ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ಸರ್ಕಾರವು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು, ಹಲವು ಅಚ್ಚರಿಯ ಅಂಶಗಳು ಪಟ್ಟಿಯಲ್ಲಿವೆ.

ಶ್ರೀರಾಮುಲು ಅವರಿಗೆ ಅವರ ನೆಚ್ಚಿನ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕೈತಪ್ಪಿದೆ. ಬೆಂಗಳೂರು ಜಿಲ್ಲಾ ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಕೆಲವು ಸಚಿವರಿಗೆ ಹೆಚ್ಚುವರಿ ಜಿಲ್ಲೆಗಳನ್ನು ನೀಡಲಾಗಿದೆ.

ರೇಣುಕಾಚಾರ್ಯ ಕೇಳಿದ್ದು ಸಚಿವ ಸ್ಥಾನ ಆದರೆ ಸಿಕ್ಕಿದ್ದು ಬೇರೆರೇಣುಕಾಚಾರ್ಯ ಕೇಳಿದ್ದು ಸಚಿವ ಸ್ಥಾನ ಆದರೆ ಸಿಕ್ಕಿದ್ದು ಬೇರೆ

ಬೆಂಗಳೂರು ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದ ಆರ್‌.ಅಶೋಕ್ ಅವರಿಗೆ ನಿರಾಸೆಯಾಗಿದೆ. ಅಶ್ವತ್ಥನಾರಾಯಣ್ ಅವರಿಗೂ ನಿರಾಸೆ ಆಗಿದೆ. ಕೆಲವು ಸಚಿವರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿದೆ.

District In Charge Ministers Appointed

ಶ್ರೀರಾಮುಲು ಅವರ ಪ್ರಕಾರ, ಜಿಲ್ಲಾ ಉಸ್ತುವಾರಿ ನೇಮಕ ಪಟ್ಟಿಯನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದೆ ಆದರೆ ಅದಕ್ಕೆ ಇನ್ನೂ ಅಂತಿಮ ಸಹಿ ಬಿದ್ದಿಲ್ಲ. ಆದರೆ ಇದೇ ಪಟ್ಟಿ ಬಹುತೇಕ ಅಂತಿಮ ಎನ್ನಲಾಗಿದೆ.

ಸಂಪುಟ, ಖಾತೆ ಹಂಚಿಕೆ ಬಳಿಕ ಯಡಿಯೂರಪ್ಪ ಮುಂದೆ ಮತ್ತೊಂದು ಸವಾಲುಸಂಪುಟ, ಖಾತೆ ಹಂಚಿಕೆ ಬಳಿಕ ಯಡಿಯೂರಪ್ಪ ಮುಂದೆ ಮತ್ತೊಂದು ಸವಾಲು

ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ

ಯಡಿಯೂರಪ್ಪ- ಬೆಂಗಳೂರು ನಗರ
ಕೋಟ ಶ್ರೀನಿವಾಸ್- ಮಂಗಳೂರು
ಜೆ.ಸಿ.ಮಾಧುಸ್ವಾಮಿ-ತುಮಕೂರು, ಹಾಸನ(ಹೆಚ್ಚುವರಿ)
ಸಿ.ಸಿ.ಪಾಟೀಲ್-ಗದಗ, ವಿಜಯಪುರ
ಎಚ್.ನಾಗೇಶ್-ಕೋಲಾರ
ಪ್ರಭು ಚೌಹಾಣ್-ಯಾದಗಿರಿ, ಬೀದರ್(ಹೆಚ್ಚುವರಿ)
ಶಶಿಕಲಾ ಜೊಲ್ಲೆ-ಉತ್ತರ ಕನ್ನಡ
ಗೋವಿಂದ ಕಾರಜೋಳ-ಬಾಗಲಕೋಟೆ, ಕಲಬುರಗಿ(ಹೆಚ್ಚುವರಿ)
ರಾಮುಲು- ರಾಯಚೂರು, ಚಿತ್ರದುರ್ಗ (ಹೆಚ್ಚುವರಿ)
ಅಶ್ವತ್ಥನಾರಾಯಣ-ರಾಮನಗರ, ಚಿಕ್ಕಬಳ್ಳಾಪುರ (ಹೆಚ್ಚುವರಿ)
ಲಕ್ಷ್ಮಣ ಸವದಿ- ಬಳ್ಳಾರಿ, ಕೊಪ್ಪಳ (ಹೆಚ್ಚುವರಿ)

ಬಸವರಾಜ ಬೊಮ್ಮಾಯಿ- ಉಡುಪಿ, ಹಾವೇರಿ (ಹೆಚ್ಚುವರಿ)

ಆರ್.ಅಶೋಕ್- ಬೆಂಗಳೂರು ಗ್ರಾಮಾಂತರ, ಮಂಡ್ಯ (ಹೆಚ್ಚುವರಿ)
ಜಗದೀಶ್ ಶೆಟ್ಟರ್- ಬೆಳಗಾವಿ , ಧಾರವಾಡ-ಹುಬ್ಬಳ್ಳಿ (ಹೆಚ್ಚುವರಿ)
ಸೋಮಣ್ಣ-ಮೈಸೂರು, ಮಡಿಕೇರಿ (ಹೆಚ್ಚುವರಿ)
ಸಿ.ಟಿ.ರವಿ-ಚಿಕ್ಕಮಗಳೂರು
ಸುರೇಶ್ ಕುಮಾರ್-ಚಾಮರಾಜನಗರ
ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ, ದಾವಣೆಗರೆ (ಹೆಚ್ಚುವರಿ)

English summary
Government appointed district in charge ministers today. Yediyurappa keep Bengaluru city in charge post for him self only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X