ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ಬದಲು ಪ್ರಕರಣ: ಬಂಧನದ ಭೀತಿಯಲ್ಲಿ ಡಿಕೆಶಿ ಆಪ್ತರು

By Manjunatha
|
Google Oneindia Kannada News

ಬೆಂಗಳೂರು, ಜೂನ್ 30: ನೋಟು ಬದಲು ಪ್ರಕರಣದ ಕುರಿತು ಸಿಬಿಐ ನಿಂದ ಚಾರ್ಜ್ ಶೀಟ್ ದಾಖಲಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿಕೆ ಸುರೇಶ್ ಅವರ ಆಪ್ತರಿಗೆ ಹಿನ್ನಡೆಯಾಗಿದೆ.

ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಆರು ಜನ ಆಪ್ತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು ಆರೋಪಿಗಳು ಬಂಧನದ ಭೀತಿಯಲ್ಲಿದ್ದಾರೆ.

ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ, ಕೋರ್ಟ್‌ಗೆ ವರದಿ ಸಲ್ಲಿಕೆ ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ, ಕೋರ್ಟ್‌ಗೆ ವರದಿ ಸಲ್ಲಿಕೆ

ಬಿ.ಪದ್ಮನಾಭಯ್ಯ,ಶಿವಕುಮಾರ್ ಮಾಜಿ ಪಿ.ಎ. ಪಿ.ಎ ಶೇಷಗಿರಿ, ಎಸ್ ಪದ್ಮರೇಖಾ, ತಿಮ್ಮಯ್ಯ , ಶಿವನಾಂದ್ ಹಾಗೂ ನಂಜಪ್ಪ ಅವರುಗಳ ನಿರೀಕ್ಷಣಾ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಹೆಚ್. ಪುಷ್ಪಂಜಾಲಿ ದೇವಿ ವಜಾಗೊಳಿಸಿದರು ಆರೋಪಿಗಳೆಲ್ಲರೂ ಡಿಕೆಶಿ ಕುಟುಂಬದ ಆಪ್ತರು ಎನ್ನಲಾಗಿದೆ.

DK Shivakumar and DK Sureshs followers may get arrested by CBI

ಇದೊಂದು ಗಂಭೀರ ಪ್ರಕರಣವಾಗಿದ್ದು ಆರೋಪಿಗಳಿಗೆ ಈ ಹಂತದಲ್ಲಿ ಜಾಮೀನು ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ತಳೆದಿದೆ. ಆರೋಪಿಗಳೆಲ್ಲರೂ 10 ಲಕ್ಷ ಮೌಲ್ಯದ 500,1000 ನೋಟುಗಳನ್ನು ರಾಮನಗರ ಕಾರ್ಪೊರೇಷನ್ ಬ್ಯಾಂಕಿನಲ್ಲಿ ಹೊಸ ನೋಟುಗಳನ್ನಾಗಿ ಬದಲಾಯಿಸಿಕೊಂಡಿದ್ದರು ಎಂಬ ಆರೋಪ ಹೊರಿಸಲಾಗಿದೆ.

ಡಿ.ಕೆ. ಶಿವಕುಮಾರ್ ಆಪ್ತರ ಮನೆ ಮೇಲೆ 5 ಕಡೆ ಸಿಬಿಐ ದಾಳಿ ಡಿ.ಕೆ. ಶಿವಕುಮಾರ್ ಆಪ್ತರ ಮನೆ ಮೇಲೆ 5 ಕಡೆ ಸಿಬಿಐ ದಾಳಿ

ಆರೋಪಿಗಳು ಬದಲಾಯಿಸಿದ ಹಣ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಸುರೇಶ್ ಅವರದ್ದೇ ಹಣ ಎನ್ನಲಾಗುತ್ತಿದ್ದು. ತನಿಖೆ ಮುಂದುವರೆದಂತೆ ಡಿಕೆಶಿ ಹಾಗೂ ಸುರೇಶ್ ಅವರ ಬಂಧನದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

English summary
Six people who were said to be DK Shivakumar and DK Suresh's followers may get arrested by CBI. Their anticipatory bail application rejected by high court today, they were charged in Note exchange case by CBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X