ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಬಿ ಹಿಂದೆ 'ಕನಕಪುರ ಬಂಡೆ': ಸಿದ್ದರಾಮಯ್ಯ ಪ್ಲಾನ್ ಫುಲ್ ಸಕ್ಸಸ್: ರಾಮುಲು ಸ್ಫೋಟಕ ಹೇಳಿಕೆ

|
Google Oneindia Kannada News

Recommended Video

ಡಿಕೆಶಿ ಬಂಧನವಾಗಿದ್ದರ ಹಿಂದೆ ಸಿದ್ದು ಮಾಸ್ಟರ್ ಪ್ಲಾನ್ ? | Oneindia Kannada

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಬೇಲಾ ಅಥವಾ ಜೈಲಾ ಎನ್ನುವ ನ್ಯಾಯಾಲಯದ ತೀರ್ಪು ಬುಧವಾರ (ಸೆ 25) ಹೊರಬೀಳಲಿದೆ.

ಡಿಕೆಶಿ ಬಂಧನದ ಹಿಂದೆ ಬಿಜೆಪಿಯ ದ್ವೇಷ ರಾಜಕಾರಣ ಎಂದು ದೂರಲಾಗುತ್ತಿದ್ದರೂ, ಕೆಲವರು ಸಿದ್ದರಾಮಯ್ಯ ಕಡೆ ಬೆರಳು ತೋರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಪ್ರತೀದಿನ ಮಾತಿನ ಚಕಮಕಿ ಮುಂದುವರಿದಿದೆ.

ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್

ಈ ನಡುವೆ, ಆರೋಗ್ಯ ಸಚಿವ ಶ್ರೀರಾಮುಲು, ಡಿಕೆಶಿ ಬಂಧನದ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ದ ಗುರುತರ ಆರೋಪವನ್ನು ಮಾಡಿದ್ದಾರೆ. ಡಿಕೆಶಿ ಬಂಧನಕ್ಕೆ ಅವರ ಪಕ್ಷದವರೇ ಕಾರಣ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಡಿ.ಕೆ.ಶಿವಕುಮಾರ್, ಅನರ್ಹ ಶಾಸರ ಭವಿಷ್ಯ ಇಂದು ನಿರ್ಧಾರಡಿ.ಕೆ.ಶಿವಕುಮಾರ್, ಅನರ್ಹ ಶಾಸರ ಭವಿಷ್ಯ ಇಂದು ನಿರ್ಧಾರ

ಚಾಮರಾಜನಗರದಲ್ಲಿ ಮಾತನಾಡುತ್ತಿದ್ದ ಶ್ರೀರಾಮುಲು, " ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಹಿಂದಿನಿಂದಲೂ ಆಗಿಬರುವುದಿಲ್ಲ. ಹಾಗಾಗಿ ಸಮ್ಮಿಶ್ರ ಸರಕಾರ ಹೆಚ್ಚುದಿನ ಉಳಿಯುವುದಿಲ್ಲ ಎಂದು ಹಿಂದೆನೂ ಹೇಳಿದ್ದೆ" ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರಕಾರ ಪತನ

ಸಮ್ಮಿಶ್ರ ಸರಕಾರ ಪತನ

" ಸಮ್ಮಿಶ್ರ ಸರಕಾರ ಪತನಗೊಂಡಿರುವುದು ಮತ್ತು ಡಿ.ಕೆ.ಶಿವಕುಮಾರ್ ಅವರು ಜೈಲು ಪಾಲಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಪಕ್ಕಾ ಮಾಸ್ಟರ್ ಪ್ಲಾನ್" ಎಂದು ಹೇಳಿರುವ ಶ್ರೀರಾಮುಲು, " ಅವರು ಹಾಕಿದ ಎಲ್ಲಾ ಪ್ಲಾನ್ ಗಳು ಕ್ರಮಬದ್ದವಾಗಿ ನಡೆದಿದೆ" ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯನವರ ರಾಜಕೀಯ ಮಹತ್ವಾಕಾಂಕ್ಷೆಯೇ ಇದಕ್ಕೆಲ್ಲಾ ಕಾರಣ

ಸಿದ್ದರಾಮಯ್ಯನವರ ರಾಜಕೀಯ ಮಹತ್ವಾಕಾಂಕ್ಷೆಯೇ ಇದಕ್ಕೆಲ್ಲಾ ಕಾರಣ

" ಈಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಪ್ರೀಪ್ಲ್ಯಾನ್ಡ್ ಡ್ರಾಮಾ" ಎಂದು ಹೇಳಿರುವ ಶ್ರೀರಾಮುಲು, " ಸಿದ್ದರಾಮಯ್ಯನವರ ರಾಜಕೀಯ ಮಹತ್ವಾಕಾಂಕ್ಷೆಯೇ ಇದಕ್ಕೆಲ್ಲಾ ಕಾರಣ. ಹಾಗಾಗಿ, ಯಾರೂ ಇದಕ್ಕೆ ಬಿಜೆಪಿಯನ್ನು ದೂರಬಾರದು" ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕನಾಗಬಹುದು ಎನ್ನುವುದು ಸಿದ್ದು ಲೆಕ್ಕಾಚಾರ

ವಿರೋಧ ಪಕ್ಷದ ನಾಯಕನಾಗಬಹುದು ಎನ್ನುವುದು ಸಿದ್ದು ಲೆಕ್ಕಾಚಾರ

" ಕುಮಾರಸ್ವಾಮಿ ಸರಕಾರವನ್ನು ಪತನಗೊಳಿಸಿ, ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವುದು ಸಿದ್ದರಾಮಯ್ಯನವರ ಪ್ಲಾನ್ ಆಗಿತ್ತು. ಅದರಿಂದ, ತಾವು ನಿರಾಯಾಸವಾಗಿ ವಿರೋಧ ಪಕ್ಷದ ನಾಯಕನಾಗಬಹುದು ಎನ್ನುವುದು ಸಿದ್ದರಾಮಯ್ಯನವರ ಲೆಕ್ಕಾಚಾರ. ಎಲ್ಲವೂ ಅವರ ಯೋಜನೆಯಂತೇ ನಡೆದಿದೆ" ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

 ಉಪ್ಪು ತಿಂದವನು ನೀರು ಕುಡಿಯಲೇ ಬೇಕಲ್ಲವೇ

ಉಪ್ಪು ತಿಂದವನು ನೀರು ಕುಡಿಯಲೇ ಬೇಕಲ್ಲವೇ

" ಯಾರ್ಯಾರು ಭ್ರಷ್ಟಾಚಾರ, ಹವಾಲ ದಂಧೆ, ಅಕ್ರಮವಾಗಿ ವ್ಯವಹಾರ ಮಾಡಿಕೊಂಡು ಬಂದಿದ್ದಾರೋ, ಅವರಿಗೆಲ್ಲಾ ಇವತ್ತಿಲ್ಲಾಂದ್ರೆ, ನಾಳೆ ಇದೇ ಆಗುವುದು. ಉಪ್ಪು ತಿಂದವನು ನೀರು ಕುಡಿಯಲೇ ಬೇಕಲ್ಲವೇ " ಎಂದು ಶ್ರೀರಾಮುಲು, ಡಿಕೆಶಿ ಬಂಧನದ ವೇಳೆ ಅಭಿಪ್ರಾಯ ಪಟ್ಟಿದ್ದರು.

ನಾನು ‌ನನ್ನ ಸ್ವಂತ ಬಲದಿಂದ ಸಿಎಂ ಆಗಿದ್ದೆ ಅಂತ ಎಲ್ಲೂ ಹೇಳಿಲ್ಲ

ನಾನು ‌ನನ್ನ ಸ್ವಂತ ಬಲದಿಂದ ಸಿಎಂ ಆಗಿದ್ದೆ ಅಂತ ಎಲ್ಲೂ ಹೇಳಿಲ್ಲ

" ನಾನು ‌ನನ್ನ ಸ್ವಂತ ಬಲದಿಂದ ಸಿಎಂ ಆಗಿದ್ದೆ ಅಂತ ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಬೆಂಬಲದಿಂದ ನಾನು ಸಿಎಂ ಅಂತೂ ಆಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಸಿಎಂ ಮಾಡಿತ್ತು. ನಾನು ಸಿದ್ದರಾಮಯ್ಯನವರಿಗೆ ಚಾಲೆಂಜ್ ಒಂದನ್ನು ಮಾಡುತ್ತೇನೆ" ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಸವಾಲನ್ನು ಎಸೆದಿದ್ದರು. ತುಮಕೂರು ಮತ್ತು ಮಂಡ್ಯದಲ್ಲಿ ಜೆಡಿಎಸ್ ಸೋಲಿಗೆ, ಸಿದ್ದರಾಮಯ್ಯನವರೇ ಕಾರಣ ಎಂದು ಕುಮಾರಸ್ವಾಮಿ ಮಂಗಳವಾರ (ಸೆ 24) ಆರೋಪಿಸಿದ್ದರು.

English summary
Senior Congress Leader DK Shivakumar Arrest, Fall Of Coalition Government In Karnataka: Pre-Plan Of Siddaramaiah: State Health Minister B Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X