ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆ ಮರು ಹಂಚಿಕೆ: ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಅಸಮಾಧಾನ ಸ್ಪೋಟ!

|
Google Oneindia Kannada News

ಬೆಂಗಳೂರು, ಜ. 21: ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಅಸಮಾಧಾನ ಸ್ಪೋಟವಾಗಿದೆ. ತಮ್ಮಲ್ಲಿನ ಖಾತೆಗಳನ್ನು ಹಿಂದಕ್ಕೆ ಪಡೆದುಕೊಂಡಿರುವುದರಿಂದ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿನ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಾದ ಮೈತ್ರಿ ಸರ್ಕಾರವನ್ನು ವಿಧಾನಸಭೆ ಕಲಾಪದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ, ಯಡಿಯೂರಪ್ಪ ಅವರಿಗೆ ಮಹತ್ವದ ಸಲಹೆಗಳನ್ನು ಕೊಡುತ್ತಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಂದ ಕಾನೂನು ಮತ್ತು ಸಂಸದೀಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಯಡಿಯೂರಪ್ಪ ಹಿಂದಕ್ಕೆ ಪಡೆದಿದ್ದಾರೆ.

ಖಾತೆ ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ: ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ! ಖಾತೆ ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ: ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ!

ಜೊತೆಗೆ ಖಾತೆ ಮರುಹಂಚಿಕೆ ಕುರಿತು ವಲಸೆ ಸಚಿವರೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಇದೇ ವಿಚಾರಕ್ಕೆ ಸಬಂಧಿಸಿದಂತೆ ಇವತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಅವರ ನಿವಾಸದಲ್ಲಿ ಸಭೆ ನಡೆಯಲಿದೆ ಎಂಬ ಮಾಹಿತಿಯಿದೆ. ಸಭೆಯಲ್ಲಿ ಎಲ್ಲ 15 ವಲಸೆ ಶಾಸಕರು ಭಾಗವಹಿಸಲಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆರ್‌ಆರ್‌ ನಗರ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಆಗಲೇ ಸ್ಪೋಟವಾಗಬೇಕಿದ್ದ ವಲಸಿಗರ ಆಕ್ರೋಶ ಇದೀಗ ಸ್ಪೋಟವಾಗುವ ಎಲ್ಲ ಲಕ್ಷಣಗಳು ಕಂಡುಬಂದಿವೆ.

ಸಿಎಂ ಮೇಲೆ ತೀವ್ರ ಅಸಮಾಧಾನ

ಸಿಎಂ ಮೇಲೆ ತೀವ್ರ ಅಸಮಾಧಾನ

ಸಂಪುಟ ವಿಸ್ತರಣೆಯಾಗಿ 9 ದಿನಗಳಾದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇಷ್ಟು ದಿನ ಒಂದಕ್ಕಿಂತ ಹೆಚ್ಚು ಇಲಾಖೆ ವಹಿಸಿಕೊಂಡಿದ್ದ ಸಚಿವರಿಗೆ ಸಹಜವಾಗಿಯೆ ಅಸಮಾಧಾನ ವ್ಯಕ್ತವಾಗಿದೆ. ಖಾತೆ ಹಿಂದಕ್ಕೆ ಪಡೆದಿದ್ದಕ್ಕೆ ಅವರಿಗೆ ಅಸಮಾಧಾನವಾಗಿಲ್ಲ, ತಮ್ಮ ನೆಚ್ಚಿನ ಖಾತೆ ಬಿಟ್ಟು ಬೇಯದ್ದನ್ನು ಹಂಚಿಕೆ ಮಾಡಿದ್ದಕ್ಕೆ ಬಹಳಷ್ಟು ಸಚಿವರಿಗೆ ಅಸಮಾಧಾನವಾಗಿದೆ. ಅದರಲ್ಲಿಯೂ ಯಡಿಯೂರಪ್ಪ ಅವರ ಆಪ್ತ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.

ಸಂಪುಟ ಸಭೆಯಿಂದ ದೂರ ಉಳಿಯಲು ನಿರ್ಧಾರ?

ಸಂಪುಟ ಸಭೆಯಿಂದ ದೂರ ಉಳಿಯಲು ನಿರ್ಧಾರ?

ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿರುವ ಸಚಿವ ಜೆ.ಸಿ.‌ ಮಾಧುಸ್ವಾಮಿ ಅವರು ಇಂದು ಸಂಜೆ (ಜ.21) ನಡೆಯಲಿರುವ ಸಚಿವ ಸಂಪುಟ ಸಭೆಯಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರಂತೆ. ಹೀಗಾಗಿ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಅವರು ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ. ಸದ್ಯ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಅವರಿದ್ದಾರೆ.


ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಗಿಂತಲೂ ಸಣ್ಣ ನೀರಾವರಿ ಖಾತೆ ವಾಪಾಸ್ ಪಡೆದಿರುವುದಕ್ಕೆ ಮಾಧುಸ್ವಾಮಿ ಅವರು ಹೆಚ್ಚು ಬೇಸರಗೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.

ವಲಸಿಗರ ಸಭೆ

ವಲಸಿಗರ ಸಭೆ

ಇನ್ನು ಖಾತೆ ಮರುಹಂಚಿಕೆ ಕುರಿತು ಸಚಿವ ಡಾ. ಸುಧಾಕರ್ ಅವರು ತೀವ್ರ ಅಸಮಾಧಾನ ವ್ಯಕ್ತಡಿಸಿದ್ದಾರೆ ಎನ್ನಲಾಗಿದೆ. ತಮ್ಮಲ್ಲಿನ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಹಿಂದಕ್ಕೆ ಪಡೆದಿರುವುದು ಡಾ. ಸುಧಾಕರ್ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿಯೇ ಇಂದು ಡಾ. ಸುಧಾಕರ್ ಅವರ ನಿವಾಸದಲ್ಲಿ ವಲಸೆ ಸಚಿವರು ಸಭೆ ಸೇರಲಿದ್ದಾರೆ ಎನ್ನಲಾಗಿದೆ. ಹಾಗಾದಲ್ಲಿ ಅದು ಬಿಜೆಪಿಯಲ್ಲಿ ಮತ್ತೊಂದು ಹಂತದ ಬೆಳವಣಿಗೆಗೆ ಮುನ್ನುಡಿಯಾಗಲಿದೆ. ತಮ್ಮ ಸಹೋದ್ಯೋಗಿಯಾಗಿದ್ದ ಎಚ್. ನಾಗೇಶ್ ಅವರ ಸಚಿವ ಸ್ಥಾನವನ್ನು ಹಿಂದಕ್ಕೆ ಪಡೆದಿರುವುದು ಎಲ್ಲ 16 ಶಾಸಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

Recommended Video

Vijayapura: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ padayatraಗೆ ಚಾಲನೆ | Oneindia Kannada
ಸುಧಾಕರ್ ಭೇಟಿ ಮಾಡಿದ ಸಚಿವರು

ಸುಧಾಕರ್ ಭೇಟಿ ಮಾಡಿದ ಸಚಿವರು

ಸಿಎಂ ಯಡಿಯೂರಪ್ಪ ಅವರು ಖಾತೆ ಮರುಹಂಚಿಕೆ ಮಾಡುತ್ತಿದ್ದಂತೆ ಸಚಿವರಲ್ಲಿ ಅಸಮಾಧಾನ ಉಂಟಾಗಿದೆ. ಕೇವಲ ಜೆಸಿ ಮಾಧುಸ್ವಾಮಿ, ಡಾ. ಸುಧಾಕರ್ ಅವರು ಮಾತ್ರವಲ್ಲ, ಸಚಿವ ಕೆ. ಗೋಪಾಲಯ್ಯ, ಎಂಟಿಬಿ ನಾಗರಾಜ್ ಅವರೂ ತೀವ್ರವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಇದೀಗ ಸಚಿವ ಡಾ. ಸುಧಾಕರ್ ಅವರನ್ನು ಆಹಾರ ಸಚಿವ ಕೆ. ಗೋಪಾಲಯ್ಯ ಹಾಗೂ ಸಚಿವ ಎಂಟಿಬಿ ನಾಗರಾಜ್ ಅವರು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.


ಸಂಪುಟ ವಿಸ್ತರಣೆ ಅಸಮಾಧಾನವನ್ನು ನಿಭಾಯಿಸಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಖಾತೆ ಹಂಚಿಕೆ ಅಸಮಾಧಾನವನ್ನು ಸುಲಭವಾಗಿ ತಣಿಸುವುದು ಅಸಾಧ್ಯ ಎನ್ನಲಾಗುತ್ತಿದೆ.

English summary
Karnataka CM B S Yediyurappa Allocated Portfolios to Newly Inducted Ministers into His Cabinet. Dissatisfaction erupts after portfolio allocation. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X