ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿ ಸಾವಿನ ಕುರಿತು ಯೋಗರಾಜ್ ಭಟ್ ಬರೆದ ಮನಮಿಡಿಯುವ ಪತ್ರ

|
Google Oneindia Kannada News

ರಾಯಚೂರು, ಏಪ್ರಿಲ್ 20: ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾದ ಚರ್ಚೆ ನಡೆಯುತ್ತಿದೆ. ಆದರೆ ಸುದ್ದಿ ಮಾಧ್ಯಮಗಳಲ್ಲಿ ಮಹತ್ವ ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಮಿಗಿಲಾಗಿ ರಾಜಕಾರಣಿಗಳು ಇಂತಹ ಗಂಭೀರ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ನಡುವೆ ಸಿನಿಮಾ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್, ಹೇಯ ಕೃತ್ಯಕ್ಕೆ ಬಲಿಯಾದ ಯುವತಿ ಕುರಿತು ಮನಮಿಡಿಯುವ ಪತ್ರ ಬರೆದಿದ್ದಾರೆ. ದೆಹಲಿಯಲ್ಲಿ ನಡೆದ ಘಟನೆಗೆ ಇದೇ ದೇಶ ಖಂಡನೆ ವ್ಯಕ್ತಪಡಿಸಿತ್ತು. ಆದರೆ, ನಮ್ಮ ರಾಜ್ಯದಲ್ಲಿಯೇ ನಡೆದ ಘಟನೆಗೆ ಬೆಂಗಳೂರು ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ ಎಂದು ಅವರು ವಿಷಾದಿಸಿದ್ದಾರೆ. ಬೆಂಗಳೂರಿಗರ ಆಲಸ್ಯದ ಕುರಿತ ಆಕ್ರೋಶ, ಕೋಪ, ಎಳೆಯ ಜೀವದ ಸಾವಿನ ನೋವು ಅವರ ಪತ್ರದಲ್ಲಿ ವ್ಯಕ್ತವಾಗಿದೆ.

Array

ಯೋಗರಾಜ್ ಭಟ್ಟರ ಪತ್ರದ ಪೂರ್ಣ ಪಠ್ಯ

ವಿಕೃತನೊಬ್ಬನ ಕೆಲಸಕ್ಕೆ ಹೂವೊಂದು ಸುಟ್ಟುಹೋಗಿದೆ. ಎಲ್ಲ ಕಡೆಗೆ ಮರುಕ ಮಡುಗಟ್ಟುತ್ತಿದೆ 'ಮಧು' ಎಂಬ ಅಮಾಯಕಿಯ ಕೊಲೆಗೆ. ಇದೇ ರೀತಿಯ ಕೃತ್ಯ ದೆಹಲಿಯಲ್ಲಿ ನಡೆದಾಗ ಇಡೀ ಭಾರತ ಕೂಗಿತು. ಆದರೆ ನಮ್ಮ ರಾಜಧಾನಿ ಬೆಂಗಳೂರು ಮಾತ್ರ ಮೊನ್ನೆಯಿಂದಲೂ ಪ್ರತಿಕ್ರಿಯೆ ನೀಡಲು, ಮಾತನಾಡಲು ಮನಸ್ಸು ಮಾಡುತ್ತಿಲ್ಲ.


ಹೋಗಲಿ ಏನೋ ವೋಟು ಹಾಕುವ ಕೆಲಸ ಇತ್ತು ಅನ್ನುವುದಾದರೆ ಅದೂ ಇಲ್ಲ. 45% ಜನ ಮಾತ್ರ ಮತ ಹಾಕಿದ್ದಾರೆ. ಬಾಕಿ ಜನರು ದಿವ್ಯ ನಿದ್ದೆಯಲ್ಲಿದ್ದಾರಾ? ಯಾರು ಎಬ್ಬಿಸುವುದು ಇವರನ್ನು? ಮಧು ಆತ್ಮಕ್ಕೆ ನೆಮ್ಮದಿ ಕೊಡುವುದು ಪ್ರತಿಯೊಬ್ಬರ ಕರ್ತವ್ಯ ಅಲ್ಲವೇ? ಯಾರ ಮನೆಯ ಮಗುವಾದರೇನು ಸಾವೆಂಬ ಸಂಕಟ ಎಲ್ಲರಿಗು ತೀವ್ರವಾಗಿ ಕಾಡಬೇಕಲ್ಲವೇ?

ದಯಮಾಡಿ ಈ ಮಾನಭಂಗ ಕೊಲೆಯಂತಹ ವಿಕೃತಿಗಳನ್ನು ತೊಡೆಯಲು ತಡವಾದರೂ ಪರವಾಗಿಲ್ಲ ಕೊನೇ ಪಕ್ಷ ಪ್ರತಿಕ್ರಿಯಿಸಿ. ಒಂದೇ ದನಿಯಲ್ಲಿ ಒಂಚೂರು ಆವೇಶದಲ್ಲಿ ಭವಿಷ್ಯದ ಹೂವುಗಳನ್ನು ಸುಡಲು ಬರುವ ಬೆಂಕಿಯನ್ನು ಒಂದೇ ಒಂದು 'ಕಿಡಿ' ಕೂಡ ಉಳಿಯದಂತೆ ನಂದಿಸಲು ಮುಂದಾಗಿ...

ಮಧು...
ಕಂದಮ್ಮ...
ನಿಂಗೆ ನ್ಯಾಯ ನೀ ಇಲ್ಲದಿದ್ದರೂ ಸಿಗಲಿ...
ಹೋಗಿ ಬಾ ತಾಯಿ...

- ಯೋಗರಾಜ್ ಭಟ್

ರಾಯಚೂರಿನಲ್ಲಿ ವಿದ್ಯಾರ್ಥಿನಿಯ ನಿಗೂಢ ಸಾವು, ಕಟ್ಟೆಯೊಡೆದ ಆಕ್ರೋಶ ರಾಯಚೂರಿನಲ್ಲಿ ವಿದ್ಯಾರ್ಥಿನಿಯ ನಿಗೂಢ ಸಾವು, ಕಟ್ಟೆಯೊಡೆದ ಆಕ್ರೋಶ

ತಕ್ಕ ಶಿಕ್ಷೆಗೆ ದರ್ಶನ್ ಆಗ್ರಹ

ತಕ್ಕ ಶಿಕ್ಷೆಗೆ ದರ್ಶನ್ ಆಗ್ರಹ

ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು ಎಂದು ನಟ ದರ್ಶನ್ ತೂಗುದೀಪ ಆಗ್ರಹಿಸಿದ್ದಾರೆ.

ರಾಯಚೂರು ವಿದ್ಯಾರ್ಥಿನಿ ಸಾವು, ಅನುಮಾನಕ್ಕೆ ಕಾರಣವಾದ ಅಂಶಗಳು ರಾಯಚೂರು ವಿದ್ಯಾರ್ಥಿನಿ ಸಾವು, ಅನುಮಾನಕ್ಕೆ ಕಾರಣವಾದ ಅಂಶಗಳು

ಪೊಲೀಸರು ದೂರು ಸ್ವೀಕರಿಸಿರಲಿಲ್ಲ

ಪೊಲೀಸರು ದೂರು ಸ್ವೀಕರಿಸಿರಲಿಲ್ಲ

ಮಧುವಿಗೆ ಕಿರುಕುಳ ಕೊಟ್ಟು, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಇಂಟರ್ನಲ್ ಬರೆಯುತ್ತೇನೆ ಎಂದು ಮಗಳು ಏ. 13ರಂದು ಕಾಲೇಜಿಗೆ ತೆರಳಿದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಯುವಕನಿಬ್ಬ ಇದ್ದಕ್ಕಿದ್ದಂತೆ ಮನೆ ಹತ್ತಿರ ಬಂದು ಹೋಗಿದ್ದ. ಅನುಮಾನ ಬಂದು ಕೂಡಲೇ ಕಾಲೇಜಿಗೆ ಮಧುವಿನ ತಂದೆ ಹೋಗಿ ಹುಡುಕಿದಾಗ ಆಕೆ ಸಿಗಲಿಲ್ಲ. ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೂ ಅದನ್ನು ತೆಗೆದುಕೊಳ್ಳಲಿಲ್ಲ. ಈಗ ಬಂಧಿಸಿರುವ ಆರೋಪಿ ಸುದರ್ಶನನ ಮಾವ ಆಂಜನೇಯ ಅದೇ ಠಾಣೆಯಲ್ಲಿದ್ದರು. ಅವರೇ ನಮಗೆ ಸಮಾಧಾನ ಹೇಳಿದ್ದರು. ಶವ ಪತ್ತೆಯಾದ ಬಳಿಕವೇ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಎಂದು ಆರೋಪಿಸಿದರು.

ಸಾವು ತಡೆಯಬಹುದಾಗಿತ್ತೇ?

ಸಾವು ತಡೆಯಬಹುದಾಗಿತ್ತೇ?

ಶವ ಪತ್ತೆಯಾದ ದಿನ ಸೋಮವಾರ ಬೆಳಿಗ್ಗೆ ಆಂಜನೇಯ ಅವರು ಮಗಳ ಸ್ಕೂಟಿ ಮತ್ತು ಮೊಬೈಲ್ ತಂದುಕೊಟ್ಟರು. ಸುದರ್ಶನ ಇವುಗಳನ್ನು ಕೊಟ್ಟಿದ್ದಾನೆ ಎಂದು ತಿಳಿಸಿದ್ದರು. ಮಧು ಆತ್ಮಹತ್ಯೆ ಮಾಡಿಕೊಂಡಿದ್ದರೆ ಅವಳ ಸ್ಕೂಟರ್ ಮತ್ತು ಮೊಬೈಲ್ ಸುದರ್ಶನನ ಬಳಿ ಹೇಗೆ ಬಂತು? ಮಧು ಎಸ್ಸೆಸ್ಸೆಲ್ಸಿ ಬಳಿಕ ಕನ್ನಡ ಬರೆಯುವುದನ್ನೇ ಬಿಟ್ಟಿದ್ದಳು. ಆದರೂ ಅವಳು ಡೆತ್ ನೋಟ್‌ಅನ್ನು ಕನ್ನಡ ಹೇಗೆ ಬರೆಯಲು ಸಾಧ್ಯ? ಮಧು ಕಾಣೆಯಾದ ದೂರನ್ನು ಮೊದಲೇ ಸ್ವೀಕರಿಸಿದ್ದರೆ ಆಕೆಯ ಸಾವನ್ನು ತಡೆಯಬಹುದಾಗಿತ್ತು ಎಂದು ಹೇಳಿದರು.

English summary
Kannada director, lyricist Yograj Bhat wrote a letter on suspected death Engineering student Madhu Pattar. He expressed his anguish and unhappiness on Bangaloreans who does not reacted on this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X