ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಬಂದ್ ಹಿನ್ನೆಲೆ; ಜಿಲ್ಲಾವಾರು ಅಪ್ಡೇಟ್ಸ್

By Lekhaka
|
Google Oneindia Kannada News

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಇಂದು ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ. ರೈತರು ಕರೆ ನೀಡಿರುವ ಭಾರತ ಬಂದ್‌ಗೆ ರಾಜ್ಯದಲ್ಲಿ ಕೂಡ ಬೆಂಬಲ ವ್ಯಕ್ತವಾಗಿದೆ. ಜಿಲ್ಲಾವಾರು ವರದಿ ಇಲ್ಲಿದೆ. ಮುಂದೆ ಓದಿ...

ಹುಬ್ಬಳ್ಳಿ ವರದಿ:

ರೈತರು ಕರೆ ನೀಡಿರುವ ಭಾರತ್ ಬಂದ್‌ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಟೈರ್ ಗೆ ಬೆಂಕಿ ಹೋರಾಟಗಾರರು ಹಚ್ಚಿ ಪ್ರತಿಭಟನೆ ಕುಳಿತಿದ್ದಾರೆ. ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಎಂದಿನಂತೆ ಸಾರಿಗೆ ಬಸ್ ಗಳು ಸಂಚಾರ ನಡೆಸುತ್ತಿವೆ.

District Wise Response To Bharat Bandh

ಬಲವಂತವಾಗಿ ಬಂದ್ ಮಾಡದಂತೆ ಪೊಲೀಸರು ತಾಕೀತು ಮಾಡಿದ್ದಾರೆ. ಹೋರಾಟಗಾರರು ಕೈ ಮುಗಿದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಹಾವೇರಿ ವರದಿ:

ರೈತ ವಿರೋಧಿ ನೀತಿಗಳ ವಿರುದ್ಧ ಭಾರತ ಬಂದ್ ಹಿನ್ನೆಲೆ ಇದ್ದರೂ, ಹಾವೇರಿಯಲ್ಲಿ ಎಂದಿನಂತೆ ಜನಜೀವನ ಸಾಗಿದೆ. ಸಾರಿಗೆ ಬಸ್, ಖಾಸಗಿ ವಾಹನಗಳು ಹಾಗೂ ಆಟೋ ರಿಕ್ಷಾಗಳು ಸಂಚರಿಸುತ್ತಿವೆ. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಚಿಕ್ಕಮಗಳೂರು ವರದಿ:

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಹಿನ್ನೆಲೆ ಕಾಫಿನಾಡಲ್ಲಿ ಎಂದಿನಂತೆ ಜನಜೀವನ ಸಾಗಿದೆ. ಭಾರತ್ ಬಂದ್‌ಗೆ ಚಿಕ್ಕಮಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಸಹಜ ಸ್ಥಿತಿಯಲ್ಲಿದೆ.

ಆದರೂ ಚಿಕ್ಕಮಗಳೂರಿನಲ್ಲಿ ಬೆಳಿಗ್ಗೆಯೇ ಪ್ರತಿಭಟನೆ ಮಾಡುತ್ತಿದ್ದು, ನಗರದ ಹನುಮಂತಪ್ಪ ವೃತ್ತದಲ್ಲಿ ಬಿಎಸ್ಪಿ, ಸಿಪಿಐಎಂಎಲ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 12 ಸಂಘಟನೆಗಳ ನೇತೃತ್ವದಲ್ಲಿ ಕರೆದಿದ್ದ ಬಂದ್‌ಗೆ 8 ಗಂಟೆಯ ನಂತರ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆಯಿದೆ.

ಭಾರತ ಬಂದ್‌ಗೆ 10 ಕಾರ್ಮಿಕ ಸಂಘಟನೆಗಳ ಬೆಂಬಲಭಾರತ ಬಂದ್‌ಗೆ 10 ಕಾರ್ಮಿಕ ಸಂಘಟನೆಗಳ ಬೆಂಬಲ

ಬೆಳಗಾವಿ ವರದಿ:

ಭಾರತ್ ಬಂದ್ ಹಿನ್ನೆಲೆ ಬೆಳಗಾವಿ ಬಸ್ ನಿಲ್ದಾಣ ಎದುರು ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಬಸ್‌ಗಳ ಸಂಚಾರ ಸ್ಥಗಿತಗೊಳಿಸುವಂತೆ ಒತ್ತಾಯ ಮಾಡಿ, ಬಸ್ ತಡೆದು ಬಸ್ ನಿಲ್ದಾಣದ ಎದುರು ಪ್ರತಿಭಟನೆ ಮಾಡಲಾಗುತ್ತಿದೆ. ವಿವಿಧ ಕಡೆ ತೆರಳಲು ಆಗಮಿಸಿದ ಪ್ರಯಾಣಿಕರ ಪರದಾಡುವಂತಾಗಿದೆ.

ಕಲಬುರಗಿ ವರದಿ:
ರೈತರಿಂದ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ರಸ್ತೆ ತಡೆ ನಡೆಸಲಾಯಿತು. ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳಿಂದ ರಸ್ತೆ ತಡೆ ನಡೆಸಿದರು. ರಸ್ತೆಗೆ ಅಡ್ಡಲಾಗಿ ಕುಳಿತ ಹೋರಾಟಗಾರರು, ರಸ್ತೆ ಸಂಚಾರ ಬಂದ್ ಮಾಡಿದರು.

ಎಂಎಸ್ ಕೆ‌ಮಿಲ್ ಮುಖ್ಯ ರಸ್ತೆ ತಡೆದು, ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಜೊತೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಕಲಬುರಗಿ ಜನತೆಯಲ್ಲಿ, ಆಟೋ ಚಾಲಕರಲ್ಲಿ ಬಂದ್ ಯಶಸ್ವಿ ಮಾಡುವಂತೆ ಹೋರಾಟಗಾರರು ಮನವಿ ಮಾಡಿದರು.

ಬೆಂಗಳೂರು ವರದಿ:
ಬೆಂಗಳೂರಿನ ಕೆ.ಆರ್ ಮಾರುಕಟ್ಟೆಗೆ ಭಾರತ್ ಬಂದ್ ಬಿಸಿ ತಟ್ಟಿಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ವ್ಯಾಪಾರಿಗಳು ಹೂವುಗಳ ಮಾರಾಟ ನಡೆಸುತ್ತಿದ್ದು, ಆದರೂ ಮಾರುಕಟ್ಟೆಯಲ್ಲಿ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಎಂದಿನಂತೆ ಜನಜೀವನ ಆರಂಭಗೊಂಡಿದ್ದು, ಎಂದಿನಂತೆ ಮೆಟ್ರೋ ಸೇವೆ ಆರಂಭಗೊಂಡಿದೆ. ದೈನಂದಿನ ಚಟುವಟಿಕೆಗಳಲ್ಲಿ ಸಾರ್ವಜನಿಕರು ತೊಡಗಿಕೊಂಡಿದ್ದಾರೆ. ಮೆಟ್ರೋದಲ್ಲಿ ಕಡಿಮೆ ಜನರು ಪ್ರಯಾಣ ಮಾಡುತ್ತಿದ್ದಾರೆ.

ಮೈಸೂರು ವರದಿ:
ಕೇಂದ್ರ ಸರ್ಕಾರದ ನೂತನ ಕೃಷಿ ನೀತಿ ಕಾಯ್ದೆ ವಿರೋಧಿಸಿ ಭಾರತ್ ಬಂದ್‌ ಹಿನ್ನೆಲೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ಸಾಧ್ಯತೆ ಇದೆ. ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು ವಿವಿಧ ಕಾರ್ಮಿಕ ಒಕ್ಕೂಟ, ರಸ್ತೆ ಬದಿ ತರಕಾರಿ ವ್ಯಾಪಾರಿಗಳ ಸಂಘ ಸೇರಿ ಹಲವು ಪ್ರಮುಖ ಸಂಘಟನೆಗಳಿಂದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಹೋಟೆಲ್ ಮಾಲೀಕರು, ವರ್ತಕರು, ಟ್ಯಾಕ್ಸಿ, ಕ್ಯಾಬ್, ಆಟೋ ಚಾಲಕರಿಂದ ಬಂದ್‌ ಮಾಡದೇ‌ ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದಾರೆ. 8 ಗಂಟೆಗೆ ಗನ್ ಹೌಸ್ ವೃತ್ತದಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಯಲಿದೆ.

ಚಿಕ್ಕಮಗಳೂರು ವರದಿ:
ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತ್ ಬಂದ್ ಹಿನ್ನೆಲೆ, ಚಿಕ್ಕಮಗಳೂರು ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಯಿತು. ಅಂಗಡಿ ಬಾಗಿಲು ತೆರೆದಿದ್ದ ವರ್ತಕರ ಜೊತೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು.

ಅಂಗಡಿ ಬಾಗಿಲು ಹಾಕುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದು, ನಗರದ ಎಂ.ಜಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ವೇಳೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐಎಂಎಲ್, ಕನ್ನಡಪರ ಸಂಘಟನೆ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ 16 ಸಂಘಟನೆಗಳು ಭಾಗಿ.

ಮೈಸೂರು ವರದಿ:
ಭಾರತ ಬಂದ್ ಎಫೆಕ್ಟ್ ಹಿನ್ನೆಲೆ, ಬಸ್ ನಿಲ್ದಾಣದಲ್ಲಿ ನಿತ್ರಾಣಗೊಂಡು ಮಹಿಳೆ ಕುಸಿದು ಬಿದ್ದಿದ್ದಾಳೆ. ಮೈಸೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಬನ್ನೂರಿಗೆ ತೆರಳಲು ಮಗಳ ಜೊತೆ ಬಂದಿದ್ದ ಮಹಿಳೆಯು ಕುಸಿದು ಬಿದ್ದಿದ್ದು, ನೆರವಿಗೆ ಪೊಲೀಸರು ಮತ್ತು ಸಾರಿಗೆ ಸಿಬ್ಬಂದಿ ಬಂದಿದ್ದಾರೆ. ಆಟೋದಲ್ಲಿ ಕೆ‌.ಆರ್ ಆಸ್ಪತ್ರೆಗೆ ಅಸ್ವಸ್ಥ ಮಹಿಳೆಯನ್ನು ರವಾನಿಸಲಾಯಿತು. ಎಎಸ್ಐ ದೀಪಕ್ ಪ್ರಸಾದ್ ಆಟೋಗೆ ದುಡ್ಡು ಕೊಟ್ಟು ಮಾನವೀತೆ ಮೆರೆದರು.

ಮಂಡ್ಯ ವರದಿ:
ಭಾರತ್ ಬಂದ್ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಹೆದ್ದಾರಿ ತಡೆದು ರೈತರಿಂದ ಮಾನವ ಸರಪಳಿ ರಚಿಸಲಾಯಿತು. ಮಂಡ್ಯದ ಸಂಜಯ ವೃತ್ತದ ಬಳಿ ರೈತರ ಪ್ರತಿಭಟನೆ ನಡೆಯುತ್ತಿದೆ. ತ ಸಂಘ ಜಿಲ್ಲಾಧ್ಯಕ್ಷ ಕೆಂಪೇಗೌಡ ನೇತೃತ್ವದಲ್ಲಿ ಪ್ರತಿಭಟನೆ.

ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ರೈತರ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳ ವಾಪಸ್ ಪಡೆಯುವಂತೆ ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

Recommended Video

ಜಸ್ಟ್ ಕ್ಯಾಮರಾ ನೋಡಿ ತಬ್ಬಿಬ್ಬಾಗಿ ಘೋಷಣೆ ಕೂಗಿದ ನಾಯಕರು | Oneindia Kannada

ರಾಮನಗರ ವರದಿ:
ಕೇಂದ್ರ ಸರ್ಕಾರದ ರೈತ ವಿರೋಧಿ ನಡೆಯನ್ನು ಖಂಡಿಸಿ, ರೈತರು ಕರೆ ನೀಡಿರುವ "ಭಾರತ್ ಬಂದ್' ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳು ಮಳೆಯಲ್ಲೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದವು.
ರಾಮನಗರದ ಐಜೂರು ವೃತ್ತದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳು, ಮಳೆ ಬಂದರೂ ಲೆಕ್ಕಿಸದೇ ರಸ್ತೆಯಲ್ಲಿ ಕುಳಿತು "ಭಾರತ್ ಬಂದ್' ನ್ನು ಬೆಂಬಲಿಸಿದರು.

ಶಿವಮೊಗ್ಗ ವರದಿ:
ಶಿವಮೊಗ್ಗದಲ್ಲಿ ಭಾರತ್ ಬಂದ್'ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ಜನ ಜೀವನ ನಡೆದಿದೆ. ಕೃಷಿ ಕಾಯ್ದೆ, ಎಪಿಎಂಸಿ ತಿದ್ದುಪಡಿ, ಭೂಸುಧಾರಣಾ ಕಾಯ್ದೆಯನ್ನು ವಿರೋಧಿಸಿ ರೈತ ಸಂಘ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ ಗೆ ಶಿವಮೊಗ್ಗ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

English summary
Farmers have called on Bharat Bandh today to oppose the three new agricultural laws enacted by the central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X