ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷದಲ್ಲಿ ಅನರ್ಹ ಶಾಸಕರ ಆದಾಯ ಎಷ್ಟು ಹೆಚ್ಚಳವಾಗಿದೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಕೇವಲ ಒಂದೂವರೆ ವರ್ಷದಲ್ಲಿ ಅನರ್ಹ ಶಾಸಕರ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕೆಲವು ಅನರ್ಹರ ಆಸ್ತಿಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದರೆ, ಕೆಲವು ಅನರ್ಹರದ್ದು ಸಾಮಾನ್ಯ ಏರಿಕೆ ಆಗಿದೆ ಕೆಲವರ ಆಸ್ತಿ ಇಳಿಕೆಯೂ ಆಗಿದೆ.

ಈಗ ಅನರ್ಹಗೊಂಡಿರುವ ಎಲ್ಲರೂ 2018 ಏಪ್ರಿಲ್-ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನು ಸಲ್ಲಿಸಿದ್ದರು. ಅಂತೆಯೇ ಈಗಲೂ ಉಪಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ, ಆಸ್ತಿ ವಿವರವನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸಿರುವ 13 ಅನರ್ಹ ರ ಆಸ್ತಿ 2018 ರ ಚುನಾವಣೆ ಸಮಯದಲ್ಲಿ ಎಷ್ಟಿತ್ತು. 2019 ರ ವೇಳೆಗೆ ಅಂದರೆ ಕೇವಲ ಒಂದು ವರ್ಷದಲ್ಲಿ ಎಷ್ಟು ಹೆಚ್ಚಳವಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಹೊಸಕೋಟೆ ಕದನ; ಕೋಟ್ಯಾಧಿಪತಿಗಳ ಹೋರಾಟ!ಹೊಸಕೋಟೆ ಕದನ; ಕೋಟ್ಯಾಧಿಪತಿಗಳ ಹೋರಾಟ!

ಮಹಾಲಕ್ಷ್ಮಿ ಲೇಔಟ್‌ ನಿಂದ ಸ್ಪರ್ಧಿಸಿರುವ ಕೆ.ಗೋಪಾಲಾಯ್ಯ ಅವರು 2018 ರಲ್ಲಿ ನೀಡಿದ್ದ ಮಾಹಿತಿಯಂತೆ ಅವರ ಆಸ್ತಿ 10 ಕೋಟಿ ಇತ್ತು. ಈಗ ನೀಡಿರುವ ಮಾಹಿತಿ ಪ್ರಕಾರ ಅವರ ಆಸ್ತಿ 17 ಕೋಟಿ ಕೇವಲ ಒಂದು ವರ್ಷದಲ್ಲಿ 7 ಕೋಟಿ ಆಸ್ತಿ ಹೆಚ್ಚಳವಾಗಿದೆ.

ಸೋಮಶೇಖರ್ ಆಸ್ತಿ ಹೆಚ್ಚೆಷ್ಟಾಗಿದೆ?

ಸೋಮಶೇಖರ್ ಆಸ್ತಿ ಹೆಚ್ಚೆಷ್ಟಾಗಿದೆ?

ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಸಿ.ಪಾಟೀಲ್ ಹಾಗೂ ಅವರ ಪತ್ನಿಯ ಆಸ್ತಿ ಒಟ್ಟಾಗಿ 2018 ರಲ್ಲಿ 5.93 ಕೋಟಿ ಇತ್ತು. ಆದರೆ ಒಂದೇ ವರ್ಷದಲ್ಲಿ ಅವರ ಆಸ್ತಿ 8.59 ಕೋಟಿ ಆಗಿದೆ. ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್‌.ಟಿ.ಸೋಮಶೇಖರ್ ಆಸ್ತಿ 2018 ರಲ್ಲಿ 8.4 ಕೋಟಿ ಇತ್ತು. ಈಗಲೂ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ. ಆದರೆ ಅವರ ಪತ್ನಿ ಮತ್ತು ಪುತ್ರ ಆಸ್ತಿಯಲ್ಲಿ ಒಟ್ಟು ಎರಡು ಕೋಟಿಗಳಷ್ಟು ಏರಿಕೆ ಆಗಿದೆ.

ಎಂಟಿಬಿ ನಾಗರಾಜ್ ಆಸ್ತಿಯಲ್ಲಿ ಹೆಚ್ಚಳ

ಎಂಟಿಬಿ ನಾಗರಾಜ್ ಆಸ್ತಿಯಲ್ಲಿ ಹೆಚ್ಚಳ

ಎಂಟಿಬಿ ಮತ್ತು ಅವರ ಪತ್ನಿ ಶಾಂತಕುಮಾರಿ ಅವರ ಒಟ್ಟು ಆಸ್ತಿ 1,201.50 ಕೋಟಿ ರೂ. ಎನ್ನುತ್ತದೆ ಇತ್ತೀಚಿನ ಅಫಿಡವಿಟ್. ಅವರು 2018ರ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಸಲ್ಲಿಸಿದ್ದ ಅಫಿಡವಿಡ್‌ಗೆ ಹೋಲಿಸಿದರೆ ಇದು ಶೇ 15.5ರಷ್ಟು ಸಂಪತ್ತು ಪ್ರಮಾಣ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ.

ಮಹಾ ಚುನಾವಣೆಯಲ್ಲಿ ಅತಿ ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಈ ಸ್ಪರ್ಧಿಮಹಾ ಚುನಾವಣೆಯಲ್ಲಿ ಅತಿ ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಈ ಸ್ಪರ್ಧಿ

ಆನಂದ್ ಸಿಂಗ್ ಆಸ್ತಿಯಲ್ಲಿ ಹೆಚ್ಚಳವಾಗಿದೆ

ಆನಂದ್ ಸಿಂಗ್ ಆಸ್ತಿಯಲ್ಲಿ ಹೆಚ್ಚಳವಾಗಿದೆ

ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 'ಅನರ್ಹ' ಆನಂದ್ ಸಿಂಗ್ ಅವರ 2018 ರ ಆಸ್ತಿ 71 ಕೋಟಿ ಇತ್ತು ಅವರ ಆಸ್ತಿಯ ಮೌಲ್ಯ 104 ಕೋಟಿ. ಆನಂದ್ ಸಿಂಗ್ ಒಂದು ವರ್ಷದಲ್ಲಿ 12 ಕೋಟಿ ಸಾಲ ಮಾಡಿರುವುದು ಆಸ್ತಿ ವಿವರದಿಂದ ಗೊತ್ತಾಗಿದೆ.

ಸಾಹುಕಾರ್ ರಮೇಶ್ ಆಸ್ತಿ ಗಣನೀಯ ಇಳಿಕೆ

ಸಾಹುಕಾರ್ ರಮೇಶ್ ಆಸ್ತಿ ಗಣನೀಯ ಇಳಿಕೆ

ಬೆಳಗಾವಿಯ ಗೋಖಾಕ್‌ ನಿಂದ ಕಣಕ್ಕೆ ಇಳಿದಿರುವ ರಮೇಶ್ ಜಾರಕಿಹೊಳಿ ಅವರ ಆಸ್ತಿಯಲ್ಲಿ ಭಾರಿ ಇಳಿಕೆ ಆಗಿದೆ. 2018 ರಲ್ಲಿ ಇವರ ಆಸ್ತಿ 122 ಕೋಟಿ ಇತ್ತು. ಆದರೆ ಒಂದೇ ವರ್ಷದಲ್ಲಿ 32 ಕೋಟಿ ಕಳೆದುಕೊಂಡು 90 ಕೋಟಿಗೆ ಬಂದಿದೆ.

ಸುಧಾಕರ್ ಆಸ್ತಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ

ಸುಧಾಕರ್ ಆಸ್ತಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಸುಧಾಕರ್ ಅವರು 2018 ರ ವೇಳೆ ತಮ್ಮ ಬಳಿ 3.37 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. ಆದರೆ ಈಗ ಅವರ ಆಸ್ತಿ 2.68 ಕೋಟಿ. ಆದರೆ ಅವರ ಪತ್ನಿಯ ಹೆಸರನಲ್ಲಿನ ಆಸ್ತಿ ಮೌಲ್ಯ 3 ಕೋಟಿ ಏರಿಕೆ ಆಗಿದೆ.

ಬೈರತಿ ಬಸವರಾಜು ಆಸ್ತಿಯಲ್ಲಿ ಹೆಚ್ಚವೆಷ್ಟು?

ಬೈರತಿ ಬಸವರಾಜು ಆಸ್ತಿಯಲ್ಲಿ ಹೆಚ್ಚವೆಷ್ಟು?

ಕೆ.ಆರ್.ಪುರಂ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಬೈರತಿ ಬಸವರಾಜು ಅವರ ಆಸ್ತಿಯಲ್ಲಿ ಕೇವಲ ಎರಡು ಕೋಟಿ ಹೆಚ್ಚಳವಾಗಿದೆ. 2018 ರಲ್ಲಿ ಅವರ ಆಸ್ತಿ 91 ಕೋಟಿ ಇತ್ತು. ಈಗ ಅವರ ಆಸ್ತಿ 93 ಕೋಟಿ ಆಗಿದೆ. ಅವರ ಪತ್ನಿಯ ಆಸ್ತಿ ಹೆಚ್ಚಳವಾಗಿದೆ.

ಎಚ್.ವಿಶ್ವನಾಥ್ ಆಸ್ತಿಯಲ್ಲಿ ಹೆಚ್ಚಳ

ಎಚ್.ವಿಶ್ವನಾಥ್ ಆಸ್ತಿಯಲ್ಲಿ ಹೆಚ್ಚಳ

ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಎಚ್.ವಿಶ್ವನಾಥ್ ಅವರ ಆಸ್ತಿಯಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ. 2018 ರಲ್ಲಿ ಅವರ ಆಸ್ತಿ 2.39 ಕೋಟಿ ಇತ್ತು. ಈಗ ಅವರ ಆಸ್ತಿ 2.87 ಕೋಟಿ ಇದೆ. ಅವರ ಪತ್ನಿಯ ಆಸ್ತಿ ಕೆಲವು ಲಕ್ಷಗಳು ಹೆಚ್ಚಾಗಿವೆ.

ನಾರಾಯಣಗೌಡ ಆಸ್ತಿ ಎಷ್ಟು ಹೆಚ್ಚಳವಾಗಿದೆ?

ನಾರಾಯಣಗೌಡ ಆಸ್ತಿ ಎಷ್ಟು ಹೆಚ್ಚಳವಾಗಿದೆ?

ಕೆ.ಆರ್.ಪುರಂ ನಿಂದ ಸ್ಪರ್ಧಿಸಿರುವ ನಾರಾಯಣಗೌಡ ಅವರ ಆಸ್ತಿ 2018 ರಲ್ಲಿ 11.97 ಕೋಟಿ ಇತ್ತು. ಪತ್ನಿ ಮತ್ತು ಮಕ್ಕಳ ಆಸ್ತಿ ಸೇರಿಸಿ 20.92 ಕೋಟಿ ಆಸ್ತಿ ಇತ್ತು. ಈಗ ಅವರ ಆಸ್ತಿ ಮೌಲ್ಯದಲ್ಲಿ ಇಳಿಕೆ ಆಗಿರುವಂತೆ ನಾಮಪತ್ರದೊಂದಿಗೆ ನೀಡಿರುವ ಆಸ್ತಿ ವಿವರದಲ್ಲಿ ನಮೂದಿಸಲಾಗಿದೆ. ವಿವರದ ಪ್ರಕಾರ ನಾರಾಯಣಗೌಡ ಆಸ್ತಿಯಲ್ಲಿ ನಾಲ್ಕು ಕೋಟಿ ಇಳಿಕೆ ಆಗಿದೆ.

ಶ್ರೀಮಂತ ಪಾಟೀಲ್ ಆಸ್ತಿ ವಿವರ

ಶ್ರೀಮಂತ ಪಾಟೀಲ್ ಆಸ್ತಿ ವಿವರ

ಕಾಗವಾಡ ಬಿಜೆಪಿ ಅಭ್ಯರ್ಥಿ 'ಅನರ್ಹ' ಶ್ರೀಮಂತ ಪಾಟೀಲ್ ಹಾಗೂ ಅವರ ಪತ್ನಿಯ ಆಸ್ತಿ 30.45 ಕೋಟಿ ಇದೆ. ಈ ಹಿಂದೆ 2018 ರಲ್ಲೂ ಸಹ ಬಹುತೇಕ ಇಷ್ಟೇ ಆಸ್ತಿಯನ್ನು ಇವರು ಹೊಂದಿದ್ದರು.

English summary
Karnataka disqualified MLAs asset raised in last 18 months. some MLAs asset decreased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X