• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಜಾಣ'ರ ಮನೆಯೀಗ 'ಕೋಣ'ರ ಮನೆಯಾಗಿದೆ: ಕೆ.ಬಿ. ಕೋಳಿವಾಡ!

|

ಬೆಂಗಳೂರು, ಡಿ. 16: ನಿನ್ನೆ ಡಿಸೆಂಬರ್ 15 ರಂದು ನಡೆದ ಘಟನೆಗಳು ರಾಜ್ಯ ವಿಧಾನ ಪರಿಷತ್ ಅಗತ್ಯತೆಯನ್ನೇ ಪ್ರಶ್ನೆ ಮಾಡಿವೆ. ನಿನ್ನೆಯ ಅಸಾಂವಿಧಾನಿಕ ಘಟನಾವಳಿಗಳ ನಂತರ ವಿಧಾನ ಪರಿಷತ್ ಇರಬೇಕೊ? ಬೇಡವೋ? ಎಂಬ ಚರ್ಚೆಗಳು ಮತ್ತೆ ಶುರುವಾಗಿವೆ. ಹಾಗೆ ನೋಡಿದರೆ ವಿಧಾನ ಪರಿಷತ್‌ನ್ನು ಬರ್ಕಾಸ್ತು ಮಾಡುವ ಚರ್ಚೆ ಇಂದು ನಿನ್ನೆಯದಲ್ಲ. ರಾಜ್ಯದಲ್ಲಿ ವಿಧಾನ ಪರಿಷತ್ ಬೇಕೊ? ಬೇಡವೋ? ಎಂಬ ಚರ್ಚೆ ಈ ಹಿಂದೆ ವಿಧಾನಸಭೆಯಲ್ಲಿಯೂ ನಡೆದಿತ್ತು. ವಿಧಾನ ಪರಿಷತ್ ವಿಸರ್ಜನೆಗೊಳಿಸುವಂತೆ ವಿಧಾನಸಭೆಯ ಸದಸ್ಯರೊಬ್ಬರು ಖಾಸಗಿ ನಿರ್ಣಯವನ್ನೂ ಮಂಡಿಸಿದ್ದರು.

ವಿಧಾನ ಪರಿಷತ್ ಎಂದರೆ ಅದು ಬುದ್ಧಿ ಜೀವಿಗಳ ಮನೆ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಆ ಸದನದ ಸದಸ್ಯರಿಗೆ ವಿಧಾನಸಭೆಯ ಸದಸ್ಯರಿಗಿಂತ ಒಂದಿಷ್ಟು ಹೆಚ್ಚಿನ ಗೌರವವೂ ಸಮಾಜದಲ್ಲಿತ್ತು. ಆದರೆ ನಿನ್ನೆ ನಡೆದಿರುವ ಘಟನೆಯಿಂದ ಜಾಣರ ಮನೆ ಈಗ ಕೋಣರ ಮನೆಯಾಗಿದೆ ಎಂಬ ಮಾತುಗಳನ್ನು ಹಿರಿಯ ರಾಜಕಾರಣಿಗಳೇ ಹೇಳುತ್ತಿದ್ದಾರೆ. ಇಡೀ ದೇಶದ ಜನತೆಯ ಎದುರು ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿರುವ ಮೇಲ್ಮನೆಗೆ ವರ್ಷವೊಂದಕ್ಕೆ ಎಷ್ಟು ಹಣ ವ್ಯಯಿಸಲಾಗುತ್ತಿದೆ? ಅವರು ಮಾಡುವ ಕೆಲಸಗಳು ಏನು? ಎಂಬುದನ್ನು ಖಾಸಗಿ ವಿಧೇಯಕ ಮಂಡನೆ ಮಾಡಿದ್ದ ಜೆಡಿಎಸ್ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರು 'ಒನ್‌ಇಂಡಿಯಾ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ.

ವಿಧಾನ ಪರಿಷತ್ ಅಪ್ರಸ್ತುತ

ವಿಧಾನ ಪರಿಷತ್ ಅಪ್ರಸ್ತುತ

ಮೇಲ್ಮನೆ (ವಿಧಾನಪರಿಷತ್) ಎಂದರೆ ಅದು ಕೇಳಮನೆ (ವಿಧಾನಸಭೆ)ಯಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಲು ಮೇಲ್ಮನೆ ಅಗತ್ಯ ಎಂಬ ಮಾತುಗಳಿದ್ದವು. ಆದರೆ ಮೇಲ್ಮನೆ ಸದಸ್ಯರ ನಡೆಯನ್ನು ನೋಡಿರುವ ಹಿರಿಯ ರಾಜಕಾರಣಿಗಳು ಈಗ ಮೇಲ್ಮನೆಯ ಪ್ರಸ್ತುತತೆಯನ್ನೇ ಪ್ರಶ್ನೆ ಮಾಡಿದ್ದಾರೆ. ಈ ಕುರಿತು 'ಒನ್ಇಂಡಿಯಾ ಕನ್ನಡ'ಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು, ನಿನ್ನೆ ನಡೆದಿರುವ ಗದ್ದಲವನ್ನು ನೋಡಿದರೆ ವಿಧಾನ ಪರಿಷತ್ ಇರಬೇಕೊ? ಬೇಡವೋ? ಎಂಬುದು ಎಲ್ಲರ ಮನಸ್ಸಿನಲ್ಲಿ ಬರುತ್ತಿದೆ ಎಂದಿದ್ದಾರೆ.

ವಿಧಾನ ಪರಿಷತ್ ಅಪ್ರಸ್ತುತ

ವಿಧಾನ ಪರಿಷತ್ ಅಪ್ರಸ್ತುತ

ಮೇಲ್ಮನೆ (ವಿಧಾನಪರಿಷತ್) ಎಂದರೆ ಅದು ಕೇಳಮನೆ (ವಿಧಾನಸಭೆ)ಯಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಲು ಮೇಲ್ಮನೆ ಅಗತ್ಯ ಎಂಬ ಮಾತುಗಳಿದ್ದವು. ಆದರೆ ಮೇಲ್ಮನೆ ಸದಸ್ಯರ ನಡೆಯನ್ನು ನೋಡಿರುವ ಹಿರಿಯ ರಾಜಕಾರಣಿಗಳು ಈಗ ಮೇಲ್ಮನೆಯ ಪ್ರಸ್ತುತತೆಯನ್ನೇ ಪ್ರಶ್ನೆ ಮಾಡಿದ್ದಾರೆ. ಈ ಕುರಿತು 'ಒನ್ಇಂಡಿಯಾ ಕನ್ನಡ'ಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು, ನಿನ್ನೆ ನಡೆದಿರುವ ಗದ್ದಲವನ್ನು ನೋಡಿದರೆ ವಿಧಾನ ಪರಿಷತ್ ಇರಬೇಕೊ? ಬೇಡವೋ? ಎಂಬುದು ಎಲ್ಲರ ಮನಸ್ಸಿನಲ್ಲಿ ಬರುತ್ತಿದೆ ಎಂದಿದ್ದಾರೆ.

ಕೋಣರ ಮನೆಯಾಗಿದೆ

ಕೋಣರ ಮನೆಯಾಗಿದೆ

ತಿಳುವಳಿಕೆ ಇದ್ದವರು ವಿಧಾನಪರಿಷತ್‌ಗೆ ಆಯ್ಕೆಯಾಗುತ್ತಿದ್ದರು. ಈಗ ರಾಜಕೀಯವಾಗಿ ತಿಳುವಳಿಕೆ ಇಲ್ಲದ ಹುಡುಗರನ್ನು ನೇಮಕ ಮಾಡಲಾಗುತ್ತಿದೆ. ಬುದ್ಧವಂತರ, ಜಾಣರ ಮನೆ ನಿನ್ನೆ ಕೋಣರ ಮನೆಯಾಗಿದೆ. ಅದು ಬಹಳ ವಿಷಾದನೀಯ. ನಿನ್ನೆಯ ಘಟನೆಯಿಂದ ಅದು ಬೇಕಾ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಮೇಲ್ಮನೆ ಒಳ್ಳೆಯ ದೃಷ್ಟಿಯಿಂದ ಇರಬೇಕು. ಹೀಗೆ ಇರಬಾರದು. ಅದನ್ನು ಬರ್ಕಾಸ್ತು ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ಆಂಧ್ರಪ್ರದೇಶದಲ್ಲಿ ವಿಧಾನಸಭೆ ವಿಸರ್ಜನೆಗೆ ಅಲ್ಲಿನ ಸಿಎಂ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಹೇಳಿದ್ದಾರೆ.

ಖಾಸಗಿ ನಿರ್ಣಯ ಮಂಡನೆ

ಖಾಸಗಿ ನಿರ್ಣಯ ಮಂಡನೆ

ಒಟ್ಟಾರೆ ಈ ವಿಧಾನ ಪರಿಷತ್‌ ಬೇಕಾಗಿಲ್ಲ ಎಂದು ತುರುವೇಕೆರೆ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರು 'ಒನ್‌ಇಂಡಿಯಾ ಕನ್ನಡ'ದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಹಿಂದೆ 2015ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆ ವಿಸರ್ಜನೆ ಮಾಡಬೇಕು ಎಂದು ಖಾಸಗಿ ನಿರ್ಣಯವನ್ನು ಆಗ ಶಾಸಕರಾಗಿದ್ದ ಎಂ.ಟಿ. ಕೃಷ್ಣಪ್ಪ ಅವರು ಮಂಡಿಸಿದ್ದರು.

  ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ Modi ಯವರ ಶುಭಹಾರೈಕೆಗಳು | Oneindia Kannada
  ನಾನ್ನೂರು ಕೋಟಿ ರೂ. ಖರ್ಚು

  ನಾನ್ನೂರು ಕೋಟಿ ರೂ. ಖರ್ಚು

  ಸಂವಿಧಾನದಲ್ಲಿ ವಿಧಾನ ಪರಿಷತ್ ಇರಬೇಕು ಅಂತಾ ಇಲ್ಲ. ರಾಜ್ಯಸಭೆಗೆ ಮಾತ್ರ ಸಾಂವಿಧಾನಿಕ ಮಾನ್ಯತೆಯಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಪರಿಷತ್ ಇಲ್ಲ. ಇದು ರಾಜಕೀಯ ನಿರಾಶ್ರಿತರಿಗೆ ಪುನರ್ವಸತಿ ಕೇಂದ್ರದಂತೆ ಆಗಿದೆ. ಇದೊಂದು ವ್ಯಾಪಾರೀಕರಣದ ಸಂತೆಯಾಗಿದೆ. ಅದರಿಂದ ವರ್ಷಕ್ಕೆ 350-400 ಕೋಟಿ ರೂ. ಹಣವನ್ನು ಸರ್ಕಾರ ವ್ಯಯಿಸುತ್ತದೆ. ಜೊತೆಗೆ ಅಲ್ಲಿ ಯಾವುದೇ ಚರ್ಚೆ ಆಗುವುದಿಲ್ಲ. ಅಲ್ಲಿ ವಿಧೇಯಕಕ್ಕೆ ಸೋಲಾದರೂ ವಿಧಾನಸಭೆಯಲ್ಲಿ ಮತ್ತೆ ಪಾಸ್ ಮಾಡಿಕೊಳ್ಳಬಹುದು. ಹೀಗಾಗಿ ವಿಧಾನಪರಿಷತ್‌ಗೆ ಯಾವುದೇ ಪಾವಿತ್ರ್ಯವಿಲ್ಲ ಎಂದು ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ವಿವರಿಸಿದರು.

  English summary
  Due to the commotion in the Legislative Council should the council be necessary? Discussions Have Begun Again On Dissolution of Legislative Council. Here is the opinion of senior politicians.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X