ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ

By Manjunatha
|
Google Oneindia Kannada News

ಬೆಂಗಳೂರು, ಜುಲೈ 31: ಜೆಡಿಎಸ್-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದೆ.

26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಕೆಲವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಕೆಲವು ಕಾಂಗ್ರೆಸ್ ಸಚಿವರಿಗೆ ಕಳೆದ ಬಾರಿ ಇದ್ದ ಜಿಲ್ಲೆಗಳ ಉಸ್ತುವಾರಿಯೇ ಈ ಬಾರಿಯೂ ಸಿಕ್ಕಿದೆ.

ಎಚ್ಡಿಕೆ ಸಚಿವ ಸಂಪುಟ : ಜಿಲ್ಲಾ ಉಸ್ತುವಾರಿ ಗಳಿಸಲು ಲಾಬಿಯೋ ಲಾಬಿಎಚ್ಡಿಕೆ ಸಚಿವ ಸಂಪುಟ : ಜಿಲ್ಲಾ ಉಸ್ತುವಾರಿ ಗಳಿಸಲು ಲಾಬಿಯೋ ಲಾಬಿ

ಪರಮೇಶ್ವರ್‌ ಅವರಿಗೆ ಬೆಂಗಳೂರು ಉಸ್ತುವಾರಿ ವಹಿಸುವ ಬಗ್ಗೆ ಮುಂಚೆಯೇ ವಿರೋಧ ಕೇಳಿಬಂದಿತ್ತು ಆದರೂ ನಗರ ಉಸ್ತುವಾರಿ ಅವರ ಕೈಗೆ ಸೇರಿದೆ. ಜೊತೆಗೆ ತುಮಕೂರು ಸಹ ಅವರ ಉಸ್ತುವಾರಿಯಲ್ಲೇ ಇರಲಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಯಾರ ಕಣ್ಣಿಗೆ ಸುಣ್ಣ, ಯಾರಿಗೆ ಬೆಣ್ಣೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಯಾರ ಕಣ್ಣಿಗೆ ಸುಣ್ಣ, ಯಾರಿಗೆ ಬೆಣ್ಣೆ

District incharge ministers appointed by government

ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ...

ಕ್ರಮ ಸಂಖ್ಯೆ ಸಚಿವರ ಹೆಸರು ಜಿಲ್ಲೆಯ ಹೆಸರು
1 ಜಿ ಪರಮೇಶ್ವರ ಬೆಂಗಳೂರು ನಗರ ಮತ್ತು ತುಮಕೂರು
2 ಆರ್‌ವಿ ದೇಶಪಾಂಡೆ ಉತ್ತರ ಕನ್ನಡ ಮತ್ತು ಧಾರವಾಡ
3 ಡಿಕೆ ಶಿವಕುಮಾರ್ ರಾಮನಗರ ಮತ್ತು ಬಳ್ಳಾರಿ
4 ಕೆ.ಜೆ.ಜಾರ್ಜ್‌ ಚಿಕ್ಕಮಗಳೂರು
5 ರಮೇಶ್ ಜಾರಕಿಹೊಳಿ ಬೆಳಗಾವಿ
6 ಶಿವಾನಂದ ಪಾಟೀಲ್ ಬಾಗಲಕೋಟೆ
7 ಪ್ರಿಯಾಂಕ್ ಖರ್ಗೆ ಕಲಬುರಗಿ
8 ರಾಜಶೇಖರ.ಜಿ.ಪಾಟೀಲ್ ಯಾದಗಿರಿ
9 ವೆಂಕಟರಮಣಪ್ಪ ಚಿತ್ರದುರ್ಗ
10 ಶಿವಶಂಕರ ರೆಡ್ಡಿ ಚಿಕ್ಕಬಳ್ಳಾಪುರ
11 ಕೃಷ್ಣಬೈರೇಗೌಡ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ
12 ಯು.ಟಿ.ಖಾದರ್‌ ದಕ್ಷಿಣ ಕನ್ನಡ
13 ಸಿ.ಪುಟ್ಟರಂಗ ಶೆಟ್ಟಿ ಚಾಮರಾಜನಗರ
14 ಜಮೀರ್ ಅಹ್ಮದ್ ಹಾವೇರಿ
15 ಜಯಮಾಲಾ ಉಡುಪಿ
16 ಆರ್‌ ಶಂಕರ್ ಕೊಪ್ಪಳ
17 ಎನ್.ಮಹೇಶ್ ಗದಗ
18 ವೆಂಕಟರಾವ್ ನಾಡಗೌಡ ರಾಯಚೂರು
19 ಎಸ್.ಆರ್.ಶ್ರೀನಿವಾಸ್ ದಾವಣಗೆರೆ
20 ಸಿ.ಎಸ್.ಪುಟ್ಟರಾಜು ಮಂಡ್ಯ
21 ಸಾ.ರಾ.ಮಹೇಶ್ ಕೊಡಗು
22 ಬಂಡೆಪ್ಪ ಕಾಶಂಪೂರ್ ಬೀದರ್‌
23 ಎಚ್‌.ಡಿ.ರೇವಣ್ಣ ಹಾಸನ
24 ಡಿ.ಸಿ.ತಮ್ಮಣ್ಣ ಶಿವಮೊಗ್ಗ
25 ಎಂ.ಸಿ.ಮನಗೋಳಿ ವಿಜಯಪುರ
26 ಜಿ.ಟಿ.ದೇವೇಗೌಡ ಮೈಸೂರು
English summary
26 ministers has been appointed as district incharge ministers by coalition government today. Some ministers got two districts to in charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X