ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ರದ್ದು ಮಾಡಬೇಕೆಂದು ಜೆಡಿಎಸ್ ಶಾಸಕ

|
Google Oneindia Kannada News

ಬೆಂಗಳೂರು, ಜೂನ್ 22 : ವಿಧಾನಪರಿಷತ್ ಬೇಕೊ, ಬೇಡವೋ? ಎಂಬ ಚರ್ಚೆ ಹೊಸದೇನಲ್ಲ. ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ಪರಿಷತ್‌ನಿಂದ ಜನರಿಗೇನು ಲಾಭ? ಎಂಬ ಚರ್ಚೆ ಹಲವು ವರ್ಷಗಳಿಂದಲೂ ಇದೆ. ಸದ್ಯ, ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಇದೇ ಪ್ರಶ್ನೆಯನ್ನು ಮತ್ತೆ ಎತ್ತಿದ್ದಾರೆ.

ಸೋಮವಾರ ಎಂ.ಟಿ.ಕೃಷ್ಣಪ್ಪ ಅವರು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರ ಬರೆದಿದ್ದು, ವಿಧಾನಪರಿಷತ್ ವಿಸರ್ಜಿಸಲು ಖಾಸಗಿ ಮಸೂದೆ ಮಂಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಜೂನ್ 29ರಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. [ಹೈಟೆಕ್ ಆಗಿದೆ ವಿಧಾನ ಪರಿಷತ್ ಸಭಾಂಗಣ]

legislative council

ಶಾಸಕರ ಪತ್ರದಲ್ಲೇನಿದೆ? : ಬಹುತೇಕ ವಿಧಾನಪರಿಷತ್ ಸದಸ್ಯರು ಜನರೊಂದಿಗೆ ಬೆರೆಯುವುದಿಲ್ಲ. ಬಹುತೇಕ ರಾಜ್ಯಗಳಲ್ಲಿ ಇಲ್ಲದ ಪರಿಷತ್ ನಮಗೂ ಬೇಡ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಕಾಗೋಡು ತಿಮ್ಮಪ್ಪ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. [ಪರಿಷತ್ ಸದಸ್ಯರ ನೇಮಕ ಹೈಕೋರ್ಟ್ ನೋಟಿಸ್]

ವಿಧಾನಪರಿಷತ್‍ ನಾಮನಿರ್ದೇಶನದಲ್ಲಿ ಜ್ಞಾನಿಗಳಿಗೆ ಅವಕಾಶ ಸಿಗುತ್ತಿಲ್ಲ. ರೈತ ಪ್ರತಿನಿಧಿಯಾಗಲಿ, ವಿಜ್ಞಾನಿಗಳಾಗಲಿ, ನ್ಯಾಯವಾದಿಗಳೂ ಪರಿಷತ್‍ ಪ್ರವೇಶಿಸುತ್ತಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಸೋತವರನ್ನು ವಿಧಾನ ಪರಿಷತ್‍ಗೆ ಕಳುಹಿಸಲಾಗುತ್ತಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ವಿಧಾನಪರಿಷತ್ ಸದಸ್ಯರು ಜನರ ಜೊತೆ ಬೆರೆಯುತ್ತಿಲ್ಲ. ವಿಧಾನಪರಿಷತ್‌ಗಾಗಿ ವಾರ್ಷಿಕ 34.40 ಕೋಟಿ ರೂ. ವೆಚ್ಚವಾಗುತ್ತಿದೆ. ಪರಿಷತ್ ಸದಸ್ಯರಿಗೆ ವಾರ್ಷಿಕ ತಲಾ 3 ಕೋಟಿ ಅನುದಾನವನ್ನು ಕೊಡಲಾಗುತ್ತಿದೆ. ಇದರಿಂದ ರಾಜ್ಯದ ಜನರಿಗೆ ಹೊರೆಯಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

English summary
Turuvekere JDS MLA M.T.Krishnappa writes an open letter to Karnataka assembly speaker Kagodu Thimmappa and seeks permission to table private bill in assembly to Dissolve legislative council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X