ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ರವಿ ಕೇಸ್: ಮತ್ತೊಮ್ಮೆ ಅಟಾಪ್ಸಿ ಪರೀಕ್ಷೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ.18: ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣವನ್ನು ಸಿಬಿಐ ಮುಗಿಸಿದೆ ಎಂಬ ಸುದ್ದಿಯ ಬೆನ್ನಲ್ಲೇ ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ತನಿಖಾ ತಂಡ ಮುಂದಾಗಿದೆ. ಅಟಾಪ್ಸಿ ವರದಿ ಮೇಲೆ ಮತ್ತೊಮ್ಮೆ ತಜ್ಞರ ಅಭಿಪ್ರಾಯವನ್ನು ಪಡೆಯಲು ಸಿಬಿಐ ತಂಡ ನಿರ್ಧರಿಸಿದೆ.

ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷಾ ವರದಿ, ವಿಸೇರಾ ಸ್ಯಾಂಪಲ್ ಗಳನ್ನು ಕೇಂದ್ರ ವಿಧಿವಿಜ್ಞಾನ ಕೇಂದ್ರಕ್ಕೆ ಕಳಿಸಿ ಪುನಃ ಪರೀಕ್ಷಿಸಲಾಗುತ್ತದೆ ಎಂದು ಸಿಬಿಐ ಅಧಿಕಾರಿಗಳು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ. [ಡಿಕೆ ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]

ಸಿಐಡಿ ತನ್ನ ತನಿಖೆ ಸಮಯದಲ್ಲಿ ಪಡೆದುಕೊಂಡ ಅಟಾಪ್ಸಿ ವರದಿಯಲ್ಲಿ ನೇಣು ಬಿಗಿದುಕೊಂಡು ಉಸಿರುಗಟ್ಟಿದ್ದರಿಂದ ಡಿಕೆ ರವಿ ಸಾವನ್ನಪ್ಪಿದ್ದರು ಎಂದು ಬರೆಯಲಾಗಿದೆ. ಈ ಬಗ್ಗೆ ದೃಢ ನಿರ್ಧಾರಕ್ಕೆ ಬರಲು ಸಿಬಿಐಗೆ ಮತ್ತೊಮ್ಮೆ ಪರೀಕ್ಷಾ ವರದಿ ಅಗತ್ಯವಿದೆ.

DK Ravi case

ಸಿಬಿಐ ತನ್ನ ಮೊದಲ ಹಂತದ ತನಿಖೆಯಲ್ಲಿ ಬಹುತೇಕ ಎಲ್ಲಾ ಪ್ರಮುಖ ವ್ಯಕ್ತಿಗಳ ವಿಚಾರಣೆ ಮುಗಿಸಿದೆ. ಡಿಕೆ ರವಿ ಕುಟುಂಬದವರು ಹೊರತುಪಡಿಸಿದರೆ ಉಳಿದವರ ಪೈಕಿ ಯಾರೊಬ್ಬರೂ ಇದರಲ್ಲಿ ಬೇರೆಯವರ ಕೈವಾಡ ಇರುವುದರ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಿರಲಿಲ್ಲ. ಹೀಗಾಗಿ ಯಾವುದೇ ಒಂದು ನಿರ್ಧಾರಕ್ಕೆ ಬರಲು ಸಿಬಿಐಗೆ ಸಾಧ್ಯವಾಗಿರಲಿಲ್ಲ. [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

ಮೊದಲ ವರದಿಯಲ್ಲೇನಿದೆ?

ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ (asphyxiation) ನಿಂದ ಸಾವನ್ನಪ್ಪಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ವರದಿ ನೀಡಲಾಗಿದೆ. ಈ ಬಗ್ಗೆ ಸಿಬಿಐ ಕೂಡಾ ಆರಂಭದಲ್ಲಿ ಸಹಮತ ವ್ಯಕ್ತಪಡಿಸಿತ್ತು, ನಂತರ ವಿಕ್ಟೋರಿಯಾ ಆಸ್ಪತ್ರೆ ವೈದ್ಯರನ್ನು ವಿಚಾರಣೆಗೊಳಪಡಿಸಲಾಗಿತ್ತು. ಅದರೆ, ಈಗ ಮತ್ತೊಮ್ಮೆ ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ಕೋರಲಾಗಿದೆ.

ಸಾವಿನ ಉದ್ದೇಶ ಅಸ್ಪಷ್ಟ
ಇದು ಆತ್ಮಹತ್ಯೆ ಪ್ರಕರಣವಾದರೂ, ಸಾವಿನ ಉದ್ದೇಶ ಅಸ್ಪಷ್ಟವಾಗಿದೆ. ಇದು ಅಟಾಪ್ಸಿಯಿಂದಲೂ ತಿಳಿಯುತ್ತಿಲ್ಲ. ಆತ್ಮಹತ್ಯೆ ಗೆ ವೈಯಕ್ತಿಕ ವಿಚಾರ, ಮಾನಸಿಕ ಒತ್ತಡ ಎಂಬ ಕಾರಣಗಳು ದೃಢವಾಗಿ ಹೇಳಲು ಆಗುತ್ತಿಲ್ಲ. ಡಿಕೆ ರವಿ ಕುಟುಂಬಸ್ಥರ ಜೊತೆ ನಡೆಸಲಾದ ವಿಚಾರಣೆಯಲ್ಲೂ ಡಿಕೆ ರವಿ ಹಾಗೂ ಅವರ ಪತ್ನಿ ಜೊತೆ ಯಾವುದೇ ವೈಮನಸ್ಯ ಇರಲಿಲ್ಲ ಎಂದು ತಿಳಿದು ಬಂದಿದೆ. [ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]

ಮಹಿಳಾ ಅಧಿಕಾರಿ ಹಾಗೂ ಡಿಕೆ ರವಿ ಇಬ್ಬರು ಉತ್ತಮ ಸ್ನೇಹಿತರು ಎಂಬುದು ಸಿಬಿಐಗೆ ದೃಢಪಟ್ಟಿದೆ. ಹೀಗಾಗಿ ಯಾವುದೇ ಒಂದು 'ಲೀಡ್' ಇಲ್ಲದೆ ಸಿಬಿಐ ತಂಡ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಕೇಸ್ ಕ್ಲೋಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.(ಒನ್ ಇಂಡಿಯಾ ಸುದ್ದಿ)

English summary
The Central Bureau of Investigation (CBI) probing the DK Ravi case will seek a second opinion on the autopsy report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X