• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈ 30: ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ಸುದ್ದಿಗಳು

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಕರ್ನಾಟಕ, ಜುಲೈ 30: ಕರ್ನಾಟಕದಲ್ಲಿ ಇಂದು ವಿವಿಧ ಜಿಲ್ಲೆಗಳಲ್ಲಿ ಹಲವು ಘಟನೆಗಳು ನಡೆದಿದ್ದು, ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ.

ಕೊರೊನಾ ಅನ್‌ಲಾಕ್ ಬಳಿಕ ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವಾ ಪೂಜೆಗಳು ಆರಂಭಗೊಂಡಿದೆ. ಸರ್ಕಾರದ ಮಾರ್ಗದರ್ಶನದ ಪ್ರಕಾರ ಭಕ್ತಾದಿಗಳಿಗೆ ಸೇವೆ ಒಪ್ಪಿಸಲು ಅವಕಾಶ ನೀಡಲಾಗಿದ್ದು, ಮೊದಲ ದಿನವೇ 14 ಸರ್ಪ ಸಂಸ್ಕಾರ ಮತ್ತು 200ಕ್ಕೂ ಅಧಿಕ ಆಶ್ಲೇಷಾ ಬಲಿ ಸೇವೆಗಳು ನಡೆದಿವೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ ಮತ್ತು ಪಂಚಾಮೃತ ಮಹಾಭಿಷೇಕಗಳೂ ಆರಂಭಗೊಂಡಿದೆ. ಎಲ್ಲಾ ಭಕ್ತರಿಗೂ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಬಳಕೆಯ ನಿಯಮವನ್ನು ಕಟ್ಟುನಿಟ್ಟಾಗಿ ಮಾಡಲಾಗಿದೆ.

ಸೇವಾಧಿ ಪೂಜೆಗಳು ಮಾಡಬಯಸುವವರು ಮಾತ್ರ ಆರ್‌ಟಿ- ಪಿಸಿಆರ್ ನೆಗೆಟಿವ್ ವರದಿ ಅಥವಾ ವಾಕ್ಸಿನೇಷನ್ ಕಡ್ಡಾಯವಾಗಿ ಹೊಂದಿರಲೇಬೆಂಕೆಂಬ ನಿಯಮ ಮಾಡಲಾಗಿದೆ. ಅಲ್ಲದೇ ಪ್ರತಿ ಸೇವೆಗೆ ರಶೀದಿಯ ಇಬ್ಬರು ಮಾತ್ರ ಭಾಗವಹಿಸಬೇಕೆಂದು ನಿಯಮವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡಲಾಗಿದೆ‌. ಸರ್ಪ ಸಂಸ್ಕಾರ ಸೇವೆಗೂ ಲಸಿಕೆ ಅಥವಾ ಆರ್‌ಟಿ- ಪಿಸಿಆರ್ ವರದಿ ಕಡ್ಡಾಯ ಮಾಡಲಾಗಿದೆ.

ಜನಸಂದಣಿ ಕಡಿಮೆ ಮಾಡಲು ಸರ್ಪ ಸಂಸ್ಕಾರವನ್ನು ಎರಡು ಬ್ಯಾಚ್‌ಗಳ ರೀತಿ ವಿಂಗಡನೆ ಮಾಡಲಾಗಿದೆ‌. ಇನ್ನು ಆಶ್ಲೇಷಾ ಬಲಿ ಪೂಜೆಯಲ್ಲೂ ನಾಲ್ಕು ಬ್ಯಾಚ್‌ಗಳನ್ನು ಮಾಡಿ ಭಕ್ತರ ಸಂದಣಿ ಹೆಚ್ಚಾಗದಂತೆ ಮುಂಜಾಗೃತೆ ವಹಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನ್ನದಾನ ಸೇವೆಯೂ ಆರಂಭಗೊಂಡಿದ್ದು, ಬಫೆ ಮಾದರಿಯಲ್ಲಿ ಹಾಳೆ ತಟ್ಟೆಯಲ್ಲಿ ಅನ್ನಪ್ರಸಾದವನ್ನು ನೀಡಲಾಗಿದೆ.

Karnataka District News Roundup (30th July 2021) : Todays District News on politics, climate, infrastructure

ನೂತನ ಸಿಎಂ ಬೊಮ್ಮಾಯಿ ಭೇಟಿಯಾದ ಶಾಸಕಿ ಪೂರ್ಣಿಮಾ

ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಪತಿ ಡಿ.ಟಿ ಶ್ರೀನಿವಾಸ್, ಪುತ್ರ ಬ್ರಿಜೇಶ್ ಯಾದವ್ ತೆರಳಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ.

ಇನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಪೂರ್ಣಿಮಾ ಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಸಚಿವರ ಪಟ್ಟಿಯನ್ನು ಹಿಡಿದು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಹೈಕಮಾಂಡ್ ಭೇಟಿಯಾಗಿದ್ದು, ಆ ಅಂತಿಮ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳಿವೆ ಎಂಬುದು ಕುತೂಹಲಕಾರಿಯಾಗಿದೆ.

ರಾಮನಗರದಲ್ಲಿ ಗಾಂಜಾ ಬೆಳೆದ ವ್ಯಕ್ತಿ ಬಂಧನ

ಮನೆಯ ಹಿಂದೆ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಬಂಧನ, 2 ಕೆಜಿ 800 ಗ್ರಾಂ ಹಸಿ ಗಾಂಜಾ ವಶ :

ರಾಮನಗರ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಮನೆಯ ಹಿಂದೆ ಗಾಂಜಾ ಬೆಳೆಸಿದ್ದ ವ್ಯಕ್ತಿಯನ್ನು ಬಂಧಿಸಿ,‌ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿರುವ ಘಟನೆ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.

ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಲಕ್ಷ್ಮೀಪುರ ಗ್ರಾಮದ ಅನಿಲ್ ಕುಮಾರ (33) ಎಂಬಾತನು ತನ್ನ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ 2 ಕೆಜಿ 800 ಗ್ರಾಂ ಹಸಿ ಗಾಂಜಾ ಗಿಡಗಳನ್ನು ಬೆಳಸಿ, ಪೊಲೀಸರ ಅತಿಥಿಯಾಗಿದ್ದಾನೆ.

ಕನಕಪುರದಲ್ಲಿ ದಂಡ ವಸೂಲಿ

ಕೊರೊನಾ ಮೂರನೇ ಅಲೆಗೆ ಎಚ್ಚೆತ್ತ ಕನಕಪುರ ನಗರಸಭೆ ಅಧಿಕಾರಿಗಳು, ಮಾಸ್ಕ್ ಹಾಕದೆ ರಸ್ತೆಗಿಳಿದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ದಂಡ ಪ್ರಯೋಗ ಮಾಡಿ ಎಚ್ಚರಿಕೆ ನೀಡಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ನಗರದ ನಗರಸಭೆಯ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಂಬೆಳಗ್ಗೆ ನಗರಸಭೆ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಓಡಾಡುತ್ತಿದ್ದ ವಾಹನ ಸವಾರರು ಮತ್ತು ಪದಾಚಾರಿಗಳನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡಿದ್ದಾರೆ.

ಮೈಸೂರಿನಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿದ ಎಸ್‌ಐ

ಪೊಲೀಸ್ ಇಲಾಖೆಯಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ದರ್ಪ ತೋರಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಬಾಲಕನನ್ನು ಗೇಟ್‌ಗೆ ಕಟ್ಟಿ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸಪ್ಪನ ಈ ಹೀನಕೃತ್ಯ ಇದೀಗ ಮಕ್ಕಳ ಹಕ್ಕುಗಳ ಆಯೋಗದ ಮೆಟ್ಟಿಲೇರಿದೆ.

ಮೈಸೂರಿನ ಗಾಯಿತ್ರಿಪುರಂನ 12 ವರ್ಷದ ಬಾಲಕನೊಬ್ಬ ಮನೆಯಲ್ಲಿ ನಡೆಯುವ ಪೂಜೆಗೆಂದು ಬೇವಿನ ಸೊಪ್ಪನ್ನು ತರಲು ಬಂದಿದ್ದಾನೆ. ಈ ವೇಳೆ ಎಸ್‌ಐ ವಾಸವಿದ್ದ ಮನೆಯ ಮುಂದೆ ಇದ್ದ ಮರದಲ್ಲಿ ಬೇವಿನ ಸೊಪ್ಪನ್ನು ಕಿತ್ತಿದ್ದಾನೆ. ಕೂಡಲೆ ಹೊರ ಬಂದ ಎಸ್‌ಐ, ಆತನನ್ನು ಮನೆಯ ಮುಂದಿನ ಗೇಟ್‌ಗೆ ಕಟ್ಟಿಹಾಕಿದ್ದಾರೆ. ಇದರಿಂದಾಗಿ ಬಾಲಕ ಅಳಲಾರಂಭಿಸಿದ್ದಾನೆ.

ಮಂತ್ರಿಮಂಡಲ ಇಲ್ಲದಿರುವುದು ದುರದೃಷ್ಟಕರ
"ಮಂತ್ರಿಮಂಡಲ ಇಲ್ಲದಿರುವುದು ನಮ್ಮ ರಾಜ್ಯದ ದುರದೃಷ್ಟಕರ. ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಒಬ್ಬರೇ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಈಗಲೂ ಕೂಡ ಬೊಮ್ಮಾಯಿ ಒಬ್ಬರೇ ಇದ್ದಾರೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಸಂಭವಿಸಿರುವ ಆನೆ ದಾಳಿ ಘಟನೆಗಳು, ಹಾನಿ, ನಿಯಂತ್ರಣ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.

ಚಿಕ್ಕಮಗಳೂರಿನಲ್ಲಿ ಲವ್‌ದೋಖಾ
ಕನ್ನಡದ ಹೆಸರಾಂತ ಧಾರಾವಾಹಿಗಳಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದ ಸೀರಿಯಲ್ ನಟನೊಬ್ಬ ರಿಯಲ್ ಲೈಫಲ್ಲೂ ಕೂಡ ಯುವತಿಯೊಂದಿಗಿನ ಪ್ರೇಮ ಕಹಾನಿಯಲ್ಲಿ ಕೈಗೊಂದು ಮಗು ನೀಡಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ.

ಮರವೂರು ಸೇತುವೆ ಸಂಚಾರಕ್ಕೆ ಮುಕ್ತ
ಒಂದೂವರೆ ತಿಂಗಳ ಹಿಂದೆ ಕುಸಿತಗೊಂಡ ಮರವೂರು ಸೇತುವೆ ದುರಸ್ತಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ.

   ಟೀಮ್ ಇಂಡಿಯಾಗೆ ಫುಲ್ ಟೈಮ್ ಕೋಚ್ ಆಗಲ್ವಂತೆ ದ್ರಾವಿಡ್ | Oneindia Kannada

   ಶುಕ್ರವಾರ ಮಧ್ಯಾಹ್ನದ ಬಳಿಕ ಈ ಸೇತುವೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೂನ್ ೧೫ರಂದು ಈ ಸೇತುವೆಯ ಪಿಲ್ಲರ್ ಕುಸಿದ ಪರಿಣಾಮ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು. ಆ ಬಳಿಕ ಪಿಲ್ಲರ್ ಸರಿಪಡಿಸುವ ಕಾರ್ಯ ಆರಂಭಗೊಂಡಿತ್ತು. ಕುಸಿದ ಪಿಲ್ಲರ್‌ನ್ನು ಯಥಾಸ್ಥಿತಿಗೆ ತಂದು ದುರಸ್ತಿ ಕೆಲಸ ಪೂರ್ಣಗೊಂಡ ಬಳಿಕ ಗುರುವಾರ ಸೇತುವೆ ಮೇಲೆ ಹೆವಿವೈಟ್ ಸ್ಟ್ರೈಸ್ ಟೆಸ್ಟ್ ಮಾಡಲಾಗಿತ್ತು. ಈ ಪರೀಕ್ಷೆ ಯಶಸ್ವಿಯಾಗಿದ್ದರಿಂದ ಶುಕ್ರವಾರ ಮಧ್ಯಾಹ್ನದಿಂದಲೇ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

   English summary
   Karnataka district news Roundup (30th July 2021) - Stay up-to-date with politics, climate, infrastructure, & education in Bangalore, Mysore, Shivamogga and other Karnataka districts. Capture every aspect of Karnataka district news only on Kannada Oneindia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X