ಫೇಸ್ ಬುಕ್ ನಲ್ಲಿ ಅವಹೇಳನಾಕರಿ ಪೋಸ್ಟ್: ಹಂಪಿ ವಿವಿ ಅಧೀಕ್ಷಕ ಅರೆಸ್ಟ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ, ಮೇ 13: ಫೇಸ್ ಬುಕ್ ನಲ್ಲಿ ಅಕ್ಕಮಹಾದೇವಿ, ಕಿತ್ತೂರು ಚೆನ್ನಮ್ಮರಂಥ ಮಹಾನ್ ಮಹಿಳೆಯರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬಳ್ಳಾರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧೀಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮತ್ತೊಬ್ಬರನ್ನು ತೇಜೋವಧೆ ಮಾಡುವ ಕೃತ್ಯ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದೂ ಅದರದೇ ಒಂದು ಭಾಗವಾಗಿದೆ. [ಫೇಸ್ಬುಕ್ ನಲ್ಲಿ ಅವಹೇಳನಕಾರಿ ಚಿತ್ರ: ಸಿಕ್ಕಿಬಿದ್ದ ಹುಣಸೂರಿನ ಯುವಕ]

Disgraceful posts on FB: Superintendent of Hampi Kannada university has arrested

ಹಂಪಿ ಕನ್ನಡ ವಿವಿಯ ಅಧೀಕ್ಷಕ ಎಚ್.ಎಂ.ಸೋಮನಾಥ್ ತಮ್ಮ ಫೇಸ್ ಬುಕ್ ಪುಟದಲ್ಲಿ ಕಿತ್ತೂರು ಚೆನ್ನಮ್ಮ ಅವರನ್ನು ಕತ್ತರಿ ಚೆನ್ನಮ್ಮ ಎಂದೂ, ಅಕ್ಕ ಮಹಾದೇವಿ ಅವರನ್ನು ಅಕ್ರಮ ಮಹಾದೇವಿ ಎಂದೂ ಕರೆದಿದ್ದರು.

ಮಹಾನ್ ವ್ಯಕ್ತಿಗಳ ಕುರಿತು ಫೇಸ್ ಬುಕ್ಕಿನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರಿಂದ ಅವರನ್ನು ಬಳ್ಳಾರಿಯ ಕಮಲಾಪುರ ಪೊಲೀಸರು ಬಂಧಿಸಿದ್ದಾರೆ. ಸೋಮನಾಥ್ ಅವರು ಕೇವಲ ಕಿತ್ತೂರು ಚೆನ್ನಮ್ಮ, ಅಕ್ಕಮಹಾದೇವಿ ಅವರನ್ನು ಮಾತ್ರವಲ್ಲದೆ, ಸಚಿವೆ ಉಮಾಶ್ರಿ ಅವರನ್ನೂ ಉಪಮಾಶ್ರಿ ಎಂದು ಕರೆದು ಪೋಸ್ಟ್ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Superintendent of Hampi Kannada university has arrested in Bellary today. He has posted disgraceful thouhts on Akkamahadevi, the great poet and social reformer of Vachana movement and Kittur Chennamma in his facebook wall.
Please Wait while comments are loading...