ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿಶ್ವಾಸ ನಿರ್ಣಯ ಹೈಕೋರ್ಟ್‌ ಮಹತ್ವದ ಆದೇಶ

|
Google Oneindia Kannada News

Recommended Video

ಗ್ರಾಮ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಅವಿಶ್ವಾಸ ನಿರ್ಣಯ ಹೈಕೋರ್ಟ್‌ ಮಹತ್ವದ ಆದೇಶ | Oneindia Kannada

ಬೆಂಗಳೂರು, ಅಕ್ಟೋಬರ್ 13: ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿಶ್ವಾಸ ನಿರ್ಣಯದ ಕುರಿತು ಮಹತ್ವದ ಆದೇಶವನ್ನು ಹೈಕೋರ್ಟ್‌ ನಿನ್ನೆ (ಅಕ್ಟೋಬರ್‌ 12) ನೀಡಿದೆ.

ಲೋಕಸಭೆ ಉಪಚುನಾವಣೆ ರದ್ದು ಗೊಳಿಸಲು ಹೈಕೋರ್ಟ್‌ಗೆ ಅರ್ಜಿಲೋಕಸಭೆ ಉಪಚುನಾವಣೆ ರದ್ದು ಗೊಳಿಸಲು ಹೈಕೋರ್ಟ್‌ಗೆ ಅರ್ಜಿ

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೇಲೆ ಭ್ರಷ್ಟಾಚಾರದ ನಿರ್ದಿಷ್ಟ ಆರೋಪ ಇದ್ದಲ್ಲಿ ಕಾಲ ಮಿತಿ ಇಲ್ಲದೆ ಯಾವಾಗ ಬೇಕಾದರೂ ಅವಿಶ್ವಾಸ ನಿರ್ಣಯ ಮಾಡಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಸ್ಥಾನದಿಂದ ಕೆಳಗೆ ಇಳಿಸಬಹುದು ಎಂದು ಹೈಕೋರ್ಟ್‌ ಹೇಳಿದೆ.

ಗೋಕರ್ಣ ದೇವಾಲಯ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಗೋಕರ್ಣ ದೇವಾಲಯ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ

30 ತಿಂಗಳ ವರೆಗೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಿರಲಿಲ್ಲ ಇದು ಈ ಮುಂಚೆ ಇದ್ದ ನಿಯಮವಾಗಿತ್ತು. ಈಗ ಈ ನಿಯಮವನ್ನು ಹೈಕೋರ್ಟ್‌ ಬದಲಾಯಿಸಿದೆ.

Dissatisfaction against Grama Panchayat president can be made at any time

ಆದರೆ ಹೈಕೋರ್ಟ್‌ ತೀರ್ಪಿನಲ್ಲಿ ಪ್ರಮುಖ ಅಂಶವೊಂದು ಇದ್ದು. ಅಕಸ್ಮಾತ್‌, ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಮೇಲೆ ಯಾವುದೇ ಭ್ರಷ್ಟಾಚಾರ ಅಥವಾ ಮತ್ತಿತರೆ ಆರೋಪಗಳು ಇಲ್ಲವೆಂದಾದಲ್ಲಿ 30 ತಿಂಗಳ ಕಾಲ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಿಲ್ಲ ಎಂದು ಸಹ ಹೈಕೋರ್ಟ್‌ ಹೇಳಿದೆ.

ಭಾರತದಲ್ಲಿ ಎಲ್ಲರೂ ಶಾಕಾಹಾರಿಗಳಾಗಬೇಕೇ? : ಸುಪ್ರೀಂ ಪ್ರಶ್ನೆ ಭಾರತದಲ್ಲಿ ಎಲ್ಲರೂ ಶಾಕಾಹಾರಿಗಳಾಗಬೇಕೇ? : ಸುಪ್ರೀಂ ಪ್ರಶ್ನೆ

ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಅನುದಾನ ದುರ್ಬಳಕೆ, ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ಇಂತಹಾ ನಿರ್ದಿಷ್ಟ ಭ್ರಷ್ಟಾಚಾರದ ಆರೋಪಗಳು ಇದ್ದರಷ್ಟೆ ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಸದಸ್ಯರು ಅವಿಶ್ವಾಸ ನಿರ್ಣಯ ಸಲ್ಲಿಸಬಹುದು.

ಮೂರು ಲೋಕಸಭಾ ಉಪ ಚುನಾವಣೆ ತಡೆ ಇಲ್ಲ : ಹೈಕೋರ್ಟ್‌ ಮೂರು ಲೋಕಸಭಾ ಉಪ ಚುನಾವಣೆ ತಡೆ ಇಲ್ಲ : ಹೈಕೋರ್ಟ್‌

60ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಆಯಾ ಪಂಚಾಯಿತಿಯ ಉಪವಿಭಾಗಾಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದೆ. ಆದೇಶದ ಬಗ್ಗೆ ಅಸಾಮಾಧಾನ ಹೊಂದಿರುವ ಅರ್ಜಿದಾರರು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

English summary
High Court made order that Dissatisfaction can be made against Grama Panchayat president and vice president at any time if any allegations were upon them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X