ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮಂತೆ ರಾಸಲೀಲೆ ಮಾಡೋಕೆ, ತಾಜ್ ವೆಸ್ಟ್ ಎಂಡ್ ನಲ್ಲಿ ರೂಂ ಮಾಡಿಲ್ಲ: ಎಚ್ಡಿಕೆ ಹೊಸ ಬಾಂಬ್

|
Google Oneindia Kannada News

Recommended Video

H D Kumaraswamy give Clarification To H Vishwanath allegations | Oneindia Kannada

ಉಪಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನಾಯಕರ ವಿರುದ್ದ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಾಕ್ ಪ್ರಹಾರದ ಓಘ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ, ಹಾಲೀ ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ವಿರುದ್ದ ಅಕ್ಷರಶಃ ಏಕವಚನದಲ್ಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ, ಎಚ್. ವಿಶ್ವನಾಥ್ ತಿರುಗೇಟನ್ನೂ ನೀಡುತ್ತಿದ್ದಾರೆ.

"ನಾನು ಖಾಸಗಿ ಹೊಟೇಲ್ ನಲ್ಲಿರುವುದು ಹೌದು, ಆದರೆ, ನಾನು ಅಲ್ಲಿರುವುದು ನಿಮ್ಮ ಹಾಗೇ ರಾಸಲೀಲೆ ನಡೆಸಲು ಅಲ್ಲ" ಎಂದು ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ನಾಯಕನ ರಾಸಲೀಲೆ ಬಹಿರಂಗ: ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆಬಿಜೆಪಿ ನಾಯಕನ ರಾಸಲೀಲೆ ಬಹಿರಂಗ: ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ

"ಕುಮಾರಸ್ವಾಮಿಯವರನ್ನು ಭೇಟಿಯಾಗಬೇಕಾದರೆ, ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಹೋಗಬೇಕು. ಅವರು, ಇವತ್ತು ಬನ್ನಿ, ನಾಳೆ ಬನ್ನಿ ಎಂದು ಕಾಯಿಸುತ್ತಿದ್ದರು" ಎನ್ನುವ ಎಚ್. ವಿಶ್ವನಾಥ್ ಹೇಳಿಕೆಗೆ, ಎಚ್ಡಿಕೆ ನೀಡಿದ ಪ್ರತಿಕ್ರಿಯೆ ಇದಾಗಿತ್ತು.

ಅರವಿಂದ ಲಿಂಬಾವಳಿ ಮಾಡಿರುವ ಘನಂದಾರಿ ಕೆಲಸ

ಅರವಿಂದ ಲಿಂಬಾವಳಿ ಮಾಡಿರುವ ಘನಂದಾರಿ ಕೆಲಸ

"ಅರವಿಂದ ಲಿಂಬಾವಳಿ ಮಾಡಿರುವ ಘನಂದಾರಿ ಕೆಲಸದ ಕ್ಯಾಸೆಟ್ ಅನ್ನು ಜಪ್ತಿ ಮಾಡಿದರು, ಹೈಕೋರ್ಟ್ ನಲ್ಲಿ ಸ್ಟೇ ತಂದರು. ನಿನ್ನೆ, ಬಿಜೆಪಿ ಪಕ್ಷಕ್ಕೆ ಸೇರಿದ್ದ ಶಾಸಕನೊಬ್ಬನ ರಾಸಲೀಲೆ ಸುದ್ದಿ ಬಹಿರಂಗವಾಗಿದೆ. ಯುವಕನೊಬ್ಬನನ್ನು ಬಂಧಿಸಲಾಗಿದೆ. ನಿಮ್ಮಂತವರಿಂದ ಜೀವನದಲ್ಲಿ ಯಾವರೀತಿ ಕಲಿಯಬೇಕು ಎನ್ನುವ ಪಾಠ ಕಲಿಯಬೇಕಾಗಿಲ್ಲ" - ಎಚ್.ಡಿ.ಕುಮಾರಸ್ವಾಮಿ.

ನಾನು ಸರಕಾರದ ಯಾವುದೇ ಮನೆಯನ್ನು ತೆಗೆದುಕೊಂಡಿರಲಿಲ್ಲ

ನಾನು ಸರಕಾರದ ಯಾವುದೇ ಮನೆಯನ್ನು ತೆಗೆದುಕೊಂಡಿರಲಿಲ್ಲ

"ಅಲ್ಲೊಬ್ಬ ವಿಶ್ವನಾಥ್, ನಾನು ಕುಮಾರಸ್ವಾಮಿಯವರನ್ನು ನೋಡಬೇಕಾದರೆ ಹೊಟೇಲ್ ಗೆ ಹೋಗಬೇಕಾಗುತ್ತಿತ್ತು ಎಂದು ಹೇಳಿದ್ದಾನೆ. ನಾನು ಸರಕಾರದ ಯಾವುದೇ ಮನೆಯನ್ನು ತೆಗೆದುಕೊಂಡಿರಲಿಲ್ಲ. ಜೆ.ಪಿ.ನಗರದಲ್ಲಿರುವ ಮನೆ, ವಿಧಾನಸೌಧದ ಕಚೇರಿಗೆ ದೂರವಾಗಿರುವುದರಿಂದ, ಮಧ್ಯಾಹ್ನದ ಹೊತ್ತಿಗೆ ಊಟ, ವಿಶ್ರಾಂತಿಗೆ ಬರಲು ತೊಂದರೆಯಾಗುತ್ತದೆ ಎಂದು ಹೊಟೇಲ್ ಮಾಡಿದ್ದೆ" ಎಂದು ಕುಮಾರಸ್ವಾಮಿ, ಸ್ಪಷ್ಟನೆಯನ್ನು ನೀಡಿದ್ದಾರೆ.

ಪಕ್ಷಾಂತರಕ್ಕೆ ಅಡಿಪಾಯ ಹಾಕಿದ್ದೇ ಕುಮಾರಸ್ವಾಮಿ: ಕೆಂಗಲ್‌ ಶ್ರೀಪಾದಪಕ್ಷಾಂತರಕ್ಕೆ ಅಡಿಪಾಯ ಹಾಕಿದ್ದೇ ಕುಮಾರಸ್ವಾಮಿ: ಕೆಂಗಲ್‌ ಶ್ರೀಪಾದ

ಇವರ ರೀತಿ ರಾಸಲೀಲೆ ಆಡಲು ಅಲ್ಲ

ಇವರ ರೀತಿ ರಾಸಲೀಲೆ ಆಡಲು ಅಲ್ಲ

"ನಾನು ಹೊಟೇಲ್ ಅನ್ನು ವಿಶ್ರಾಂತಿಗಾಗಿ ಉಪಯೋಗ ಮಾಡಿಕೊಂಡಿದ್ದೇನೆಯೇ ಹೊರತು, ಇವರ ರೀತಿ ರಾಸಲೀಲೆ ಆಡಲು ಅಲ್ಲ. ಹೊಟೇಲ್ ನಲ್ಲಿ ಆ ಕೆಲಸವನ್ನು ಮಾಡಲಿಲ್ಲ. ನಾಚಿಕೆಯಾಗಬೇಕು, ಇವರಿಗೆಲ್ಲಾ. ಇದೇ ವಿಶ್ವನಾಥ್, ಎಷ್ಟು ಬಾರಿ ಮನೆಗೆ ಬಂದಿದ್ದ. ನನ್ನ ಜೊತೆ ತಿಂಡಿ ತಿಂದಿದ್ದಾನೆ. ಅವನು ನನ್ನ ಮನೆಗೆ ಬಂದಿದ್ದು, ಹುಣಸೂರು ಕ್ಷೇತ್ರದ ಸಮಸ್ಯೆಗಾಗಿ ಅಲ್ಲ" - ಎಚ್.ಡಿ.ಕುಮಾರಸ್ವಾಮಿ.

ಕುಮಾರಸ್ವಾಮಿ, ಎಚ್. ವಿಶ್ವನಾಥ್ ಗೆ ವಾರ್ನಿಂಗ್ ನೀಡಿದ್ದಾರೆ

ಕುಮಾರಸ್ವಾಮಿ, ಎಚ್. ವಿಶ್ವನಾಥ್ ಗೆ ವಾರ್ನಿಂಗ್ ನೀಡಿದ್ದಾರೆ

"ರಾಜ್ಯ ರಸ್ತೆಸಾರಿಗೆ ಸಂಸ್ಥೆಯಲ್ಲಿನ scrap ವಸ್ತುಗಳನ್ನು ಮಾರಾಟ ಮಾಡಲು, ನನ್ನ ಕಡೆ ಒಬ್ಬ ಏಜೆಂಟ್ ಇದ್ದಾನೆ. ಅವನಿಗೆ ಟೆಂಡರ್ ಕೊಟ್ಟರೆ, ನಾನು ಸ್ವಲ್ಪ ಕಾಸು ಮಾಡಿಕೊಳ್ಳುತ್ತೇನೆ. ಫೋನ್ ಮಾಡಿ KSRTC ಎಂಡಿ ಹತ್ತಿರ ಮಾತನಾಡಿ ಎಂದು ಹೇಳಲು, ವಿಶ್ವನಾಥ್ ಬಂದಿದ್ದು. ಚಂಗ್ಲಿ ವ್ಯವಹಾರಗಳನ್ನೆಲ್ಲಾ ನನ್ನ ಬಳಿ ಇಟ್ಟುಕೊಳ್ಳಬೇಡ" ಎಂದು ಕುಮಾರಸ್ವಾಮಿ, ಎಚ್. ವಿಶ್ವನಾಥ್ ಗೆ ವಾರ್ನಿಂಗ್ ನೀಡಿದ್ದಾರೆ.

ಸಾಮಾನ್ಯರಿಗೆ ಸಿಗಬೇಕಾದ ಮುಖ್ಯಮಂತ್ರಿ ಫೈವ್ ಸ್ಟಾರ್ ಹೊಟೇಲ್ ನಲ್ಲಿರುವುದು ಸರೀನಾ

ಸಾಮಾನ್ಯರಿಗೆ ಸಿಗಬೇಕಾದ ಮುಖ್ಯಮಂತ್ರಿ ಫೈವ್ ಸ್ಟಾರ್ ಹೊಟೇಲ್ ನಲ್ಲಿರುವುದು ಸರೀನಾ

"ಸಾಮಾನ್ಯರಿಗೆ ಸಿಗಬೇಕಾದ ಮುಖ್ಯಮಂತ್ರಿ ಕುಮಾರಸ್ವಾಮಿ ಫೈವ್ ಸ್ಟಾರ್ ಹೊಟೇಲ್ ನಲ್ಲಿರುವುದು ಸರೀನಾ, ಶಾಸಕನ ಮನೆಗೆ scrap ಮಾರುವವನೂ ಬರುತ್ತಾನೆ, ಚಿಂದಿ ಹಾಯುವವನೂ ಬರುತ್ತಾನೆ. ಮಾಜಿ ಸಿಎಂ ಆಗಿ ಇದನ್ನೆಲ್ಲಾ ಮಾಧ್ಯಮವರ ಮುಂದೆ ಮಾತನಾಡುತ್ತಾರಾ" ಎಂದು ವಿಶ್ವನಾಥ್, ಎಚ್ಡಿಕೆ ಮಾತಿಗೆ ತಿರುಗೇಟು ನೀಡಿದ್ದಾರೆ.

English summary
Distance Is Far From My Residence To Vidhana Soudha Office, That's Why I Am In Hotel: HDK Clarification To H Vishwanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X