ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹ ಶಾಸಕರ ಬಗ್ಗೆ ಹೊಸ ಬಾಂಬ್ ಸಿಡಿಸಿದ ಜಗದೀಶ್ ಶೆಟ್ಟರ್

|
Google Oneindia Kannada News

Recommended Video

ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿದವರ ಬಗ್ಗೆ ಜಗದೀಶ್ ಶೆಟ್ಟರ್ ಏನು ಹೇಳಿದ್ದಾರೆ ಗೊತ್ತಾ?

ಬೆಂಗಳೂರು, ಆಗಸ್ಟ್ 05: ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿ ಈಗ ಅನರ್ಹರಾಗಿರುವ ಶಾಸಕರ ಬಗ್ಗೆ ಜಗದೀಶ್ ಶೆಟ್ಟರ್ ಅವರು ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಅನರ್ಹಗೊಂಡಿರುವ ಶಾಸಕರು ಸಾಲು-ಸಾಲಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೋಗುತ್ತಿರುವ ಸಂದರ್ಭದಲ್ಲಿಯೇ, 'ಅನರ್ಹ ಶಾಸಕರಿಗೂ ನಮಗೂ ಸಂಬಂಧವಿಲ್ಲ' ಎಂದಿರುವ ಬಿಜೆಪಿ ಪ್ರಮುಖ ನಾಯಕ ಜಗದೀಶ್ ಶೆಟ್ಟರ್, ಹೊಸ ಅನುಮಾನವೊಂದನ್ನು ಬಿತ್ತಿದ್ದಾರೆ.

ಅನರ್ಹ ಶಾಸಕರ ಕ್ಷೇತ್ರಗಳಿಗೆ ವೀಕ್ಷಕರ ನೇಮಿಸಿದ ಕಾಂಗ್ರೆಸ್‌ಅನರ್ಹ ಶಾಸಕರ ಕ್ಷೇತ್ರಗಳಿಗೆ ವೀಕ್ಷಕರ ನೇಮಿಸಿದ ಕಾಂಗ್ರೆಸ್‌

ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು, 'ಅನರ್ಹ ಶಾಸಕರಿಗೂ ಬಿಜೆಪಿಗೂ ಸಂಬಂಧವಿಲ್ಲ, ಅವರು ಹೊಸ ಪಕ್ಷ ಕಟ್ಟಬಹುದು' ಎಂದು ಹೇಳಿದ್ದಾರೆ.

Disqualified MLAs may start new political party: Jagadish Shettar

ಹದಿನೇಳು ಶಾಸಕರು ಅನರ್ಹರಾಗಿದ್ದು, ಅವರೆಲ್ಲರೂ ಸೇರಿ ಹೊಸದೊಂದು ಪಕ್ಷ ಕಟ್ಟುವ ಯೋಚನೆಯಲ್ಲಿದ್ದಾರೆಯೇ ಎಂಬ ಅನುಮಾನವನ್ನು ಜಗದೀಶ್ ಶೆಟ್ಟರ್ ಅವರು ಹೇಳಿಕೆ ಹುಟ್ಟುಹಾಕಿದೆ.

ಅನರ್ಹರಾಗಿರುವ ಅವರು ಸದ್ಯಕ್ಕೆ ಬಿಜೆಪಿ ಸೇರುವಂತಿಲ್ಲ, ಸಚಿವರೂ ಆಗುವಂತಿಲ್ಲ. ಹಾಗೆಯೇ ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಸೇರುವ ಸಾಧ್ಯಕ್ಕೆ ದೂರ-ದೂರಕ್ಕೂ ಇಲ್ಲ. ಹಾಗಾಗಿ ಅವರು ಹೊಸ ಪಕ್ಷದ ಸ್ಥಾಪನೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಅನರ್ಹ ಶಾಸಕರು ಪ್ರಸ್ತುತ ಅನರ್ಹತೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆದು ತೀರ್ಪು ಬಂದ ನಂತರವಷ್ಟೆ ಅನರ್ಹ ಶಾಸಕರ ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

English summary
Disqualified MLAs of Karnataka were not in BJP's contact they may start a new political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X