯವೇ

   ತೆರಿಗೆ ಕಟ್ಟಿದ ಮಾತ್ರಕ್ಕೆ, ಎಲ್ಲಾ, ಕಪ್ಪುಹಣ ಬಿಳಿಯಾಗಲು ಸಾಧ್ಯವೇ

   ಎಲ್ಲಾ ವ್ಯವಹಾರಗಳಿಗೆ, ಭಾರತದ ಸಂವಿಧಾನದ ಪ್ರಕಾರ ತೆರಿಗೆ ಕಟ್ಟಲಾಗಿದೆ ಎನ್ನುವುದು ಆರೋಪಿಯ ನಿಲುವು. ತೆರಿಗೆ ಕಟ್ಟಿದ ಮಾತ್ರಕ್ಕೆ, ಎಲ್ಲಾ, ಕಪ್ಪುಹಣ ಬಿಳಿಯಾಗಲು ಸಾಧ್ಯವೇ ಎಂದು ನಟರಾಜ್ ವಾದ ಮಂಡಿಸಿದ್ದಾರೆ. ಡಿಕೆಶಿ, ಎರಡು ಬ್ಯಾಂಕ್ ನಿಂದ ನೂರಾರು ಕೋಟಿಯ ವ್ಯವಹಾರ ನಡೆಸಿದ್ದಾರೆಂದು ಹೇಳಿ, ಅದಕ್ಕೂ ಪೂರಕ ದಾಖಲೆಯನ್ನು ಇಡಿ ವಕೀಲರು ಒದಗಿಸಿದ್ದಾರೆ. ಇಡಿ ವಕೀಲರು, ಗುರುವಾರ ವಾದ ಮಂಡಿಸಿದ ರೀತಿ, ಡಿಕೆಶಿ ಜಂಘಾಬಲವನ್ನೇ ಅಡಗಿಸುವ ಸಾಧ್ಯತೆಯಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   D K Shivakumar Case: ED Additional Solicitor General KM Nataraj Produced Documents Infront Of Court, What Will Happen To DKS His Bail Plea
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more