ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಲಿಗೆ ಅವರೆಲ್ಲಾ 'ಅತೃಪ್ತ'ರಾಗಿದ್ದು ಉಪಚುನಾವಣೆ ದಿನಾಂಕ ಅನೌನ್ಸ್ ಆದಮೇಲೆ

|
Google Oneindia Kannada News

Recommended Video

ಯಾಕಾದ್ರು ಬಿಜೆಪಿ ಸಪೋರ್ಟ್ ಮಾಡಿದ್ವೊ ಅನ್ನೋ ಹಾಗಾಗಿದೆ ಇವರ ಕಥೆ | Oneindia Kannada

ಭಾರತೀಯ ಜನತಾಪಕ್ಷದ ಮುಖಂಡರ ರಂಗುರಂಗಿನ ಮಾತಿನ ಮೋಡಿಗೆ ಬಿದ್ದು, ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ ಎಲ್ಲಾ ಅತೃಪ್ತ ಶಾಸಕರ ರಾಜಕೀಯ ಜೀವನ ಈಗ ತೂಗೊಯ್ಯಾಲೆಯಲ್ಲಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಇವರ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇವರ್ಯಾರೂ, ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ಹೊರಡಿಸಿದೆ.

ಅನರ್ಹ ಶಾಸಕರ ಬಗ್ಗೆ ಯಡಿಯೂರಪ್ಪಗೆ ಅಮಿತ್ ಶಾ ಹೇಳಿದ್ದೇನು?ಅನರ್ಹ ಶಾಸಕರ ಬಗ್ಗೆ ಯಡಿಯೂರಪ್ಪಗೆ ಅಮಿತ್ ಶಾ ಹೇಳಿದ್ದೇನು?

ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಎಚ್. ವಿಶ್ವನಾಥ್ ಅವರಂತಹ ಘಟಾನುಗಟಿಗಳಿಗೇ ಮುಂದೆ ಈ ರೀತಿಯ ಪರಿಸ್ಥಿತಿ ಎದುರಾಗಬಹುದು ಎನ್ನುವ ಕನಿಷ್ಠ ಲೆಕ್ಕಾಚಾರವಿಲ್ಲದ್ದು ರಾಜಕೀಯ ದುರಂತವಲ್ಲದೇ ಮತ್ತಿನ್ನೇನು?

ಯಡಿಯೂರಪ್ಪ ದೆಹಲಿ ಭೇಟಿ ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!ಯಡಿಯೂರಪ್ಪ ದೆಹಲಿ ಭೇಟಿ ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!

'ನಮಗೊಂದು ತೊಟ್ಟು ವಿಷ ಕೊಟ್ಟುಬಿಡಿ" ಎಂದು ಅತೃಪ್ತರೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ, ಕಾನೂನು ಪಂಡಿತರ ಬಳಿ, ಕೂಲಂಕುಷವಾಗಿ ಚರ್ಚಿಸಿ ನಿರ್ಧಾರಕ್ಕೆ ಬಂದಿದ್ದರೆ, ಬಹುಷಃ ಇವರುಗಳು ಇಂದು ವಿಷದ ಮಾತನಾಡುವ ಪ್ರಮೇಯ ಬರುತ್ತಿರಲಿಲ್ಲ.

ಡಿ.ಕೆ.ಶಿವಕುಮಾರ್ ಅವರ ಪರಿಶ್ರಮವನ್ನು ಒಮ್ಮೆ ರಿವೈಂಡ್ ಮಾಡಿಕೊಳ್ಳಲಿ

ಡಿ.ಕೆ.ಶಿವಕುಮಾರ್ ಅವರ ಪರಿಶ್ರಮವನ್ನು ಒಮ್ಮೆ ರಿವೈಂಡ್ ಮಾಡಿಕೊಳ್ಳಲಿ

ಇವರನ್ನೆಲ್ಲಾ ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು, ಈಗ, ಜೈಲುಪಾಲಾಗಿರುವ ಡಿ.ಕೆ.ಶಿವಕುಮಾರ್ ಅವರ ಪರಿಶ್ರಮವನ್ನು ಒಮ್ಮೆ ರಿವೈಂಡ್ ಮಾಡಿಕೊಳ್ಳಲಿ. ಇಲ್ಲಿ, ಇವರೆಲ್ಲಾ ಪಕ್ಷ ತೊರೆದದ್ದು ತಪ್ಪು ಎಂದು ಹೇಳುತ್ತಿಲ್ಲ. ಆದರೆ, ಮುಂದಾಗಬಹುದಾದ ಪರಿಸ್ಥಿತಿಯ ಬಗ್ಗೆ ಚಿಂತಿಸಿದೆ, ಈಗ, ವಿಷಕೊಡಿ ಎಂದರೆ ಇದೇನು ಮಕ್ಕಳಾಟವೇ?

ಕಾನೂನು ಹೋರಾಟದಲ್ಲಿ, ಬಿಜೆಪಿ ತಮಗೆ ಸಹಾಯಮಾಡಬಹುದು ಎನ್ನುವ ಭರವಸೆ

ಕಾನೂನು ಹೋರಾಟದಲ್ಲಿ, ಬಿಜೆಪಿ ತಮಗೆ ಸಹಾಯಮಾಡಬಹುದು ಎನ್ನುವ ಭರವಸೆ

ಸ್ಪೀಕರ್ ತಮ್ಮನ್ನೆಲ್ಲಾ ಅನರ್ಹಗೊಳಿಸಬಹುದು ಎನ್ನುವ ಲೆಕ್ಕಾಚಾರ ಇವರಿಗೆಲ್ಲಾ ಇರದೇ ಇರುತ್ತಾ? ಆದರೆ, ಕಾನೂನು ಹೋರಾಟದಲ್ಲಿ, ಬಿಜೆಪಿ ತಮಗೆ ಸಹಾಯಮಾಡಬಹುದು ಎನ್ನುವ ಭರವಸೆ ಇವರಿಗೆ ಸಿಕ್ಕಿರಬಹುದು. ಆದರೆ, ಸರ್ವೋಚ್ಚ ನ್ಯಾಯಾಲಯದಲ್ಲಿ, ಅರ್ಜಿ ವಿಚಾರಣೆ ಸಂಬಂಧ, ಬಿಜೆಪಿ ವರಿಷ್ಠರು ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುವ ವಾಸ್ತವತೆ. ಇದರ ಅರಿವು ಇವರಿಗೆಲ್ಲಾ ಇರಲಿಲ್ಲವೇ?

ಮಹಾರಾಷ್ಟ್ರದ ಚುನಾವಣೆಯ ಜೊತೆಗೆ, ರಾಜ್ಯದ ಉಪಚುನಾವಣೆ

ಮಹಾರಾಷ್ಟ್ರದ ಚುನಾವಣೆಯ ಜೊತೆಗೆ, ರಾಜ್ಯದ ಉಪಚುನಾವಣೆ

ಮಹಾರಾಷ್ಟ್ರದ ಚುನಾವಣೆಯ ಜೊತೆಗೆ, ರಾಜ್ಯದ ಉಪಚುನಾವಣೆಯೂ ನಡೆಯಬಹುದು ಎನ್ನುವ ಸಣ್ಣ ಸುಳಿವು ಇವರಿಗೆ ಸಿಕ್ಕಿರಬಹುದು. ಆವಾಗದಿಂದಾದರೂ, ಇವರುಗಳೆಲ್ಲಾ, ಬಿಜೆಪಿಯ ಮೇಲೆ ಒತ್ತಡವನ್ನು ಹೇರುವ ಕೆಲಸವನ್ನು ಮಾಡಿದ್ದಾರೋ, ಇಲ್ಲವೋ ಎನ್ನುವುದಿಲ್ಲಿ ಪ್ರಶ್ನೆ.

ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್

ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್

"ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತರಳಿದ್ದೇನೆ ಎಂದಿರುವುದು ಒಂದು 'ರಾಜಕೀಯ ನಾಟಕ'. ಅಮಿತ್ ಶಾ ರ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸಲಷ್ಟೇ BSY ದೆಹಲಿಗೆ ಹೋಗಿದ್ದಾರೆ" ಇದು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್.

ಹದಿನೈದು ಅತೃಪ್ತ ಮಾಜಿ ಶಾಸಕರದ್ದು 'ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿ'

ಹದಿನೈದು ಅತೃಪ್ತ ಮಾಜಿ ಶಾಸಕರದ್ದು 'ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿ'

ಉಪಚುನಾವಣೆಗೆ ದಿನಾಂಕ ಘೋಷಣೆಗೆ ಮುನ್ನ ಒಂದು ಪರಿಸ್ಥಿತಿ, ಈಗ ಇನ್ನೊಂದು ಪರಿಸ್ಥಿತಿ. ಈಗ ಎಲ್ಲಾ ಹದಿನೈದು ಅತೃಪ್ತ ಮಾಜಿ ಶಾಸಕರದ್ದು 'ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿ'. ಹಾಗಾಗಿ, ಅವರ ಮಾತೃ ಪಕ್ಷವನ್ನು ಬಿಟ್ಟಾಗ, ಅವರೆಲ್ಲ ಅತೃಪ್ತರಾಗಿರಲಿಲ್ಲ, ಚುನಾವಣಾ ಆಯೋಗದ ದಿನಾಂಕ ಘೋಷಣೆಯಾದ ನಂತರ ಇವರೆಲ್ಲಾ ಅತೃಪ್ತರಾದರು ಎಂದರೆ ಅದು ಸರಿಯಾದ ವ್ಯಾಖ್ಯಾನವಾಗಬಹುದು.

English summary
Dissident Karnataka MLAs Political Situation In Dilemma Since By-Election Date Announced. Elections to the 15 of the 17 constituencies will be held on October 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X