ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ.ಶಿವಕುಮಾರ್ ವಿರುದ್ಧದ ಐಟಿ ತನಿಖೆಗೆ ಇದ್ದ ತಡೆ ತೆರವು

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 17 : ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಚಿವರ ವಿರುದ್ಧ ತನಿಖೆ ನಡೆಸುತ್ತಿದೆ.

ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ ಗುರುವಾರ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ತೆರವು ಮಾಡಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ 8.60 ಕೋಟಿ ಲೆಕ್ಕ ಕೊಡದ ಹಣಕ್ಕೆ ಸಂಬಂಧಿಸಂತೆ ಸಚಿವರ ವಿರುದ್ಧ ತನಿಖೆ ಮಾಡುತ್ತಿದೆ.

ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಗ್ ರಿಲೀಫ್‌ ನೀಡಿದ ಹೈಕೋರ್ಟ್ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಗ್ ರಿಲೀಫ್‌ ನೀಡಿದ ಹೈಕೋರ್ಟ್

ಕೇಂದ್ರ ಸರ್ಕಾರದ ಪರವಾದ ಮಂಡನೆ ಮಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವದಗಿ ಅವರು, 'ಅರ್ಜಿದಾರರು ವಾಸ್ತವಾಂಶ ಮುಚ್ಚಿಟ್ಟು ತಡೆ ಪಡೆದಿದ್ದಾರೆ. ಆದ್ದರಿಂದ, ಪ್ರಕರಣದ ತನಿಖೆಗೆ ಇರುವ ತಡೆಯಾಜ್ಞೆ ತೆರವು ಮಾಡಬೇಕು' ಎಂದು ವಾದ ಮಂಡನೆ ಮಾಡಿದರು.

ಐಟಿ ದಾಳಿ ಪ್ರಕರಣ : ಡಿ.ಕೆ.ಶಿವಕುಮಾರ್‌ಗೆ ಜಾಮೀನುಐಟಿ ದಾಳಿ ಪ್ರಕರಣ : ಡಿ.ಕೆ.ಶಿವಕುಮಾರ್‌ಗೆ ಜಾಮೀನು

DK Shiva Kumar case : Karnataka High Court vacate stay order

ತಡೆ ಆದೇಶ ಸಚಿನ್ ನಾರಾಯಣ್‌ಗೆ ಮಾತ್ರ ಅನ್ವಯವಾಗುತ್ತದೆ. ಉಳಿದ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನಿಲ್ ಕುಮಾರ್ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ, ಸುಖದೇವ್ ವಿಹಾರ ನಿವಾಸಿ ರಾಜೇಂದ್ರ ಅವರಿಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಡಿ.ಕೆ.ಶಿವಕುಮಾರ್ ಮನೆಯಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಂತೆ ಐವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

English summary
Karnataka High Court vacate the stay order on income tax department probe against Water Resources & Medical Education Minister D.K.Shiva Kumar. IT probing the case money found in D.K.Shiva Kumar house in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X